newsfirstkannada.com

ಧೋನಿ ಬಳಗ ಕಾಡ್ತಿದೆ ವೀಕ್ನೆಸ್.. CSKಗೆ ಕಾಡ್ತಿರೋ ಭಯ ಏನು ಗೊತ್ತಾ..?

Share :

Published March 22, 2024 at 11:41am

    ಸೀಸನ್​​-17ರಲ್ಲೂ ಚೆನ್ನೈ ಕಪ್​ ಗೆಲ್ಲೋದು ಗ್ಯಾರಂಟಿನಾ?

    ಪ್ರತಿ ಸ್ಲಾಟ್​​ನಲ್ಲೂ ಸ್ಪೆಷಲಿಸ್ಟ್​ ಆಟಗಾರರ ದಂಡೇ ಇದ್ದಾರೆ

    11 ಆಲ್​ರೌಂಡರ್ಸ್.. ಇವ್ರೇ ಚೆನ್ನೈ ಕಿಂಗ್ಸ್​ ಬಲ..!

ಐಪಿಎಲ್​​​​​​​​​​​​​​​​​​​​​​​​ ಸೀಸನ್-17 ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ. ಮೊದಲ ಫೈಟ್​​ನಲ್ಲೇ ಅಂಗಳದಲ್ಲಿ ಆರ್​​ಸಿಬಿಗೆ ನಿಜಕ್ಕೂ ಬಿಗ್​​ ಚಾಲೆಂಜ್​ ಎದುರಾಗಲಿದೆ. ಧೋನಿ ನಾಯಕನ ಪಟ್ಟ ತ್ಯಜಿಸಿರಬಹುದು. ಹಾಗಂತ ಸಿಎಸ್​​ಕೆಯನ್ನ ಸುಲಭಕ್ಕೆ ಪರಿಗಣಿಸುವಂತಿಲ್ಲ.

ಚೆನ್ನೈ ಸೂಪರ್ ಕಿಂಗ್ಸ್​.. ಐಪಿಎಲ್ ಇತಿಹಾಸದ ಚಾಂಪಿಯನ್ ಟೀಮ್. ದಾಖಲೆಯ ಐದು ಬಾರಿ ಐಪಿಎಲ್ ಮುಕುಟಕ್ಕೆ ಮುತ್ತಿಟ್ಟಿರುವ ಚೆನ್ನೈ, ಈ ಸಲನೂ ಕಪ್ ಕೈವಶ ಮಾಡಿಕೊಳ್ಳುವ ಲೆಕ್ಕಚಾರದಲ್ಲಿದೆ. ಈ ನಿಟ್ಟಿನಲ್ಲೇ ಹೋಮ್​ ವರ್ಕ್​ ಮುಗಿಸಿರೋ ಚೆನ್ನೈ, ಅಖಾಡದಲ್ಲಿ ಗೆಲ್ಲೋ ಭರವಸೆಯಲ್ಲಿದೆ. ಇದಕ್ಕೆಲ್ಲಾ ಕಾರಣ ಚೆನ್ನೈ ತಂಡದಲ್ಲಿನ ಪರಿಪೂರ್ಣತೆ. ಹೀಗಾಗಿ ಚೆನ್ನೈ, ಮತ್ತೊಮ್ಮೆ ಕಪ್ ಗೆಲ್ಲೋ ಹಾಟ್ ಫೇವರಿಟ್ ಅಂದ್ರೂ ತಪ್ಪಿಲ್ಲ.

​​​​​​​ಚೆನ್ನೈ ಬ್ಯಾಟಿಂಗ್ ಲೈನ್​ ಆಪ್ ಡಿಸೆಂಟ್​..!

ಚೆನ್ನೈ ಬ್ಯಾಟಿಂಗ್ ವಿಭಾಗವಂತೂ ನಿಜಕ್ಕೂ ಡಿಸೆಂಟ್. ಪವರ್ ಪ್ಲೇಗೆ ತಕ್ಕಂತೆ ಪವರ್ ಬ್ಯಾಟಿಂಗ್ ನಡೆಸೋ ಆಟಗಾರಾರಿದ್ದಾರೆ. ಋತುರಾಜ್, ಡಿವೋನ್ ಕಾನ್ವೆ, ಅಜಿಂಕ್ಯಾ ರಹಾನೆ ಟಾಪ್ ಆರ್ಡರ್​​ನಲ್ಲಿ ಘರ್ಜಿಸೋಕೆ ಸದಾ ಸಿದ್ಧರಾಗಿದ್ದಾರೆ.

ಮಿಡಲ್ ಆರ್ಡರ್​ನಲ್ಲಿ ದರ್ಬಾರ್ ನಡೆಸಲು ಶಿವಂ ದುಬೆ, ಡೇರಿಲ್ ಮಿಚೆಲ್ ಇದ್ದಾರೆ. ಇವರನ್ನ ಕಟ್ಟಿ ಹಾಕೋದು ಸುಲಭದ ಮಾತು ಅಲ್ಲವೇ ಅಲ್ಲ. ಗೆಲುವಿನ ದಡ ಸೇರಿಸುವ ಮ್ಯಾಚ್ ಫಿನಿಷರ್ ರೋಲ್​ ನಿಭಾಯಿಸಲು ಧೋನಿ ಹಾಗೂ ಜಡೇಜಾ ಇದ್ದಾರೆ. ಯಾವುದೇ ಪಿಚ್​ನಲ್ಲಿ ಸ್ಕೋರ್ ಮಾಡಬಲ್ಲ ಇವರು, ಚೆನ್ನೈ ಪಾಲಿನ ಬಿಗ್ ವೆಪನ್ಸ್.

11 ಆಲ್​ರೌಂಡರ್ಸ್.. ಇವ್ರೇ ಚೆನ್ನೈ ಬಲ
ಕಳೆದ ಸೀಸನ್​​ನಲ್ಲಿ ಬಲಿಷ್ಟ​​​ ಸೈನ್ಯ ಕಟ್ಟಿದ್ದ ಚೆನ್ನೈ, ಬರೋಬ್ಬರಿ 6 ಮಂದಿ ಆಲ್​ರೌಂಡರ್​ಗಳಿಗೆ ಸ್ಥಾನ ನೀಡಿತ್ತು. ಈ ಸೀನಸ್​​ನಲ್ಲಿ ಬರೋಬ್ಬರಿ 11 ಮಂದಿ ಆಲ್​ರೌಂಡರ್​ಗಳಿಗೆ ಮಣೆಹಾಕಿದೆ. ಈ ಆಲ್​ರೌಂಡರ್​ಗಳಿಗೆ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಡಬಲ್ಲ ತಾಕತ್ತಿದೆ. ಇಂಟ್ರೆಸ್ಟಿಂಗ್ ಅಂದರೆ ಈ ಆಲ್​ರೌಂಡರ್​ಗಳು, ಯಾವುದೇ ಕ್ರಮಾಂಕದಲ್ಲಿ ಬೇಕಾದ್ರೂ ಬ್ಯಾಟ್ ಮಾಡಬಲ್ಲರು. ಓಪನರ್ ಟು ಮ್ಯಾಚ್ ಫಿನಿಷಿಂಗ್ ಎಲ್ಲಾ ರೋಲ್​ ಪ್ಲೇ ಮಾಡೋ ಕಲೆಗಾರಿಕೆ ಇದೆ. ಫಾಸ್ಟ್ ಬೌಲಿಂಗ್​, ಸ್ಪಿನ್ ಅಸ್ತ್ರಗಳೂ ಬತ್ತಳಿಕೆಯಲ್ಲಿದೆ.

ಸಿಎಸ್​​​ಕೆನಲ್ಲಿ ಸ್ಪೆಷಲಿಸ್ಟ್​ ಬೌಲರ್​ಗಳ ದಂಡು..!
ತಂಡದ ಬತ್ತಳಿಕೆಯಲ್ಲಿರುವ ಬಿಗ್ ವೆಪನ್​ಗಳೇ ಈ ಬೌಲರ್​ಗಳು. ಪವರ್ ಪ್ಲೇನಲ್ಲಿ ಚಮತ್ಕಾರ ಮಾಡಲು ದೀಪಕ್ ಚಹರ್ ಹಾಗೂ ಮುಖೇಶ್ ಚೌಧರಿ ಇದ್ದಾರೆ. ಮಿಡಲ್ ಓವರ್​ಗಳಲ್ಲಿ ಮ್ಯಾಜಿಕ್ ಮಾಡಲು ಜಡೇಜಾ, ಮಹೀಷ ತೀಕ್ಷ್ಣಣ ಜೊತೆಗೆ ಮೊಯಿನ್ ಅಲಿ ಇದ್ದಾರೆ. ಡೆತ್ ಓವರ್​ಗಳಲ್ಲಿ ಎದುರಾಳಿ ಲೆಕ್ಕಚಾರ ಬುಡಮೇಲು ಮಾಡೋ ಮಹೀಶಾ ಪತಿರಣ ಇದ್ದಾರೆ. ಎಲ್ಲಾ ವಿಭಾಗಗಳಲ್ಲೂ ಸ್ಪಷ್ಟ ಹಾಗೂ ಬಲಿಷ್ಟವಾಗಿದ್ರೂ, ಚೆನ್ನೈ ತಂಡದಲ್ಲಿ ವೀಕ್ನೆಸ್​​ಗಳಿವೆ.

ಚೆನ್ನೈ ತಂಡದ ವಿಕ್ನೇಸ್..!

  • ಅನಾನುಭವಿ ನಾಯಕ
  • ಪ್ರಮುಖ ಆಟಗಾರರ ಇಂಜುರಿ
  • ಮ್ಯಾಚ್ ಫಿನಿಷರ್​ಗಳ ಕೊರತೆ ​​​
  • ಸ್ಪೆಷಲಿಸ್ಟ್ ಸ್ಪಿನ್ನರ್​ಗಳು ಇಲ್ಲ
  • ಯುವ ಬೌಲರ್​​ಗಳ ಮೇಲೆ ಡಿಪೆಂಡ್
  • ಧೋನಿ ಬ್ಯಾಟ್​ ಸೈಲೆಂಟ್..!

ಧೋನಿ ನಾಯಕತ್ವಕ್ಕೆ ಗುಡ್​ ಬೈ ಹೇಳಿದ್ರೂ, ವಿಕೆಟ್ ಹಿಂದೆ ನಿಂತು ತಂತ್ರ ಪ್ರತಿತಂತ್ರಗಳನ್ನ ರೂಪಿಸ್ತಾ ಯಂಗ್​ ಋತುರಾಜ್​​ನ ಗೈಡ್​ ಮಾಡೋದು ಪಕ್ಕಾ. ಧೋನಿಯ ಸಲಹೆ ಸೂಚನೆಗಳನ್ನ ಪಾಲಿಸಿದ್ರೆ ಸಾಕು ತಂಡ ವಿನ್ನಿಂಗ್ ಟ್ರ್ಯಾಕ್​ನಲ್ಲಿ ಹೋಗಲಿದೆ. ಇದಿಷ್ಟೇ ಅಲ್ಲ.! ಈ ವರ್ಷವೂ ಚೆನ್ನೈ ಪಾಲಿಗೆ ಎಮೋಷನಲ್​ ಇಯರ್. ಧೋನಿಗಾಗಿ ಕಪ್​ ಗೆಲ್ಲೋ ಹಂಬಲ, ಛಲ ಆಟಗಾರರಲ್ಲಿದೆ. ಆ ಕಿಚ್ಚು ಸಾಕು ಚಾಂಪಿಯನ್​ ಆಗೋಕೆ.

ವಿಶೇಷ ವರದಿ: ಸಂತೋಷ್

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಧೋನಿ ಬಳಗ ಕಾಡ್ತಿದೆ ವೀಕ್ನೆಸ್.. CSKಗೆ ಕಾಡ್ತಿರೋ ಭಯ ಏನು ಗೊತ್ತಾ..?

https://newsfirstlive.com/wp-content/uploads/2024/03/CSK-2.jpg

Load More