newsfirstkannada.com

ಪಡೆದ ಕೋಟಿ ದುಡ್ಡಿಗೆ ಸರಿಯಾಗಿ ಡ್ಯುಟಿ ಮಾಡಿದ್ರಾ ಈ ಪ್ಲೇಯರ್ಸ್​? ಯಾರು ಪಾಸ್​​? ಯಾರು ಫೇಲ್​?

Share :

Published May 29, 2023 at 9:12am

    ಚೆನ್ನೈ ತಂಡವನ್ನ ನಡುನೀರಲ್ಲಿ ಕೈಬಿಟ್ಟ ಬೆನ್ ಸ್ಟೋಕ್ಸ್​​​..!

    ಪಡೆದ ದುಡ್ಡಿಗೆ ನ್ಯಾಯ ಒದಗಿಸಿದ ಕ್ಯಾಮರೂನ್ ಗ್ರೀನ್

    'ಆಕ್ಷನ್​ ಕಿಂಗ್' ಆದ್ರು ಪಂಜಾಬ್ ಕಿಂಗ್ಸ್​​​ಗೆ ವಿಲನ್​​​..!

ಐಪಿಎಲ್​. ಬಿಸಿಸಿಐ ಪಾಲಿಗೆ ಚಿನ್ನದ ಮೊಟ್ಟೆಇಡುವ ಕೋಳಿ. ಈ ಶ್ರೀಮಂತ ಲೀಗ್​​ ಆಟಕ್ಕೆ ಮನಸೋಲದವರಿಲ್ಲ. ಇದು ಬರೀ ಹೆಸರಿಗಷ್ಟೇ ರಿಚೆಸ್ಟ್​​​​​​​​ ಚುಟುಕು ಸಮರ ಅಲ್ಲ. ಪ್ರಾಕ್ಟೀಕಲಿ ಇಲ್ಲಿ ಆಡುವ ಆಟಗಾರರು ಕೋಟಿ ಕೋಟಿ ಜೇಬಿಗಿಳಿಸಿಕೊಳ್ತಾರೆ. ಇಲ್ಲಿ ಗೆಲ್ಲುವ ಕುದುರೆಗಂತೂ ಭಾರೀ ಡಿಮ್ಯಾಂಡ್​​​. ಅಂತೆಯೇ ಕಳೆದ ಆಕ್ಷನ್​​ನಲ್ಲಿ ಈ ಮೂವರಿಗೆ ಇನ್ನಿಲ್ಲದ ಬೇಡಿಕೆ ಕುದುರಿತ್ತು.

ಕೋಟಿ ಕುಬೇರರ ಪರ್ಫಾಮೆನ್ಸ್ಹೇಗಿದೆ..?

ಸ್ಯಾಮ್ ಕರನ್​​​​, ಕ್ಯಾಮರೂನ್ ಗ್ರೀನ್​​​​ ಹಾಗೂ ಬೆನ್​​ ಸ್ಟೋಕ್ಸ್​​​. ಕಳೆದ ಆಕ್ಷನ್​​​​​​​​ನ ಹೀರೋಗಳು. ಈ ಮೂರು ಜನ ಸೇರಿಕೊಂಡು ಬಾಚಿಕೊಂಡ ಹಣವೆಷ್ಟು ಗೊತ್ತಾ..? ಬರೋಬ್ಬರಿ 52.25 ಕೋಟಿ. ಅಂದ್ರೆ ಒಂದು ತಂಡಕ್ಕೆ ವ್ಯಯಿಸುವ ಹಣವನ್ನ ಫ್ರಾಂಚೈಸಿಗಳು ಈ ತ್ರಿಮೂರ್ತಿಗಳಿಗೆ ಸುರಿದು ಬಿಟ್ಟಿದ್ವು. ಬಿಕಾಸ್​​​​ ನಂಬಿಕೆ. ಹಾಗಾದ್ರೆ ಈ ಕೋಟಿ ಕುಬೇರರು ಪಡೆದ ಹಣಕ್ಕೆ ನ್ಯಾಯ ಒದಸಿದ್ರಾ..? ಇಲ್ಲ ನಂಬಿಕೆ ಹುಸಿಗೊಳಿಸಿ ತಂಡವನ್ನ ನಡುನೀರಲ್ಲಿ ಕೈಬಿಟ್ರಾ ? ಅನ್ನೋದೆ ಈ ಸ್ಟೋರಿಯ ಅಸಲಿ ಕಹಾನಿ.

ಆಕ್ಷನ್ಕಿಂಗ್ಆದ್ರು ಪಂಜಾಬ್ ಕಿಂಗ್ಸ್​​​ಗೆ ವಿಲನ್​​​..!

ಸ್ಯಾಮ್ ಕರನ್​​​​​​ ಕಳೆದ ಹರಾಜಿನ ಕಿಂಗ್​​​..ನಿರೀಕ್ಷೆಗೂ ಮೀರಿದ 18.5 ಕೋಟಿ ರೂಪಾಯಿ ಬಾಚಿ ಎಲ್ಲರನ್ನ ದಂಗು ಬಡಿಸಿದ್ರು. ಇದು ಐಪಿಎಲ್​ ಹಿಸ್ಟರಿಯಲ್ಲೇ ಗರಿಷ್ಠ. ಆದ್ರೆ ಇಂಗ್ಲೆಂಡ್ ಆಲ್​ರೌಂಡರ್​​​ ಫ್ರಾಂಚೈಸಿ ತಮ್ಮ ಮೇಲಿಟ್ಟಿದ್ದ ನಿರೀಕ್ಷೆಯನ್ನ ಹುಸಿಗೊಳಿಸಿದ್ರು. ಬ್ಯಾಟಿಂಗ್​​, ಬೌಲಿಂಗ್ ಹೀಗೆ ಎರಡಲ್ಲೂ ಫ್ಲಾಫ್ ಶೋ ನೀಡಿ ತಂಡಕ್ಕೆ ಭಾರವಾದ್ರು.

ಈ ಸೀಸನ್​ನಲ್ಲಿ ಒಟ್ಟು 14 ಪಂದ್ಯಗಳನ್ನಾಡಿದ ಕರನ್​​​ 135.96 ರ ಸ್ಟ್ರೈಕ್​ರೇಟ್​ನಲ್ಲಿ ಜಸ್ಟ್​ 276 ರನ್ನಷ್ಟೇ ಬಾರಿಸಿದ್ರು. ಒಂದೇ ಒಂದು ಪಂದ್ಯ ಗೆಲ್ಲಿಸಿಕೊಡಲಿಲ್ಲ. ಇನ್ನು ಬೌಲಿಂಗ್​​​ನಲ್ಲಿ ಅದೇ ರಾಗ ಅದೇ ಹಾಡು.10.22 ಎಕಾನಮಿಯಲ್ಲಿ ಬರೀ 10 ವಿಕೆಟ್​​​​​​​ ಕಬಳಿಸಲಷ್ಟೇ ಶಕ್ತರಾದ್ರು.

ಆಡಿದ್ರೆ ಹಿಂಗೆ ಆಡ್ಬೇಕು..ಕ್ಯಾಮರೂನ್​ ಗ್ರೀನ್ ಪಡೆದ ಕಾಸಿಗೆ ಮೋಸ ಮಾಡ್ಲಿಲ್ಲ..17.5 ಕೋಟಿಗೆ ಮುಂಬೈ ಪಾಲಾಗಿದ್ದ ಆಸೀಸ್ ಆಲ್​ರೌಂಡರ್​​​​​ ನ್ಯಾಯ ಒದಗಿಸಿದ್ರು. ಟೂರ್ನಿಯುದ್ದಕ್ಕೂ ಆರ್ಭಟಿಸಿದ ಡೇಂಜರಸ್​​ ಬ್ಯಾಟಿಂಗ್​​ನಲ್ಲಿ 16 ಪಂದ್ಯಗಳಿಂದ 452 ರನ್​ ಚಚ್ಚಿದ್ರು. ಇನ್ನು ಬೌಲಿಂಗ್​ನಲ್ಲಿ ಹೆಚ್ಚು ಅವಕಾಶ ಪಡೆಯದಿದ್ರೂ 6 ವಿಕೆಟ್​​​​​ ಕಬಳಿಸಿದ್ರು.

ಇನ್ನು ಸ್ಯಾಮ್ ಕರನ್​​, ಗ್ರೀನ್​​ ಬಿಟ್ರೆ ಹೆಚ್ಚಿನ ಮೊತ್ತಕ್ಕೆ ಸೇಲಾಗಿದ್ದು ಸ್ಟಾರ್​​​ ಅಲ್​ರೌಂಡರ್​​​ ಬೆನ್​ ಸ್ಟೋಕ್ಸ್​​..ಅಪಾರ ನಂಬಿಕೆ ಇಟ್ಟು  ಚೆನ್ನೈ 16.25 ಕೋಟಿ ರೂಪಾಯಿ ನೀಡಿ  ತೆಕ್ಕೆಗೆ ಹಾಕಿಕೊಂಡಿತ್ತು.

ಆದ್ರೆ ಎಲ್ಲವೂ ನೀರಲ್ಲಿ ಹೋಮ ತೊಳೆದಂಗಾಯ್ತು..ಯಾಕಂದ್ರೆ ಬೆನ್​​ ಸ್ಟೋಕ್ಸ್​​ ಇಡೀ ಸೀಸನ್​​ನಲ್ಲಿ ಇಂಜುರಿ ಕಾರಣಕ್ಕಾಗಿ ಜಸ್ಟ್​​​ ಎರಡೇ ಪಂದ್ಯ ಆಡಿ ಆಟ ಮುಗಿಸಿದ್ರು.ನಂಬಿದ ತಂಡವನ್ನ ನಡುನೀರಲ್ಲಿ ಕೈಬಿಟ್ಟರು.

ಒಟ್ಟಿನಲ್ಲಿ ತ್ರಿವಳಿ ಕುಬೇರರ ಪೈಕಿ ಕ್ಯಾಮರೂನ್ ಗ್ರೀನ್​​ ಮಾತ್ರ ಪಾಸಾಗಿದ್ದಾರೆ.ಇನ್ನುಳಿದ ಸ್ಯಾಮ್ ಕರನ್ ಹಾಗೂ ಬೆನ್​ ಸ್ಟೋಕ್ಸ್​​​​ರನ್ನ ನಂಬಿ ಕೋಟಿ ಕೋಟಿ ಹಣ ಸುರಿದ ಫ್ರಾಂಚೈಸಿಗಳು ತಲೆ ಮೇಲೆ ಕೈ ಹೊತ್ತು ಕೂತಿವೆ.ಮುಂದಿನ ಸೀಸನ್​​ನಲ್ಲಾದ್ರು ತಂಡಕ್ಕೆ ಭಾರವಾದ ಈ ಇಬ್ಬರು ಕಮ್​​ಬ್ಯಾಕ್​ ಮಾಡ್ತಾರಾ ? ಇಲ್ಲ ಅನ್ನೋದನ್ನ ಕಾದು ನೋಡಬೇಕು..

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್‌ನಲ್ಲಿ

ಪಡೆದ ಕೋಟಿ ದುಡ್ಡಿಗೆ ಸರಿಯಾಗಿ ಡ್ಯುಟಿ ಮಾಡಿದ್ರಾ ಈ ಪ್ಲೇಯರ್ಸ್​? ಯಾರು ಪಾಸ್​​? ಯಾರು ಫೇಲ್​?

https://newsfirstlive.com/wp-content/uploads/2023/05/CSK-2.jpg

Load More