/newsfirstlive-kannada/media/post_attachments/wp-content/uploads/2025/04/IPHONE-RATE.jpg)
ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ಆಮದು ಮೇಲಿನ ಸುಂಕದ ಸಮರವನ್ನು ಜಾರಿಯಲ್ಲಿಟ್ಟಿದ್ದಾರೆ. ವಿವಿಧ ದೇಶಗಳಿಗೆ ವಿವಿಧ ರೀತಿಯ ಆಮದು ಸುಂಕವನ್ನು ನಿಗದಿ ಮಾಡಿದ್ದು. ಹೊರದೇಶದಿಂದ ಅಮೆರಿಕಾಗೆ ಬರುವ ಎಲ್ಲಾ ಉತ್ಪನ್ನಗಳ ಮೇಲೆಯೂ ಆಮದು ಸುಂಕವನ್ನು ಈ ಹಿಂದಿಗಿಂತ ಅತಿಹೆಚ್ಚು ಹೇರಿದ್ದಾರೆ. ಈ ಮೂಲಕ ಜಾಗತಿಕವಾಗಿ ಒಂದು ಸುಂಕದ ಸಮರ ಶುರುವಾಗಿದೆ. ಅಮೆರಿಕಾ ವರ್ಸಸ್ ಅದರ್ ಕಂಟ್ರಿಸ್ ಎನ್ನುವ ವಾತಾವರಣವನ್ನು ವಿಶ್ವ ವ್ಯಾಪಾರ ಒಪ್ಪಂದಗಳಲ್ಲಿ ಡೊನಾಲ್ಡ್ ಟ್ರಂಪ್ ಸೃಷ್ಟಿ ಮಾಡಿದ್ದಾರೆ.
ಇದು ಈಗ ಐಫೋನ್ಗಳ ಪ್ರಿಯರಿಗೆ ಭಾರೀ ನಿರಾಸೆಯನ್ನುಂಟು ಮಾಡುವ ಸಾಧ್ಯತೆ ಇದೆ. ಅಮೆರಿಕಾದಲ್ಲಿ ಆ್ಯಪಲ್ ಐಫೋನ್ ಮೇಲೆ ಸಿಕ್ಕಾಪಟ್ಟೆ ಕ್ರೇಜ್ ಇದೆ. ಇದು ಅಮೆರಿಕಾಗೆ ಆಮದು ಆಗುವುದು ಚೀನಾದಿಂದ ಮತ್ತು ಭಾರತದಿಂದ. ಈಗಾಗಲೇ ಚೀನಾದಿಂದ ಆಮದಾಗುವ ಪ್ರತಿ ಉತ್ಪನ್ನಗಳ ಮೇಲೂ ಡೊನಾಲ್ಡ್ ಟ್ರಂಪ್ ಸರ್ಕಾರ ಶೇಕಡಾ 54 ರಷ್ಟು ಆಮದು ಸುಂಕ ವಿಧಿಸಿದೆ ಮತ್ತು ಭಾರತದ ಉತ್ಪನ್ನಗಳ ಮೇಲೆ ಶೇಕಡಾ 27 ರಷ್ಟು.
ಹೀಗಾಗಿ ಚೀನಾದಿಂದ ಅಮೆರಿಕಾಕ್ಕೆ ಆ್ಯಪಲ್ ಐಫೋನ್ ರಫ್ತು ಮಾಡಿದರೆ ಆಮದ ಸುಂಕ ನೀಡಬೇಕು. ಆ ಆಮದು ಸುಂಕದ ಹೊರೆಯನ್ನು ಕಂಪನಿಗಳು ಸಹಜವಾಗಿ ಗ್ರಾಹಕರಿಗೆ ವರ್ಗಾಯಿಸುತ್ತದೆ. ಹೀಗಾಗಿ ಅಮೆರಿಕಾದಲ್ಲಿ ಐಫೋನ್ಗಳ ಬೆಲೆ ಹೆಚ್ಚಳವಾಗುವುದು ಪಕ್ಕಾ ಎನ್ನಲಾಗಿದೆ.
ಐಫೋನ್ 16 ಮಾಡೆಲ್ ಸದ್ಯ ಅಲ್ಲಿ 799 ಡಾಲರ್ ಬೆಲೆ ಇದೆ. ಇದು 1,142 ಡಾಲರ್ಗೆ ಏರಿಕೆಯಾಗಲಿದೆ. ಐಫೋನ್ 16 ಪ್ರೋಮ್ಯಾಕ್ಸ್ನ ಬೆಲೆ ಅಮೆರಿಕಾದಲ್ಲಿ ಸದ್ಯ 1,599 ಡಾಲರ್ ಇದೆ. ಅದು ಈಗ 2,300 ಡಾಲರ್ಗೆ ಏರಿಕೆಯಾಗಲಿದೆ. ಅಮೆರಿಕಾದಲ್ಲಿ ಪ್ರತಿಯೊಂದು ಆಮದು ಉತ್ಪನ್ನಗಳ ಬೆಲೆ ಏರಿಕೆಯಾಗುವ ಕಾಲ ನಿಶ್ಚಿತವಾಗಿದೆ. ಈಗಾಗಲೇ ಹಣದುಬ್ಬರದಿಂದ ತತ್ತರಿಸಿರುವ ಅಮೆರಿಕಾ ಇದನ್ನು ಹೇಗೆ ನಿರ್ವಹಿಸುತ್ತದೆ ಎಂಬುದನ್ನು ನೋಡಬೇಕು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ