ಬಜೆಟ್​ ಬೆಲೆಯ ಐಫೋನ್​ ಹುಡುಕುತ್ತಿದ್ದೀರಾ? ಸದ್ಯದಲ್ಲೇ ಬರಲಿದೆ iPhone SE4

author-image
AS Harshith
Updated On
ಬಜೆಟ್​ ಬೆಲೆಯ ಐಫೋನ್​ ಹುಡುಕುತ್ತಿದ್ದೀರಾ? ಸದ್ಯದಲ್ಲೇ ಬರಲಿದೆ iPhone SE4
Advertisment
  • ಆ್ಯಪಲ್​ ಐಫೋನ್​ ಪ್ರಿಯರಿಗೆ ಸಿಹಿ ಸುದ್ದಿ​
  • iPhone SE4 ಪರಿಚಯಿಸಲು ಮುಂದಾಗಿದೆ ಕಂಪನಿ
  • iPhone SE4 ಬೆಲೆ ಎಷ್ಟಿರಲಿದೆ? ಖರೀದಿಸಲು ಸೂಕ್ತವೇ?

iPhone SE4: ಇತ್ತೀಚೆಗೆ ಆ್ಯಪಲ್​ ಕಂಪನಿ ಬಹುನಿರೀಕ್ಷಿತ ಐಫೋನ್​ 16 ಸರಣಿಯನ್ನು ಪರಿಚಯಿಸಿತ್ತು. ಸದ್ಯ ಮಾರುಕಟ್ಟೆಯಲ್ಲಿ ಮಾರಾಟ ನಡೆಸುತ್ತಿದೆ. ಅನೇಕರು ನೂತನ ಐಫೋನನ್ನು ಕೊಂಡು ಕೊಳ್ಳುತ್ತಿದ್ದಾರೆ. ಐಫೋನ್​ 16 ಖರೀದಿಸಲು ಸಾಧ್ಯವಾಗದಿರುವವರಿಗೆ ಮತ್ತು ಬಜೆಟ್​ ಬೆಲೆಗೆ ಐಫೋನ್​ ಖರೀದಿಸುವವರಿಗಾಗಿ ಐಫೋನ್​ SE 4 ಅನ್ನು ಪರಿಚಯಿಸಲು ಕಂಪನಿ ಸಿದ್ಧತೆ ನಡೆಸುತ್ತಿದೆ. ಆದರೆ ಅದಕ್ಕೂ ಮುನ್ನವೇ ಬಜೆಟ್​ ಬೆಲೆ ಐಫೋನ್​ ಕುರಿತು ಮಾಹಿತಿ ಸೋರಿಕೆಯಾಗಿದೆ.

ಇದನ್ನೂ ಓದಿ: iPhone 13: ಬರೀ ₹38 ಸಾವಿರ ರೂಪಾಯಿಗೆ ಐಫೋನ್​ 13 ಖರೀದಿಸಿ.. ಈ ಆಫರ್​ ಮಿಸ್​ ಮಾಡಬೇಡಿ

iPhone SE4 ಕುರಿತು ಹಲವಾರು ಸಂಗತಿಗಳು ಹರಿದಾಡುತ್ತಿವೆ. ಅದರಂತೆಯೇ iPhone SE4 ಬೆಲೆ 499 ಡಾಲರ್​​ ಎಂದು ನಿರೀಕ್ಷಿಸಲಾಗುತ್ತಿದೆ. ಈ ಹಿಂದೆ ಬಿಡುಗಡೆಗೊಂಡ ಐಫೋನ್​ SE3 ಬೆಲೆ 429 ಡಾಲರಷ್ಟಿತ್ತು. ಆದರೀಗ ಬಜೆಟ್​ ಬೆಲೆಯ ಹೊಸ ಐಫೋನ್​ ಬೆಲೆ ಹೆಚ್ಚಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ:ಸಖತ್ತಾಗಿದೆ Yamaha RayZR 125 ಸ್ಟ್ರೀಟ್​ ರ್ಯಾಲಿ.. ಬೆಂಗಳೂರು ಸಿಟಿಗೆ ಹೇಳಿ ಮಾಡಿಸಿದಂತಿದೆ ಈ ಸ್ಕೂಟರ್​

iPhone SE4 ಮುಂದಿನ ವರ್ಷವೇ ಬರಲಿದೆ ಎನ್ನಲಾಗುತ್ತಿದೆ. ಹೊಸ ಚಿಪ್​ಸೆಟ್​​ ಅಳವಡಿಸಲಿದೆಯಾ? ಆ್ಯಪಲ್​ ಇಂಟಲಿಜೆನ್ಸ್​​ ವೈಶಿಷ್ಟ್ಯದೊಂದಿಗೆ ಕಾರ್ಯನಿರ್ವಹಿಸುತ್ತಾ ಎಂದು ಕಾದು ನೋಡುಬೇಕಿದೆ. ಒಟ್ಟಿನಲ್ಲಿ 50 ಸಾವಿರ ರೂಪಾಯಿಗೆ iPhone SE4 ಖರೀದಿಗೆ ಸಿಗಲಿದೆ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment