newsfirstkannada.com

KKR ವಿರುದ್ಧ ಇವತ್ತು RCB ಗೆದ್ದರೆ ಫ್ಲೇ ಆಫ್ ಜೀವಂತ.. ಮೆಗಾ ಫೈಟ್‌ಗೆ ಫಾಫ್ ಪಡೆ ಮಾಸ್ಟರ್ ಪ್ಲಾನ್‌!

Share :

Published April 21, 2024 at 7:29am

Update April 21, 2024 at 7:42am

    ಫಾಫ್​, ಕೊಹ್ಲಿ, ಕಾರ್ತಿಕ್ ಮತ್ತೆ ಬ್ಯಾಟಿಂಗ್​ನಲ್ಲಿ ಅಬ್ಬರಿಸಬೇಕಿದೆ ​

    ಕೆಕೆಆರ್​ ತಂಡವನ್ನ ಮಣಿಸುವುದು ಆರ್​ಸಿಬಿಗೆ ಅಷ್ಟು ಸುಲಭವಲ್ಲ

    ಗೆಲ್ಲಲು ಕ್ಯಾಪ್ಟನ್​ ಫಾಫ್ ಭಾರೀ ರಣತಂತ್ರವನ್ನೇ ಹೆಣೆಯಬೇಕಿದೆ

ಸತತ ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಇಂದು ಬಲಿಷ್ಠ ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧ ಗೆಲುವಿಗಾಗಿ ಹೋರಾಟ ನಡೆಸಲಿದೆ. ತವರಿನಲ್ಲೇ ಪಂದ್ಯ ನಡೆಯುತ್ತಿದ್ದರಿಂದ ಕೆಕೆಆರ್​ ತಂಡವನ್ನು ಮಣಿಸುವುದು ಆರ್​ಸಿಬಿಗೆ ಅಷ್ಟು ಸುಲಭವಲ್ಲ. ಹೀಗಾಗಿ ನಿರ್ಣಾಯಕ ಪಂದ್ಯ ಗೆಲ್ಲಲು ಕ್ಯಾಪ್ಟನ್​ ಫಾಫ್ ಭಾರೀ ರಣತಂತ್ರವನ್ನೇ ಹೆಣೆಯಬೇಕಿದೆ. ಪ್ಲೇ ಆಫ್‌ ಭರವಸೆ ಜೀವಂತವಾಗಿರಬೇಕು ಎಂದರೆ ಈ ಪಂದ್ಯ ಆರ್​ಸಿಬಿ ಗೆಲ್ಲಲೇಬೇಕು.

ಹೈದರಾಬಾದ್ ವಿರುದ್ಧದ ಕಳೆದ ಮ್ಯಾಚ್​ನಲ್ಲಿ ತೀವ್ರ ಪೈಪೋಟಿ ಕೊಟ್ಟು ಸೋಲು ಕಂಡಿತ್ತು. ಆದರೆ ಇಂದು ನಡೆಯುವ ಪಂದ್ಯದಲ್ಲಿ ಆರ್​ಸಿಬಿ ಗೆಲುವು ಪಡೆಯುವುದು ಅನಿವಾರ್ಯವಾಗಿದೆ. ಇದರಿಂದ ವಿರಾಟ್​ ಕೊಹ್ಲಿ, ಫಾಫ್ ಬ್ಯಾಟಿಂಗ್​ನಲ್ಲಿ ಆರ್ಭಟಿಸಬೇಕಿದೆ. ಇದು ಅಲ್ಲದೇ ಮಧ್ಯಮ ಕ್ರಮಾಂಕದಲ್ಲಿ ಬರುವ ರಜತ್ ಪಾಟಿದಾರ್, ಲೋಮ್ರಾರ್ ಸೇರಿದಂತೆ ಉಳಿದ ಬ್ಯಾಟ್ಸ್​ಮನ್​ಗಳು ಉತ್ತಮ ಪ್ರದರ್ಶನ ನೀಡಬೇಕಿದೆ. ಇನ್ನು ಆರ್​ಸಿಬಿ ಬೌಲಿಂಗ್ ಕೂಡ ಕಳಪೆಮಟ್ಟ ತಲುಪಿದ್ದು ಈ ಪಂದ್ಯದಲ್ಲಾದರೂ ಯಶಸ್ವಿ ಪ್ರದರ್ಶನ ನೀಡಬೇಕು ಎನ್ನುವುದು ಫ್ಯಾನ್ಸ್​ ಅಭಿಪ್ರಾಯವಾಗಿದೆ.

ಇದನ್ನೂ ಓದಿ: ಅಬ್ಬಾ! ಮಳೆ.. ಮಳೆ.. ಕೊಚ್ಚಿ ಹೋದ ಬೈಕ್‌ಗಳು, ಪಲ್ಟಿಯಾದ ಲಾರಿ; ರಾಜ್ಯದಲ್ಲಿ ಇಂದು ವರುಣಾರ್ಭಟ!

ಕೆಕೆಆರ್ ಬಲಿಷ್ಠ ಪಡೆಯಾಗಿದ್ದರಿಂದ ಆರ್​ಸಿಬಿ ಮಣಿಸುವುದು ಕಷ್ಟವೇ ಆಗಿದೆ. ಕಳೆದ ಪಂದ್ಯದಲ್ಲಿ ಸೋತಿದ್ದ ಕೆಕೆಆರ್ ಈ ಮ್ಯಾಚ್ ಗೆಲ್ಲಲು ಹವಣಿಸುತ್ತಿದೆ. ಈಗಾಗಲೇ ಟೂರ್ನಿಯಲ್ಲಿ ಸೂಪರ್ ಆಗಿ ಆಡಿರುವ ಶ್ರೇಯಸ್ ಅಯ್ಯರ್ ಟೀಮ್ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ. ಆರ್​ಸಿಬಿ 7 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಗೆದ್ದು ಉಳಿದ 6 ಪಂದ್ಯಗಳನ್ನು ಸೋತಿದೆ. ಹೀಗಾಗಿ ಮುಂಬರುವ ಎಲ್ಲ ಪಂದ್ಯಗಳನ್ನು ಬೆಂಗಳೂರು ಗೆಲ್ಲಲೇಬೇಕಾಗಿದೆ. ಒಟ್ಟಾರೆ ಕೊನೆಯ 8 ಪಂದ್ಯಗಳಲ್ಲಿ ಆರ್‌ಸಿಬಿ ಕನಿಷ್ಠ 7 ಪಂದ್ಯಗಳನ್ನು ಗೆದ್ದರೆ ಪ್ಲೇಆಫ್‌ಗೆ ಅರ್ಹತೆ ಪಡೆಯಲಿದೆ. ಒಂದು ವೇಳೆ 6ರಲ್ಲಿ ಗೆದ್ದರೂ ಪ್ಲೇಆಫ್‌ ಅರ್ಹತೆಯು ಇತರೆ ತಂಡಗಳ ಫಲಿತಾಂಶ ಅವಲಂಬಿಸಬೇಕಾಗುತ್ತದೆ ಎಂದು ಹೇಳಲಾಗಿದೆ.

ಕೆಕೆಆರ್ ಮತ್ತು ಆರ್​ಸಿಬಿ ನಡುವಿನ ಪಂದ್ಯ ಈಡನ್​ ಗಾರ್ಡನ್ಸ್​ನಲ್ಲಿ ಇಂದು ಮಧ್ಯಾಹ್ನ 3:30ಕ್ಕೆ ನಡೆಯಲಿದೆ.

ಎರಡು ತಂಡಗಳ ಸಂಭವನೀಯ ಲಿಸ್ಟ್​​;

ಬೆಂಗಳೂರು ಸಂಭವನೀಯ ಟೀಮ್: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ಕ್ಯಾಪ್ಟನ್), ವಿಲ್ ಜಾಕ್ಸ್, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮಹಿಪಾಲ್ ಲೊಮ್ರೋರ್, ವಿಜಯ್​ಕುಮಾರ್ ವೈಶಾಕ್, ರೀಸ್ ಟೋಪ್ಲಿ, ಲಾಕಿ ಫರ್ಗುಸನ್, ಯಶ್ ದಯಾಲ್, ಮೊಹಮ್ಮದ್ ಸಿರಾಜ್.

ಕೋಲ್ಕತ್ತಾ ಸಂಭವನೀಯ ತಂಡ; ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಸುನಿಲ್ ನರೈನ್, ರಘುವಂಶಿ, ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

KKR ವಿರುದ್ಧ ಇವತ್ತು RCB ಗೆದ್ದರೆ ಫ್ಲೇ ಆಫ್ ಜೀವಂತ.. ಮೆಗಾ ಫೈಟ್‌ಗೆ ಫಾಫ್ ಪಡೆ ಮಾಸ್ಟರ್ ಪ್ಲಾನ್‌!

https://newsfirstlive.com/wp-content/uploads/2024/04/VIRAT_KOHLI.jpg

Load More