/newsfirstlive-kannada/media/post_attachments/wp-content/uploads/2024/12/TN_TEMPLE.jpg)
ಚೆನ್ನೈ: ಈಗಂತೂ ದೇವಾಲಯದ ಹುಂಡಿಗಳಲ್ಲಿ ಭಕ್ತರು ಏನೇನು ಹಾಕುತ್ತಾರೆ ಎಂದು ಊಹಿಸುವುದೆ ಕಷ್ಟ. ಕೆಲವರು ಹುಂಡಿಗಳಲ್ಲಿ ಲವ್ ಲೆಟರ್, ಐಪಿಎಲ್ ಟ್ರೋಫಿ ಆರ್ಸಿಬಿ ಗೆಲ್ಲಲಿ, ಪರೀಕ್ಷೆಯಲ್ಲಿ ಪಾಸ್ ಮಾಡು ದೇವರೇ, ಅತ್ತೆಯಿಂದ ಪಾರು ಮಾಡಪ್ಪ ಶಿವ ಎಂದು ಏನೇನು ಬರೆದು ಪತ್ರವನ್ನ ಹುಂಡಿಯಲ್ಲಿ ಹಾಕಿರುತ್ತಾರೆ. ಇದರ ಜೊತೆಗೆ ಚಿನ್ನ, ಬೆಳ್ಳಿ ಸೇರಿ ಮೌಲ್ಯಯುತ ವಸ್ತುಗಳನ್ನು ಹಾಕುತ್ತಾರೆ. ಆದರೆ ಇಲ್ಲೊಬ್ಬ ಭಕ್ತ ದೇವರಿಗೆ ಐಫೋನ್ ಹಾಕಿದ್ದಾರೆಂತೆ. ಅಲ್ಲ.. ಅಲ್ಲ ಆಕಸ್ಮಿಕವಾಗಿ ಹುಂಡಿಯಲ್ಲಿ iPhone 13 Pro ಬಿದ್ದಿದೆಯಂತೆ.
ಐಫೋನ್ ಯುವಕ, ಯುವತಿಯರ ನೆಚ್ಚಿನ ಫೋನ್. ಸಿಕ್ಕಪಟ್ಟೆ ದುಬಾರಿ ಫೋನ್, ನನ್ನಬಳಿ ಒಂದಾದರೂ ಇರಬಾರದಿತ್ತೇ ಎಂದು ಎಷ್ಟೋ ಬಾರಿ ಅಂದುಕೊಳ್ಳುತ್ತಿರುತ್ತೀವಿ. ಅಂತದ್ರರಲ್ಲಿ ಐಫೋನ್ ಅನ್ನು ಯಾರದರೂ ಹುಂಡಿಗೆ ಹಾಕುತ್ತಾರಾ, ಇಲ್ಲ. ಭಕ್ತರರೊಬ್ಬರ ಕೈಯಿಂದ ಆಕಸ್ಮಿಕವಾಗಿ ಐಫೋನ್ ಜಾರಿ ಹುಂಡಿ ಒಳಗೆ ಬಿದ್ದಿದೆ. ಆದರೆ ದೇವಾಲಯದ ಆಡಳಿತ ಮಂಡಳಿ ಮಾತ್ರ ಈ ಕುರಿತು ಉಲ್ಟಾ ಹೊಡೆದಿದೆ.
ಇದನ್ನೂ ಓದಿ:ವಿಷವಾದ ಗಾಳಿ, ದೆಹಲಿ ಜನರಿಗೆ ಪ್ರಾಣವಾಯು ಕಂಟಕ.. AQI ಮಟ್ಟ ಯಾವ ಪ್ರಮಾಣ ತಲುಪಿದೆ?
ತಮಿಳುನಾಡಿನ ಚಂಗಲ್ಪಟ್ಟು ಜಿಲ್ಲೆಯ ತಿರುಪ್ಪೊರೂರ್ನ ಪ್ರಸಿದ್ಧ ಕಂದಸ್ವಾಮಿ ದೇವಾಲಯಕ್ಕೆ ಭಕ್ತ ದಿನೇಶ್ ಎನ್ನುವರು ಭೇಟಿ ಕೊಟ್ಟಿದ್ದರು. ಈ ವೇಳೆ ಹುಂಡಿಗೆ ಭಕ್ತನ ಐಫೋನ್ ಆಕಸ್ಮಿಕವಾಗಿ ಬಿದ್ದಿದೆ. ಈ ಘಟನೆ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಗೆ ಭಕ್ತ, ಐಫೋನ್ ಬಿದ್ದಿದೆ ಎಂದು ತಿಳಿಸಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ದೇವಸ್ಥಾನದ ಆಡಳಿತ ಮಂಡಳಿ ಹುಂಡಿ ಓಪನ್ ಮಾಡಿದ್ದು ಐಫೋನ್ ಕೂಡ ಸಿಕ್ಕಿದೆ. ಆದರೆ ದೇವಸ್ಥಾನದ ಆಡಳಿತ ಮಂಡಳಿ ಐಫೋನ್ ಅನ್ನ ಭಕ್ತನಿಗೆ ವಾಪಸ್ ನೀಡಲು ನಿರಾಕರಿಸಿದೆ. ಹುಂಡಿಯಲ್ಲಿ ಬಿದ್ದಿದ್ದು, ದೇವಸ್ಥಾನಕ್ಕೆ ಸ್ವಂತ ಎಂದು ಸಬೂಬು ಹೇಳಿದೆ.
ಇನ್ನು ಮೊಬೈಲ್ನಲ್ಲಿರುವ ಡಾಟಾವನ್ನು ಬೇಕಾದರೆ ಕೊಡುತ್ತಿವೆ. ಆದರೆ ಐಫೋನ್ ಅನ್ನು ವಾಪಸ್ ಕೊಡುವುದಿಲ್ಲ. ನಿಮ್ಮದು ಏನೇ ಇದ್ದರು ಹುಂಡಿ ಎಣಿಕೆ ಸಮಯದಲ್ಲಿ ಬಂದು ಹೇಳಿಕೊಳ್ಳಬಹುದು. ಅಲ್ಲಿವರೆಗೆ ಐಫೋನ್ ದೇವಾಲಯಕ್ಕೆ ಸೇರಿರುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಇದರಿಂದ ಭಕ್ತ ದಿನೇಶ್ ಅಚ್ಚರಿಯಾಗಿದ್ದು ಲ್ಯಾಪ್ ಟಾಪ್ ಇಲ್ಲದ ಕಾರಣ ಎರಡು ದಿನ ಬಿಟ್ಟು ಡಾಟಾ ಪಡೆದುಕೊಳ್ಳುವುದಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ