newsfirstkannada.com

GT​ ಹೊಸ ಸಾರಥಿಗೆ ದೊಡ್ಡ ಅಗ್ನಿಪರೀಕ್ಷೆ.. ಪಾಂಡ್ಯ ಮಾದರಿಯಲ್ಲೇ ಸಾಗ್ತಾರಾ ಯುವ ನಾಯಕ?

Share :

Published March 19, 2024 at 1:58pm

  ನೂತನ ಕ್ಯಾಪ್ಟನ್​ಗೆ ಗೆ ಮ್ಯಾಚ್ ವಿನ್ನರ್ಸ್ ಇಂಜುರಿ ಟೆನ್ಶನ್

  ಕ್ಯಾಪ್ಟನ್ಸಿ ಒತ್ತಡ ನಿಭಾಯಿಸುವರಾ ಹೊಸ ಕ್ಯಾಪ್ಟನ್?

  ಶುಭ್​ಮನ್​ಗೆ 9 ಅನುಭವಿ ನಾಯಕರ ಚಾಲೆಂಜ್..!

ಐಪಿಎಲ್​​ಗೆ ಎಂಟ್ರಿ ನೀಡಿದ ಮೊದಲ ಸೀಸನ್​​ನಲ್ಲೇ ಚಾಂಪಿಯನ್ ತಂಡ. ಕಳೆದ ಸೀಸನ್​​ನಲ್ಲಿ ರನ್ನರ್​​ ಅಪ್. ಇಂಥ ಸಕ್ಸಸ್​ಫುಲ್ ಟೀಮ್​​​​​, ಈಗ ಯುವ ನಾಯಕನ ನೇತೃತ್ವದಲ್ಲಿ ಸಕ್ಸಸ್​ ಮಂತ್ರ ಪಠಿಸುತ್ತಿದೆ. ಹಾಗಾದ್ರೆ ಆ ತಂಡದ ಸಕ್ಸಸ್ ಮಂತ್ರ, ಈ ಸೀಸನ್​ನಲ್ಲಿ ಮುಂದುವರಿಯುತ್ತಾ? ಎನೆಲ್ಲಾ ಸವಾಲುಗಳಿವೆ ಅನ್ನೋ ವಿವರ ಇಲ್ಲಿದೆ.

17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇಡೀ ಕ್ರಿಕೆಟ್​ ಜಗತ್ತು ಕಾಯುತ್ತಿರುವ ಐಪಿಎಲ್​ ಹಬ್ಬಕ್ಕೆ, ಮಾರ್ಚ್​​​ 22ರಂದು ಚಾಲನೆ ಸಿಗಲಿದೆ. ಜಿದ್ದಾಜಿದ್ದಿನ ಕ್ಷಣಗಳಿಗೆ ಇನ್ನು ಕೆಲವೇ ದಿನಗಳಲ್ಲಿ ಟೂರ್ನಿ ಸಾಕ್ಷಿಯಾಗಲಿದೆ. ಇದೇ ಸೀಸನ್​ನಲ್ಲಿ ಗುಜರಾತ್ ಟೈಟನ್ಸ್​ ಹೊಸ ಅವತಾರದಲ್ಲಿ ಕಣಕ್ಕಿಳಿಯುತ್ತಿದೆ.

ಮೊದಲ ಸೀಸನ್​ನಲ್ಲೇ ಚಾಂಪಿಯನ್​ ಪಟ್ಟಕ್ಕೇರಿದ್ದ ಗುಜರಾತ್​ ಟೈಟನ್ಸ್​, ಕಳೆದ ಆವೃತ್ತಿಯಲ್ಲೂ ಫೈನಲಿಸ್ಟ್​ ಆಗಿತ್ತು. ಆದ್ರೀಗ ಇದೇ ಗುಜರಾತ್​, ನ್ಯೂ ಸೀಸನ್​​ಗೆ ಸಜ್ಜಾಗಿದೆ. ಇದೇ ಸೀಸನ್​ನಲ್ಲಿ ಮತ್ತೆ ಟ್ರೋಫಿ ಗೆಲ್ಲೋ ಮಂತ್ರವನ್ನೇ ಪಠಿಸುತ್ತಿದೆ. ಆದ್ರೆ, ಇದು ಈ ಬಾರಿ ಅಷ್ಟು ಸುಲಭದಗ್ಗಾಗಿಲ್ಲ. ಇದಕ್ಕೆ ಕಾರಣ ಗುಜರಾತ್ ಟೈಟನ್ಸ್ ಮುಂದಿರೋ ಸವಾಲುಗಳ ಬೆಟ್ಟ.

ಗುಜರಾತ್​ ನ್ಯೂ ಕ್ಯಾಪ್ಟನ್​​ ಶುಭ್​​ಮನ್​​​​ಗೆ ಅಗ್ನಿಪರೀಕ್ಷೆ..!

ಶುಭ್​ಮನ್ ಗಿಲ್, ಗುಜರಾತ್ ಟೈಟನ್ಸ್​ನ ಸಕ್ಸಸ್​ಫುಲ್ ಓಪನರ್. ಕಳೆದ 2 ಸೀಸನ್​ಗಳಲ್ಲಿ ಗುಜರಾತ್ ಸಕ್ಸಸ್​ ಹಿಂದಿನ ಸೀಕ್ರೆಟ್. ಆದ್ರೀಗ ಇದೇ ಶುಭಮನ್, ಐಪಿಎಲ್​ನಲ್ಲಿ ನಾಯಕರಾಗಿ ಮೊದಲ ಬಾರಿಗೆ ಜವಾಬ್ದಾರಿ ವಹಿಸಿದ್ದಾರೆ. ಹೀಗಾಗಿ ಕ್ಯಾಪ್ಟನ್ಸಿ ಒತ್ತಡದಲ್ಲಿ ಗಿಲ್​​​​​​​​​​, ಸಕ್ಸಸ್​ ಕಾಣ್ತಾರಾ ಅನ್ನೋದೇ ಪ್ರಶ್ನೆ.

ಗಿಲ್ ನಾಯಕತ್ವದ ಅನುಭವ

 • 2018ರ ಅಂ​-19 ವಿಶ್ವಕಪ್​ ತಂಡದ ಉಪ ನಾಯಕನಾಗಿದ್ದ ಗಿಲ್​
 • 2019ರ ದುಲೀಪ್ ಟ್ರೋಫಿಯಲ್ಲಿ ಇಂಡಿಯಾ ಬ್ಲೂ ನಾಯಕ
 • 2019ರ ದೇವಧರ್ ಟ್ರೋಫಿಯಲ್ಲಿ ಮುನ್ನಡೆಸಿದ ಅನುಭವ
 • ದೇವಧರ್ ಟ್ರೋಫಿಯಲ್ಲಿ ಭಾರತ ಸಿ ಫೈನಲ್​ಗೇರಿದ ಸಾಧನೆ
 • 2019-20ರ ಸೈಯದ್ ಮುಷ್ತಾಕ್ ಆಲಿಯಲ್ಲಿ ನಾಯಕನಾಗಿ ಕಾರ್ಯ

ಇದೇ ಅನುಭವ, ಅನುಭವಿ ನಾಯಕರಿಗೆ ಎಷ್ಟರ ಮಟ್ಟಿಗೆ ಚಾಲೆಂಜ್ ಆಗ್ತಾರೆ ಅನ್ನೋ ಪ್ರಶ್ನೆ ಇದ್ದೇ ಇದೆ.

ಕ್ಯಾಪ್ಟನ್​​ ಗಿಲ್​​ಗೆ ಮ್ಯಾಚ್ ವಿನ್ನರ್​ಗಳ ಇಂಜುರಿ ಟೆನ್ಶನ್..!
ಗುಜರಾತ್ ಟೈಟನ್ಸ್​ ಬಲಾಢ್ಯ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಕಳೆದ ಎರಡು ಸೀಸನ್​​ಗಳಲ್ಲಿ ಗುಜರಾತ್ ಟೈಟನ್ಸ್​ ತಂಡದ ಗೆಲುವಿನ ಹಿಂದಿನ ರೀಸನ್ ಮಹಮ್ಮದ್ ಶಮಿ ಹಾಗೂ ರಶೀದ್ ಖಾನ್.. ಆದ್ರೀಗ ಇದೇ ಮ್ಯಾಚ್ ವಿನ್ನರ್​ಗಳ ಪೈಕಿ ಮಹಮ್ಮದ್ ಶಮಿ ಟೂರ್ನಿಯಿಂದಲೇ ಹೊರಬಿದ್ದಿದ್ರೆ, ರಶೀದ್ ಖಾನ್ ಈಗಷ್ಟೇ ಇಂಜುರಿಯಿಂದ ಚೇತರಿಸಿಕೊಂಡಿದ್ದಾರೆ. ಹೀಗಾಗಿ ಶಮಿಯ ರಿಪ್ಲೇಸ್​ಮೆಂಟ್ ಬಿಗ್ ಚಾಲೆಂಜ್. ನ್ಯೂ ಪ್ಲೇಯರ್​ಗಳ ಎಂಟ್ರಿಯಿಂದ ಟೀಮ್ ಕಾಂಬಿನೇಷನ್​ ಸೆಟ್ ಮಾಡೋದು ತಲೆನೋವು.

ಹಾರ್ದಿಕ್ ಸಕ್ಸಸ್​​​​​​​​​ ಕ್ಯಾರಿ ಮಾಡ್ತಾರಾ ಶುಭ್​ಮನ್..?
ಗುಜರಾತ್ ಟೈಟನ್ಸ್ ಸಕ್ಸಸ್​​​​​​ನ ಲೀಡರ್ ಹಾರ್ದಿಕ್ ಪಾಂಡ್ಯ. ಬ್ಯಾಟಿಂಗ್ ಜೊತೆಗೆ ಬೌಲಿಂಗ್​ನಲ್ಲೂ ಕಮಾಲ್ ಮಾಡಿದ್ದ ಈತ, ಟಾಪ್ ಆರ್ಡರ್​ನಲ್ಲಿ ತಂಡಕ್ಕೆ ನೆರವಾಗ್ತಿದ್ದು ಮಾತ್ರವಲ್ಲ. ತಂಡದ ಅಗತ್ಯತೆಗೆ ತಕ್ಕಂತೆ ಬೌಲಿಂಗ್ ಮಾಡಿ ಬ್ರೇಕ್ ಥ್ರೂ ನೀಡ್ತಿದ್ರು. ಇದಲ್ಲದೆ ಮ್ಯಾಚ್ ಫಿನಿಷರ್ ಆಗಿಯೂ ತಂಡಕ್ಕೆ ನೆರವಾಗ್ತಿದ್ರು. ಆದ್ರೀಗ ಹಾರ್ದಿಕ್ ಪಾಂಡ್ಯರಂಥ ಪರ್ಫೆಕ್ಟ್​ ಆಲ್​ರೌಂಡರ್​ನ ತುಂಬುವುದು ನ್ಯೂ ಕ್ಯಾಪ್ಟನ್ ಶುಭ್​ಮನ್​​ಗೆ ಸುಲಭದ ಮಾತಲ್ಲ. ಆದ್ರೆ, ಅಂತರಾಷ್ಟ್ರೀಯ ಕ್ರಿಕೆಟ್ ಆಡಿರೋ ಗಿಲ್​ಗೆ ಕ್ಯಾಪ್ಟನ್ಸಿ ಪ್ರೆಷರ್ ಡೀಲ್​ ಮಾಡೋದು ಕಷ್ಟಕರ ಕೆಲಸವಲ್ಲ.

ಒಟ್ಬಲ್ಲಿ..! ಐಪಿಎಲ್​ನ ಯೆಂಗೆಸ್ಟ್​ ಕ್ಯಾಪ್ಟನ್ ಆಗಿ ಕಣಕ್ಕಿಳಿಯುತ್ತಿರೋ ಶುಭ್​ಮನ್​ ಪಾಲಿಗೆ, ಈ ಸೀಸನ್​ ಬಿಗೆಸ್ಟ್ ಚಾಲೆಂಜ್ ಆಗಿದ್ದು, ಯಾವ ರೀತಿ ಮುನ್ನಡೆಸ್ತಾರೆ ಅನ್ನೋದು ಕಾದುನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

GT​ ಹೊಸ ಸಾರಥಿಗೆ ದೊಡ್ಡ ಅಗ್ನಿಪರೀಕ್ಷೆ.. ಪಾಂಡ್ಯ ಮಾದರಿಯಲ್ಲೇ ಸಾಗ್ತಾರಾ ಯುವ ನಾಯಕ?

https://newsfirstlive.com/wp-content/uploads/2024/03/GILL.jpg

Load More