ಇಂದಿನ IPL ಫೈನಲ್​ ಪಂದ್ಯಕ್ಕೆ ‘ರೆಮಲ್’​​ ಸೈಕ್ಲೋನ್​ ಭೀತಿ.. ಮಳೆ ಬಂದ್ರೆ ಟ್ರೋಫಿ ಈ ತಂಡ ಸೇರುತ್ತೆ!

author-image
AS Harshith
Updated On
ಇಂದಿನ IPL ಫೈನಲ್​ ಪಂದ್ಯಕ್ಕೆ ‘ರೆಮಲ್’​​ ಸೈಕ್ಲೋನ್​ ಭೀತಿ.. ಮಳೆ ಬಂದ್ರೆ ಟ್ರೋಫಿ ಈ ತಂಡ ಸೇರುತ್ತೆ!
Advertisment
  • ಇಂದು 2024ರ ಬಹುನಿರೀಕ್ಷಿತ ಐಪಿಎಲ್​ ಫೈನಲ್​ ಪಂದ್ಯ
  • ಕೋಲ್ಕತ್ತಾ ಮತ್ತು ಹೈದರಾಬಾದ್​ ನಡುವೆ ಇಂದು ನಡೆಯಲಿದೆ ಜಟಾಪಟಿ
  • ಟ್ರೋಫಿ ಗೆಲ್ಲುವ ಕನಸು ಕಾಣುತ್ತಿದೆ ಇತ್ತಂಡಗಳು.. ಆದ್ರೆ ಮಳೆಯ ಗೋಳು ಕೇಳುವವರ್ಯಾರು?

ಇಂದು 2024ರ ಐಪಿಎಲ್​ ಪಂದ್ಯಕ್ಕೆ ತೆರೆ ಬೀಳಲಿದೆ. ಬಲಿಷ್ಠ ತಂಡಗಳಾದ ಕೋಲ್ಕತ್ತಾ ಮತ್ತು ಹೈದರಾಬಾದ್​ ತಂಡ ಇಂದು ಮುಖಾಮುಖಿಯಾಗುತ್ತಿದೆ. ಆ ಮೂಲಕ ಇಂದಿನ ಫೈನಲ್​ ಪಂದ್ಯದ ಮೂಲಕ ಟ್ರೋಫಿ ಕಸಿದುಕೊಳ್ಳಲಿದೆ. ಆದರೆ ಬಹುನಿರೀಕ್ಷಿತ ಇಂದಿನ ಐಪಿಎಲ್​ 2024ರ ಫೈನಲ್​ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ಕಾರಣ ಬಂಗಾಳಕೊಲ್ಲಿಯಲ್ಲಿ ರೆಮಲ್​ ಸೈಕ್ಲೋನ್​ ಹುಟ್ಟಿಕೊಂಡಿದ್ದು, ಇದರಿಂದಾಗಿ ಕೆಲವು ರಾಜ್ಯಗಳಿಗೆ ಇದರ ಭೀತಿ ಎದುರಾಗಿದೆ.

ಅಂದಹಾಗೆಯೇ ಇಂದು ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಹೈವೋಲ್ಟೇಜ್​ ಪಂದ್ಯ ನಡೆಯುತ್ತಿದೆ. ಫೈನಲ್​ ಟ್ರೋಫಿಗಾಗಿ ಕೋಲ್ಕತ್ತಾ ಮತ್ತು ಹೈದರಾಬಾದ್​ ಸೆಣೆಸಾಡಲಿವೆ. ಆದರೆ ‘ರೆಮಲ್​’ ಇದೀಗ ಕ್ರಿಕೆಟ್​ ಫ್ಯಾನ್ಸ್​ ನಿದ್ದೆಗೆಡಿಸಿದೆ.

publive-image

ಮೂರು ಬಾರಿ ಪಂದ್ಯ ರದ್ದು

ಇನ್ನು ಈ ಬಾರಿಯ ಮೂರು ಐಪಿಎಲ್​ ಪಂದ್ಯಗಳು ಮಳೆಯಿಂದಾಗಿ ರದ್ದಾಗಿತ್ತು. ಆ ಕಾರಣಕ್ಕೆ ಉಭಯ ತಂಡಗಳಿಗೆ ಒಂದೊಂದು ಅಂಕ ನೀಡಲಾಗಿತ್ತು. ಆದರೆ ಹಮಾಮಾನ ಇಲಾಖೆ ನೀಡಿದ ಮುನ್ಸೂಚನೆ ಗಮನಿಸಿದರೆ ರೆಮಲ್​ ಚಂಡ ಮಾರುತ ಬೀಸುವ ಲಕ್ಷಣ ಕಾಣುತ್ತಿದೆ. ಒಂದು ವೇಳೆ ಸೈಕ್ಲೋನ್​ ಭೀತಿಯಿಂದ ಇಂದಿನ ಪಂದ್ಯ ರದ್ದಾದರೆ ಯಾರ ಮುಡಿಗೆ ಟ್ರೋಫಿ ಸೇರಲಿದೆ ಎಂಬ ಲೆಕ್ಕಾಚಾರ ಅಭಿಮಾನಿಗಳ ತಲೆ ಕೆಡಿಸಿದೆ.

publive-image

ಇಂದು ಮಳೆ ಬಂದರೆ ಗತಿ ಏನು?

ಇಂದು ಪಂದ್ಯದ ವೇಳೆ ಮಳೆ ಶಾಕ್ ಕೊಟ್ಟರೆ ಅದಕ್ಕಾಗಿ ದಿನವೊಂದನ್ನು ಮೀಸಲಿಟ್ಟು ಆಡಿಸಲಾಗುತ್ತದೆ. ಒಂದು ವೇಳೆ ಮೀಸಲು ದಿನದಂದೂ ಸಹ ಮಳೆ ಬಂದರೆ 5 ಓವರ್​ನಲ್ಲಿ ಪಂದ್ಯವಾಡಿಸಲು ಸಾಧ್ಯವಾಗುತ್ತದಾ ಎಂದು ನೋಡಲಾಗುತ್ತದೆ.

publive-image

ಇದನ್ನೂ ಓದಿ: ಪ್ರಬುದ್ಧ ಕೊಲೆ ಕೇಸ್​ಗೆ ಬಿಗ್​ ಟ್ವಿಸ್ಟ್​; ಎಲ್ಲರ ಕಣ್ಣು ತಪ್ಪಿಸಲು ಅಪ್ರಾಪ್ತ ಬಾಲಕ ಮಾಡಿದ್ದ ಸಖತ್​ ಪ್ಲಾನ್

ಐದು ಓವರ್​ನ ಪಂದ್ಯ ಸಹ ಸಾಧ್ಯವಾಗದೆ ಹೋದರೆ ಸೂಪರ್​ ಓವರ್​ ಮೂಲಕ ಪಂದ್ಯ ನಡೆಸುವ ಸಾಧ್ಯತೆ ಇದೆ. ಇವೆಲ್ಲ ಅಡಚಣೆ ಎದುರಾದರೆ, ಧಾರಾಕಾರ ಮಳೆಯಿಂದ ಪಂದ್ಯ ನಡೆಸಲು ಸಾಧ್ಯವಾಗುವುದಿಲ್ಲ ಎಂಬುದಾದರೆ ಪಾಯಿಂಟ್​ ಟೇಬಲ್​ ಪ್ರಕಾರ ಕೋಲ್ಕತ್ತಾ ಟ್ರೋಫಿ ಮುಡಿಗೇರಿಸಿಕೊಳ್ಳುವ ಸಾಧ್ಯತೆ ಬಹುಪಾಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment