/newsfirstlive-kannada/media/post_attachments/wp-content/uploads/2024/08/Iphone-SE4.jpg)
ಕಳೆದ ವರ್ಷ ಆ್ಯಪಲ್ ಕಂಪನಿ ಬಹುನಿರೀಕ್ಷಿತ ಐಫೋನ್ 16 ಸರಣಿಯನ್ನು ಪರಿಚಯಿಸಿತ್ತು. ಸದ್ಯ ಮಾರುಕಟ್ಟೆಯಲ್ಲಿ ಮಾರಾಟ ನಡೆಸುತ್ತಿದೆ. ಅನೇಕರು ಹೊಸ ಐಫೋನ್ ಖರೀದಿ ಮಾಡುತ್ತಲೇ ಇದ್ದಾರೆ.
ಐಫೋನ್ 16 ಖರೀದಿಸಲು ಸಾಧ್ಯವಾಗದ ಗ್ರಾಹಕರಿಗೆ ಗುಡ್ನ್ಯೂಸ್ ಒಂದಿದೆ. ಕಡಿಮೆ ಬಜೆಟ್ ಬೆಲೆಗೆ ಐಫೋನ್ ಖರೀದಿಸುವವರಿಗಾಗಿ SE4 ಪರಿಚಯಿಸಲು ಕಂಪನಿ ಮುಂದಾಗಿದೆ. ನಾಳೆ ಐಫೋನ್ SE4 ಲಾಂಚ್ ಆಗಲಿದ್ದು, ಇದರ ಬೆಲೆ ಲೀಕ್ ಆಗಿದೆ.
iPhone SE4 ಕುರಿತು ಹಲವು ಅಪ್ಡೇಟ್ ಹೊರಬಿದ್ದಿದೆ. ಅದರಂತೆ iPhone SE4 ಬೆಲೆ 499 ಡಾಲರ್ ಎಂದು ನಿರೀಕ್ಷಿಸಲಾಗುತ್ತಿದೆ. ಈ ಹಿಂದೆ ಬಿಡುಗಡೆಗೊಂಡ ಐಫೋನ್ SE3 ಬೆಲೆ 429 ಡಾಲರಷ್ಟಿತ್ತು. ಆದರೀಗ ಬಜೆಟ್ ಬೆಲೆಯ ಹೊಸ ಐಫೋನ್ ಬೆಲೆ ಹೆಚ್ಚಾಗುವ ನಿರೀಕ್ಷೆಯಿದೆ.
ನಾಳೆಯೇ ಲಾಂಚ್
ಇನ್ನು, ನಾಳೆಯೇ iPhone SE4 ಮಾರುಕಟ್ಟೆಗೆ ಬರಲಿದೆ. ಹೊಸ ಚಿಪ್ಸೆಟ್ ಅಳವಡಿಸಲಿದೆಯಾ? ಆ್ಯಪಲ್ ಇಂಟಲಿಜೆನ್ಸ್ ವೈಶಿಷ್ಟ್ಯದೊಂದಿಗೆ ಕಾರ್ಯನಿರ್ವಹಿಸುತ್ತಾ ಎಂದು ಕಾದು ನೋಡುಬೇಕಿದೆ. ಒಟ್ಟಿನಲ್ಲಿ 50 ಸಾವಿರ ರೂಪಾಯಿಗೆ iPhone SE4 ಖರೀದಿಗೆ ಸಿಗಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಪಂತ್ಗೆ ಗೇಟ್ಪಾಸ್; ಟೀಮ್ ಇಂಡಿಯಾಗೆ ಸಂಜು ಸ್ಯಾಮ್ಸನ್ ಎಂಟ್ರಿ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ