iPhone 17: ಬಿಡುಗಡೆಗೂ ಮುನ್ನವೇ ಐಫೋನ್​ 17 ಮಾಹಿತಿ ಸೋರಿಕೆ! ಈ ಬಣ್ಣದಲ್ಲಿ ಬರೋದು ಪಕ್ಕನಾ?

author-image
AS Harshith
Updated On
iPhone 17: ಬಿಡುಗಡೆಗೂ ಮುನ್ನವೇ ಐಫೋನ್​ 17 ಮಾಹಿತಿ ಸೋರಿಕೆ! ಈ ಬಣ್ಣದಲ್ಲಿ ಬರೋದು ಪಕ್ಕನಾ?
Advertisment
  • ಐಫೋನ್​ 16 ಸರಣಿ ಬಿಡುಗಡೆಗೊಂಡು ಒಂದು ತಿಂಗಳು
  • 2025ರಲ್ಲಿ ಬಿಡುಗಡೆಗೊಳ್ಳಲಿರುವ ಐಫೋನ್​ 17 ಮಾದರಿ
  • iPhone17 ಕ್ಯಾಮೆರಾ, ಚಿಪ್​, ಬಣ್ಣ ಕುರಿತಾದ ಮಾಹಿತಿ ಇಲ್ಲಿದೆ

ಐಫೋನ್​ 16 ಸರಣಿ ಬಿಡುಗಡೆಗೊಂಡು ಒಂದು ತಿಂಗಳಾಗಿದೆ. ಸದ್ಯ ಐಫೋನ್​ 17 ಉತ್ಪಾದನೆಯಲ್ಲಿ ಆ್ಯಪಲ್​ ಕಂಪನಿ ತೊಡಗಿಸಿಕೊಂಡಿದೆ. ಹೀಗಿರುವಾಗ ಮುಂಬರುವ ನೂತನ ಐಫೊನ್​ ಕುರಿತಂತೆ ಹಲವು ಮಾಹಿತಿಗಳು ಲೀಕ್​ ಆಗುತ್ತಿವೆ. ಅದರಲ್ಲಿ ಐಫೋನ್​​ 17 ಮಾದರಿಯ ಬಣ್ಣ ಮತ್ತು ರೂಪಾಂತರದ ಬಗ್ಗೆ ಸುದ್ದಿ ಹರಿದಾಡುತ್ತಿದೆ.

ಐಫೋನ್​ 17 ಮಾದರಿಗಳು ಹಸಿರು ಬಣ್ಣದಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ. ಈ ಕುರಿತಾಗಿ ಮಜಿನ್ ಬು​ ಬ್ಲಾಗ್ ತಿಳಿಸಿದ್ದು, ಹಸಿರು ಬಣ್ಣದಲ್ಲಿ ಐಫೋನ್​ 17 ಪರಿಚಯಿಸುವ ಸಾಧ್ಯತೆ ಇದೆ. ಇದಲ್ಲದೆ, ಟೀಲ್​​ ಟೈಟಾನಿಯಂ, ಗ್ರೀನ್​ ಟೈಟಾನಿಯಂ ಮತ್ತು ಡಾರಕ್​ ಗ್ರೀನ್​​ ಟೈಟಾನಿಯಂ ಬಣ್ಣದಲ್ಲಿ ಪರಿಚಯಿಸುವ ಸಾಧ್ಯತೆಯಿದೆ’ ಎಂದಿದೆ.

ಇದನ್ನೂ ಓದಿ: Instagram Down: ಇದ್ದಕ್ಕಿದ್ದಂತೆಯೇ ಏನಾಯ್ತು? ತಲೆಕೆಡಿಸಿಕೊಂಡ ಬಳಕೆದಾರರು

ಆ್ಯಪಲ್​ ಕಂಪನಿ 2025ರಲ್ಲಿ ಐಫೋನ್​ 17 ಪರಿಚಯಿಸಲಿದೆ​​. ಪ್ರೊ ಮಾದರಿಗಳು ಹಲವು ಸುಧಾರಣೆಯನ್ನು ತರುವ ನಿರೀಕ್ಷೆಯಿದೆ. ಐಫೋನ್​ 17 ಪ್ರೊ ಮತ್ತು ಐಫೋನ್​ 17 ಪ್ರೊ ಮ್ಯಾಕ್ಸ್​​ ಹಿಂಭಾಗ ಟ್ರಿಪಲ್​ 48 ಮೆಗಾಫಿಕ್ಸೆಲ್​ ಕ್ಯಾಮೆರಾ ಸೆಟಪ್​​ ಹೊಂದಿರಲಿದೆ ಎಂದಿದೆ. ಇನ್ನು ಮುಂಭಾಗದ ಕ್ಯಾಮೆರಾವು 24 ಮೆಗಾಫಿಕ್ಸೆಲ್​​ ಕ್ಯಾಮೆರಾವನ್ನು ಒಳಗೊಂಡಿರುವ ಸಾಧ್ಯತೆಯಿದೆ ಎಂದಿದೆ.

ಐಫೋನ್​​ 17 ಪ್ರೊ ಮತ್ತು ಪ್ರೊ ಮ್ಯಾಕ್ಸ್​​ನಲ್ಲಿ A19 ಚಿಪ್​ಸೆಟ್​​ ಅಳವಡಿಸಬಹುದು. ಇದು ನ್ಯಾನೋಮೀಟರ್​​ ಚಿಪ್​​ ಜೊತೆಗೆ ಬರಲಿದೆ ಎಂಬ ವದಂತಿಯಿದೆ. 12ಜಿಬಿ RAM​ ಮೆಮೊರಿಯನ್ನು ಇದು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ನಂಬಿದ್ರೆ ನಂಬಿ! ಬರೀ 2499 ರೂಪಾಯಿಗೆ ಫ್ಲಿಪ್​ ಫೋನ್​! ಒಂದು ಬಾರಿ ಚಾರ್ಜ್​ ಮಾಡಿದ್ರೆ 7 ದಿನ ಬರುತ್ತೆ!

ಇನ್ನು ಮುಂಬರುವ ಐಫೋನ್​ ಮಾದರಿ ಸ್ಲಿಮ್​ ಆಗಿ ಬರುವ ನಿರೀಕ್ಷೆಯಿದೆ. ಅದರ ಜೊತೆಗೆ ಹಲವು ಬದಲಾವಣೆಯನ್ನು ತರಲಿದೆ ಎಂದು ಹೇಳಲಾಗುತ್ತಿದೆ. ಸದ್ಯ ಮುಂಬರುವ ಐಫೋನ್​​ 17 ಬಗ್ಗೆ ಭಾರೀ ಕುತೂಹಲತೆ ಕೆರಳಿದೆ. ಆದರೆ ಇವೆಲ್ಲಾ ವಿಶೇಷತೆ ನೂತನ ಮಾಡೆಲ್​ನಲ್ಲಿ ಇರಲಿದೆಯಾ? ಎಂದು ಬಿಡುಗಡೆಯ ಬಳಿಕವಷ್ಟೇ ತಿಳಿದುಬರಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment