iPhone: ಅಪ್ಡೇಟ್​​ ಮಾಡಿದ ಬಳಿಕ ಕಾಣಿಸಿಕೊಂಡ ಬ್ಯಾಟರಿ ಸಮಸ್ಯೆ.. ಐಫೋನ್​ ಬಳಕೆದಾರರಿಗೆ ಸಂಕಷ್ಟ

author-image
AS Harshith
Updated On
Big Billion Days Sale: ಗ್ರಾಹಕರಿಗೆ ಬಂಪರ್ ಆಫರ್‌.. ಹೊಸ ಬೈಕ್, ಫೋನ್‌ಗಳ ಬೆಲೆ ಎಷ್ಟು?
Advertisment
  • iOS 18ಗೆ ಅಪ್ಡೇಟ್​​ ಮಾಡಿದ ಬಳಿಕ ಕಾಣಿಸಿಕೊಂಡ ಸಮಸ್ಯೆ
  • ಒಂದು ಗಂಟೆಯಲ್ಲಿ 20ರಿಂದ 30 ಪ್ರತಿಶತದಷ್ಟು ಬ್ಯಾಟರಿ ಕುಸಿತ
  • ಸಮಸ್ಯೆ ಪರಿಹರಿಸಲು ಆ್ಯಪಲ್ ನೀಡಿದ ಉಪಾಯವೇನು ಗೊತ್ತಾ?​

ಆ್ಯಪಲ್​ ಐಫೋನ್​ iOS 18ಗೆ ಅಪ್ಡೇಟ್​​ ಮಾಡಿದ ಬಳಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಬರೀ ಒಂದು ಗಂಟೆಯಲ್ಲಿ 20ರಿಂದ 30 ಪ್ರತಿಶತದಷ್ಟು ಬ್ಯಾಟರಿ ಕುಸಿತವನ್ನು ಅನುಭವಿಸುತ್ತಿದ್ದಾರೆ.

ಸೆಪ್ಟೆಂಬರ್​​ 16ರಂದು ಆ್ಯಪಲ್​ ಐಫೋನ್​ ಬಳಕೆದಾರರಿಗಾಗಿ iOS 18 ಅಪ್ಡೇಟ್​​ ಮಾಡಿತು. ಅನೇಕರು ಐಫೋನನ್ನು ಅಪ್ಡೇಟ್​​ ಮಾಡಿದರು. ಆದರೆ ಅಪ್ಡೇಟ್​​ ಬಳಿಕ ಬ್ಯಾಟರಿ ಸಮಸ್ಯೆಯಿಂದ ಪರದಾಡುತ್ತಿದ್ದಾರೆ. ದಿನವಿಡಿ ತಮ್ಮ ಸಾಧನವನ್ನು ಚಾರ್ಜ್​ ಮಾಡಬೇಕಾದ ಅನಿವಾರ್ಯತೆಗೆ ಒಳಗಾಗುತ್ತಿದ್ದಾರೆ.

ಇದನ್ನೂ ಓದಿ: 1 ರೂಪಾಯಿಯಲ್ಲಿ ಇಡೀ ಬೆಂಗಳೂರು ಸುತ್ತಬಹುದು! ಫ್ಲಿಪ್​ಕಾರ್ಟ್​ ನೀಡಿದ ಹೊಸ ಆಫರ್ ಏನು?

ಇನ್ನು ಆ್ಯಂಡ್ರಾಯ್ಡ್​ಗಳು ಫಾಸ್ಟ್​ ಚಾರ್ಜಿಂಗ್​ ಪರಿಚಯಿಸಿ ವೇಗವಾಗಿ ಚಾರ್ಜ್​ ಆದರೆ ಆ್ಯಪಲ್​ ಐಫೋನ್​ ಬ್ಯಾಟರಿ ನಿಧಾನಗತಿಯಲ್ಲಿ ಚಾರ್ಜ್​ ಆಗುತ್ತದೆ. ಹೀಗಾಗಿ ದಿನವಿಡಿ ಚಾರ್ಜ್​ ಮಾಡಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಸದ್ಯ ಈ ಸಮಸ್ಯೆಯನ್ನು ಪರಿಹರಿಸಲು ಆ್ಯಪಲ್​ ತನ್ನ ಬಳಕೆದಾರರಿಗೆ ಕೆಲವು ಹಂತಗಳನ್ನು ಒದಗಿಸಿವೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

  • ಆ್ಯಪಲ್​ ಐಫೋನ್​ ಬ್ಯಾಟರಿ ಸಮಸ್ಯೆಯನ್ನು ಪರಿಹರಿಸಲು ಸೆಟ್ಟಿಂಗ್​​ನಲ್ಲಿ ನ್ಯಾವಿಗೇಟ್​ ಮತ್ತು ಆಟೋಮೇಟಿಕ್​ ಬ್ರೈಟ್​​ನೆಸ್​​ ಅಥವಾ ಆಟೋ ಲಾಕ್​ ​​ಅನ್ನು ಸಕ್ರಿಯಗೊಳಿಸಿದೆ ಎಂದು ಸಲಹೆ ನೀಡಿದೆ.
  • ಐಫೋನ್​ ಬಳಕೆದಾರರು ಅಪ್ಲಿಕೇಶನ್​​​ ಅನುಮತಿ ಪರಿಶೀಲಿಸಬೇಕು. ಕೆಲವು ಆ್ಯಪ್​ಗಳು ಸ್ಥಳ, ಸೇವೆಯಿಂದ ಬ್ಯಾಟರಿ ಸಮಸ್ಯೆ ಎದರಿಸುತ್ತಿರಬಹುದು.
  • ಇಂಟರ್​​ನೆಟ್​ ಬಳಸಲು ಮೊಬೈಲ್​ ಡೇಟಾ ಬಳಸುವ ಬದಲು ವೈ-ಫೈ ಬಳಸುವುದು ಉತ್ತಮ ಆಯ್ಕೆ. ವೈ-ಫೈ ಕಡಿಮೆ ಬ್ಯಾಟರಿ ಶಕ್ತಿಯನ್ನು ಬಳಸುತ್ತದೆ.
  • ಐಫೋನ್​ ಸೆಟ್ಟಿಂಗ್​ನಲ್ಲಿ ಬ್ಯಾಟರಿ ಆಯ್ಕೆ ಮೇಲೆ ಕ್ಲಿಕ್​​ ಮಾಡಿ ಯಾವ ಆ್ಯಪ್​ ಹೆಚ್ಚು ಬ್ಯಾಟರಿ ಕಸಿದುಕೊಳ್ಳುತ್ತಿದೆ ಎಂಬುದನ್ನು ಪರಿಶೀಲಿಸಿ. ಬಳಿಕ ಅದನ್ನು ಅನ್​​ ಇನ್​ಸ್ಟಾಲ್​ ಮಾಡಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment