newsfirstkannada.com

ಭಯಂಕರ ಅಜ್ಜಿ..! CSK ಅಭಿಮಾನಿಗಳ ಈ ಸಂಭ್ರಮಾಚರಣೆ ನೀವು ನೋಡಲೇಬೇಕು..!

Share :

31-05-2023

    IPL ಫೈನಲ್​ನಲ್ಲಿ ಗುಜರಾತ್​ ಮಣಿಸಿದ CSK

    ದೇಶಾದ್ಯಂತ ಸಿಎಸ್​ಕೆ ಅಭಿಮಾನಿಗಳ ಸಂಭ್ರಮ

    ಕೊನೆಯ 2 ಬಾಲ್​ನಲ್ಲಿ ಸಿಕ್ಸರ್, ಫೋರ್ ಹೊಡೆದ ಜಡ್ಡು..!

ಐಪಿಎಲ್ ಫೈನಲ್ ಪಂದ್ಯದಲ್ಲಿ ಗುಜರಾತ್ ತಂಡವನ್ನು ಬಗ್ಗು ಬಡಿದು ಸಿಎಸ್​ಕೆ ಐದನೇ ಬಾರಿಗೆ ಕಪ್​ಗೆ ಮುತ್ತಿಟ್ಟಿದೆ. ಕೊನೆಯ ಎರಡು ಬಾಲ್​ನಲ್ಲಿ ಸಿಎಸ್​ಕೆ ಸ್ಟಾರ್ ಆಲ್​ರೌಂಡರ್​ ಜಡೇಜಾ, ಒಂದು ಸಿಕ್ಸರ್, ಒಂದು ಫೋರ್ ಬಾರಿಸಿ ಗೆಲುವು ತಂದ್ಕೊಡುತ್ತಿದ್ದಂತೆಯೇ ಚೆನ್ನೈ ಸೂಪರ್ ಕಿಂಗ್ಸ್​ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.

ಗೆಲುವಿನ ಖುಷಿಯನ್ನು ಇವತ್ತೂ ಕೂಡ ಸಂಭ್ರಮಿಸುತ್ತಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕೆಲವು ಸಂಭ್ರಮಾಚರಣೆಯ ವಿಡಿಯೋಗಳು ಭಾರೀ ವೈರಲ್ ಆಗ್ತಿವೆ. ಒಂದಕ್ಕಿಂತ ಒಂದು ವಿಡಿಯೋಗಳು ಮಜವಾಗಿದ್ದು, ನೋಡುಗರಿಗೆ ಸಖತ್ ಮನರಂಜನೆ ನೀಡ್ತಿವೆ.

ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಗುಜರಾತ್ ಟೈಟನ್ಸ್ 20 ಓವರ್​ನಲ್ಲಿ 4 ವಿಕೆಟ್ ಕಳೆದುಕೊಂಡು 214 ರನ್​ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಲು ಸಿಎಸ್​ಕೆ ಬರ್ತಿದ್ದಂತೆ ಮಳೆರಾಯ ಅಡ್ಡಿಯಾದ. ಕೊನೆಗೆ ಡಿಎಲ್​ಎಸ್​ (Duckworth–Lewis–Stern method) ಪ್ರಕಾರ, ಚೆನ್ನೈಗೆ ಗೆಲ್ಲಲು 15 ಓವರ್​ನಲ್ಲಿ 171 ರನ್​ ಬೇಕಿತ್ತು. ಸಿಎಸ್​ಕೆ ಈ ಗುರಿಯನ್ನು 15ನೇ ಓವರ್​ನ ಕೊನೆಯ ಬಾಲ್​ನಲ್ಲಿ ಮುಟ್ಟಿತು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್​, ಐದನೇ ಐಪಿಎಲ್​​ ಕಪ್​ ಎತ್ತಿ ಹಿಡಿಯಿತು. ಇದುವರೆಗೆ ಮುಂಬೈ ಇಂಡಿಯನ್ಸ್​ ಮಾತ್ರ ಐದು ಬಾರಿ ಐಪಿಎಲ್​ ಟ್ರೋಫಿ ಗೆದ್ದಿತ್ತು. ಈ ದಾಖಲೆಯನ್ನು ಸಿಎಸ್​​ಕೆ ಸರಿಗಟ್ಟಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

ಭಯಂಕರ ಅಜ್ಜಿ..! CSK ಅಭಿಮಾನಿಗಳ ಈ ಸಂಭ್ರಮಾಚರಣೆ ನೀವು ನೋಡಲೇಬೇಕು..!

https://newsfirstlive.com/wp-content/uploads/2023/05/CSK-1.jpg

Load More