newsfirstkannada.com

RCB vs PBKS; 2ನೇ ಫೈಟ್​ಗೆ ರೆಡಿ.. ತವರಿನಲ್ಲಿ ಗೆಲ್ಲಲು​ ಫಾಫ್ ಪಡೆ ಏನು ಮಾಡಬೇಕು?

Share :

Published March 25, 2024 at 1:06pm

  ಬದ್ಧವೈರಿ CSKನಾ ಸೋಲಿಸಬೇಕಿತ್ತು ಎನ್ನುವುದು ಫ್ಯಾನ್ಸ್ ಬಯಕೆ

  ಆರ್​ಸಿಬಿ ಮೊದಲ ಸೋಲಿನಿಂದ ಕುಗ್ಗಬೇಕಿಲ್ಲ, ಸಿಡಿದು ನಿಲ್ಲಬೇಕಿದೆ!

  ಪಂಜಾಬ್​ಗೆ ಪಂಚ್​ ಕೊಡಲು RCB ಟೀಮ್ ಏನು ಮಾಡಬೇಕು..?

ವಿರಾಟ್ ಕೊಹ್ಲಿ ಇದು ಹೊಸ ಅಧ್ಯಾಯ ಅಂತ ಹೇಳಿದ್ದೆ ಬಂತು. ಆದ್ರೆ ಆನ್​​ಫೀಲ್ಡ್​ನಲ್ಲಿ ಆರ್​ಸಿಬಿ ತಂಡ ಹಳೆ ಚಾಳಿಯನ್ನ ಮುಂದುವರಿಸಿದೆ. ಶುಭಾರಂಭ ಮಾಡಬೇಕಾದ ರೆಡ್ ಆರ್ಮಿ, ಚೆಪಾಕ್​​​​ ಫೈಟ್​ ಸೋತಾಗಿದೆ. ಇಂದು ತವರಿನಲ್ಲಿ 2ನೇ ಫೈಟ್​ಗೆ ಸಜ್ಜಾಗಿರೋ ಆರ್​​ಸಿಬಿ ಗೆಲ್ಲಲ್ಲು ಏನ್​ ಮಾಡ್ಬೇಕು.?

ಈ ಸೀಸನ್​ನ ಮೊದಲ ಐಪಿಎಲ್​ ಪಂದ್ಯಕ್ಕೆ ಚಿನ್ನಸ್ವಾಮಿ ಮೈದಾನ ಸಜ್ಜಾಗಿದೆ. ಮೊದಲ ಪಂದ್ಯ ಗೆದ್ದ ಎದುರಾಳಿ ಪಂಜಾಬ್​ ಪಡೆ ಏನೋ ಗೆದ್ದು ಬೀಗೋ ಆತ್ಮವಿಶ್ವಾಸದಲ್ಲಿದೆ. ಆದ್ರೆ, ಚೆನ್ನೈನಲ್ಲಿ ಸೋತು ಮುಖಭಂಗ ಅನುಭವಿಸಿರುವ ಆರ್​​ಸಿಬಿ ಕ್ಯಾಂಪ್​ನಲ್ಲಿ ಟೆನ್ಶನ್​ ಮನೆ ಮಾಡಿದೆ.

ಹೊಸ ಲೋಗೊ, ಹೊಸ ಹೆಸರು, ಹೊಸ ಜರ್ಸಿ.. ಆರ್​ಸಿಬಿ ತಂಡ 2024ನೇ ಐಪಿಎಲ್​ನಲ್ಲಿ ಎಲ್ಲವನ್ನ ಬದಲಿಸಿಕೊಂಡು ಹೊಸ ಹುರುಪಿನಲ್ಲಿ ಕಣಕ್ಕಿಳಿದಿತ್ತು. ಆದ್ರೆ, ಮೊದಲ ಪಂದ್ಯ ದೇವರಿಗೆ ಕೊಡೋ ಸಂಪ್ರದಾಯ ಹಾಗೆ ಉಳಿದುಬಿಡ್ತು. ಕಪ್ ಗೆಲ್ಲದಿದ್ರೂ ಪರ್ವಾಗಿಲ್ಲ. ಬದ್ಧವೈರಿ ಸಿಎಸ್​ಕೆ ತಂಡವನ್ನ ಸೋಲಿಸಲೇಬೇಕು ಅನ್ನೋದು ಫ್ಯಾನ್ಸ್ ಹೆಬ್ಬಯಕೆ ಆಗಿತ್ತು. ಆದ್ರೆ, ಆರ್​​ಸಿಬಿ ಸೋಲಿಗೆ ಶರಣಾಯ್ತು.

ಸೂಪರ್​ ಸ್ಟಾರ್​ಗಳ ದಂಡು ಬಿಗ್​ ಹಿಟ್ಟರ್ಸ್​, ಗೇಮ್ ಚೇಂಜರ್ಸ್​, ಕ್ವಾಲಿಟಿ ಬೌಲಿಂಗ್ ಪಡೆ. ಎಲ್ಲವೂ ಇತ್ತು. ಆದ್ರೆ ಯಾವುದೂ ಪ್ರಯೋಜನಕ್ಕೆ ಬರ್ಲಿಲ್ಲ. ಬ್ಯಾಟಿಂಗ್​, ಬೌಲಿಂಗ್​ ಎರಡರಲ್ಲೂ ಆರ್​​ಸಿಬಿ ಹಿನ್ನಡೆ ಅನುಭವಿಸಿದ್ದು, ಚೆಪಾಕ್​ ಸೋಲಿಗೆ ಗುರಿ ಮಾಡ್ತು.

ಹಿಂದಿನ ಪಂದ್ಯದಲ್ಲಾದ ತಪ್ಪು ತಿದ್ದಿಕೊಂಡ್ರೆ ಗೆಲುವು ನಮ್ದೇ.!

ಗೆಲುವು, ಸೋಲು ಆಟದ ಒಂದು ಭಾಗ. ಸೋಲಿನಿಂದ ಫಾಫ್​ ಡುಪ್ಲೆಸಿ​​​ ಪಡೆ ಕುಗ್ಗಬೇಕಿಲ್ಲ. ಮೊದಲ ಪಂದ್ಯದ ಕಹಿ ನೋವನ್ನ ಮರೆತು, ಮುಂದೇನು ಮಾಡಬೇಕು ಅನ್ನೋದ್ರರ ಬಗ್ಗೆ ಗಾಢವಾಗಿ ಯೋಚಿಸಬೇಕಿದೆ. ಹಿಂದಿನ ಪಂದ್ಯದಲ್ಲಾದ ತಪ್ಪನ್ನ ಇಂದು ತಿದ್ದಿಕೊಂಡ್ರೆ ಅಂದು ಕೈ ತಪ್ಪಿದ ಗೆಲುವು ಪಂಜಾಬ್ ಕಿಂಗ್ಸ್ ವಿರುದ್ಧ ಡೆಫಿನೆಟ್ಲಿ ನಮ್ಮದಾಗಲಿದೆ. ಹಾಗಾದ್ರೆ ಆರ್​ಸಿಬಿ ಗೆಲ್ಲಲು ಮಾಡಬೇಕಿರೋದೇನು?.

ಇದನ್ನೂ ಓದಿ: RCB.. ಕೊಹ್ಲಿ ಚಾಂಟ್ಸ್ ಬಿಟ್ರೆ ಏನು ಕೇಳಲ್ಲ.. ಚಿನ್ನಸ್ವಾಮಿಯಲ್ಲಿ ನೆಚ್ಚಿನ ಅಭಿಮಾನಿಗಳ ಮುಂದೆ ಹೊಸ ಅಧ್ಯಾಯ ಶುರು

ಏನು ಸುಧಾರಿಸಬೇಕು..?

 • ವಿರಾಟ್ ಕೊಹ್ಲಿ ವೇಗವಾಗಿ ಆಡಬೇಕು
 • ಮ್ಯಾಕ್ಸ್​ವೆಲ್​​ ಹಾಗೂ ಗ್ರೀನ್ ಅಬ್ಬರಿಸಬೇಕು
 • ಡಿಕೆ ಮತ್ತಷ್ಟು ಆಕ್ರಮಣಕಾರಿಯಾಗಿ ಆಡಬೇಕು
 • ಪಟಿದಾರ್​​​-ಅನೂಜ್​ರಿಂದ ಕೊಡುಗೆ ಅಗತ್ಯ
 • ದೊಡ್ಡ ಜೊತೆಯಾಟ ತುಂಬಾ ಬಹುಮುಖ್ಯ
 • 3ನೇ ವೇಗಿಯಾಗಿ ವೈಶಾಖ್​​​ಗೆ ಚಾನ್ಸ್​ ನೀಡಬೇಕು
 • ಫೀಲ್ಡಿಂಗ್​​ ವಿಭಾಗ ಕೂಡ ಸುಧಾರಿಸಬೇಕಿದೆ

ಎರಡು ದಿನಗಳ ಗ್ಯಾಂಪ್ ಅಂತರದಲ್ಲಿ ಆರ್​ಸಿಬಿ ಮತ್ತೊಂದು ವಾರ್​ಗೆ ಸಜ್ಜಾಗಿದೆ. ತವರಿನಂಗಳದಲ್ಲಿ ಭರ್ಜರಿ ಅಭ್ಯಾಸವನ್ನೂ ನಡೆಸಿದೆ. ಇಂದು ಹೋಮ್​​ಗ್ರೌಂಡ್​ನಲ್ಲಿ ಹ್ಯೂಜ್​​​​​​ ಫ್ಯಾನ್ಸ್ ಸಪೋರ್ಟ್​ ತಂಡಕ್ಕೆ ಸಿಗಲಿದೆ. ತಪ್ಪುಗಳನ್ನ ತಿದ್ದಿಕೊಂಡು ಅಖಾಡಕ್ಕಿಳಿದ್ರೆ, ಚಿನ್ನಸ್ವಾಮಿ ಮೈದಾನದಲ್ಲಿ ವಿಜಯ ಪತಾಕೆ ಹಾರಿಸೋದು ಸವಾಲಿನ ವಿಚಾರವೇನಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCB vs PBKS; 2ನೇ ಫೈಟ್​ಗೆ ರೆಡಿ.. ತವರಿನಲ್ಲಿ ಗೆಲ್ಲಲು​ ಫಾಫ್ ಪಡೆ ಏನು ಮಾಡಬೇಕು?

https://newsfirstlive.com/wp-content/uploads/2024/03/KOHLI_RCB_MAX_WELL.jpg

Load More