/newsfirstlive-kannada/media/post_attachments/wp-content/uploads/2024/04/SURYA_KUMAR_YADAV.jpg)
ಸೂರ್ಯಕುಮಾರ್​​​ ಯಾದವ್​​​ಗೆ ಯಾವ ಬೌಲರ್​ ಭಯವೂ ಇಲ್ಲ ಅಂತ ಎಲ್ಲರೂ ಭಾವಿಸಿದ್ದಾರೆ. ಆದ್ರೆ ಅದು ತಪ್ಪು. ನಿರ್ಭಯವಾಗಿ ಬ್ಯಾಟ್​ ಬೀಸುವ ಸೂರ್ಯಕುಮಾರ್​​ ಆ ಬೌಲರ್​​​ ಅಂದ್ರೆ ಬೆಚ್ಚಿ ಬೀಳ್ತಾರೆ. ಅಷ್ಟಕ್ಕೂ ಆ ಬೌಲರ್ ಯಾರು ಗೊತ್ತಾ?.
ಸೂರ್ಯಕುಮಾರ್​​ ಯಾದವ್ ವಿಶ್ವ ಕ್ರಿಕೆಟ್​ನ ಮೋಸ್ಟ್​​ ಡೇಂಜರಸ್​ ಬ್ಯಾಟ್ಸ್​​ಮನ್​​​. ಎಂತಹ ಬೌಲರ್​​​​​​​​​​​ ಆಗಿರಲಿ ಲೀಲಜಾಲವಾಗಿ ದಂಡಿಸಿ ಬೌಲರ್​ಗಳಿಗೆ ನೀರು ಕುಡಿಸ್ತಾರೆ. ಇವರ ಬ್ಯಾಟ್​​ನಿಂದ ಸಿಡಿಯುವ ಒಂದೊಂದು ಶಾಟ್ಸ್​​​ ನೋಡುಗರ ಕಣ್ಣು ಕುಕ್ಕುತ್ತೆ. ಇಂತಹ ನಿರ್ಭೀತಿ ಆಟಗಾರ ಓರ್ವ ಬೌಲರ್​ ಅಂದ್ರೆ ಬೆಚ್ಚಿ ಬೀಳ್ತಾರೆ. ಅವರೇ ಸ್ಟಾರ್ ಬೌಲರ್​​ ಜಸ್​ಪ್ರೀತ್ ಬುಮ್ರಾ.
ಇದನ್ನೂ ಓದಿ:ಇಬ್ಬರು ಮಕ್ಕಳ ಹತ್ಯೆ ಮಾಡಿ ಜೈಲು ಸೇರಿದ್ದ ತಾಯಿ.. ಪರಪ್ಪನ ಅಗ್ರಹಾರ ಜೈಲಿನಲ್ಲಿ ಆ**ತ್ಯೆ
ಡೆಡ್ಲಿ ಬ್ಯಾಟರ್ ಸೂರ್ಯಕುಮಾರ್​ ಯಾದವ್​ಗೆ ಯಾರ್ಕರ್ ಸ್ಪೆಶಲಿಸ್ಟ್​ ಬೂಮ್ರಾ ಅಂದ್ರೆ ಇನ್ನಿಲ್ಲದ ಭಯ. ತಮ್ಮ ವೃತ್ತಿ ಜೀವನದಲ್ಲಿ ಎದುರಿಸಿದ ಕಠಿಣ ಬೌಲರ್​ ಅಂದ್ರೆ ಬೂಮ್ರಾ ಅಂತೆ. ಕಳೆದ ಎರಡ್ಮೂರು ವರ್ಷಗಳಿಂದ ಸೂರ್ಯ ನೆಟ್ಸ್​ನಲ್ಲಿ ಬೂಮ್ರಾ ವಿರುದ್ಧ ಆಡಿಯೇ ಇಲ್ಲವಂತೆ. ಯಾಕಂದ್ರೆ ಬೂಮ್ರಾ ಬೌಲಿಂಗ್​​ನಲ್ಲಿ ಆಡಿದ್ರೆ ಒಂದು ಬ್ಯಾಟ್ ಪೀಸ್​ ಪೀಸ್​​ ಆಗುತ್ತೆ, ಇಲ್ಲ ಪಾದ ಮುರಿಯುತ್ತೆ. ಹೀಗಂತ ವಿಶ್ವದ ನಂ.1 ಟಿ20 ಬ್ಯಾಟ್ಸ್​​ಮನ್ ಸೂರ್ಯಕುಮಾರ್ ಯಾದವ್​ ಐಪಿಎಲ್​​​ ಪಂದ್ಯಾವಳಿ ವೇಳೆ ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ