ಶೀಘ್ರದಲ್ಲೇ ಆರ್​ಸಿಬಿ ಮಾಲೀಕರ ಬದಲಾವಣೆ..? ಬಿಸಿಸಿಐ ಮೇಲೆ ಹೆಚ್ಚಿದ ಭಾರೀ ಒತ್ತಡ..!

author-image
Ganesh
Updated On
ಶೀಘ್ರದಲ್ಲೇ ಆರ್​ಸಿಬಿ ಮಾಲೀಕರ ಬದಲಾವಣೆ..? ಬಿಸಿಸಿಐ ಮೇಲೆ ಹೆಚ್ಚಿದ ಭಾರೀ ಒತ್ತಡ..!
Advertisment
  • 2024ರಲ್ಲಿ ಆರ್​ಸಿಬಿ ಸತತ ಸೋಲು, ಹೀನಾಯ ಸೋಲು
  • ಕೋಪಗೊಂಡ ಟೆನ್ನಿಸ್ ಆಟಗಾರ ಮಹೇಶ್ ಭೂಪತಿ ಹೇಳಿದ್ದೇನು..?
  • ಸದ್ಯ ಆರ್​ಸಿಬಿ ಫ್ರಾಂಚೈಸಿಯ ಮಾಲೀಕರು ಯಾರು?

IPL 2024ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪ್ರದರ್ಶನವು ನಿರಾಶಾದಾಯಕವಾಗಿದೆ. 7 ಪಂದ್ಯಗಳ ಪೈಕಿ 6ರಲ್ಲಿ ಸೋಲು ಕಂಡಿದೆ. ತಂಡದ ಏಕೈಕ ಗೆಲುವು ಪಂಜಾಬ್ ಕಿಂಗ್ಸ್ ವಿರುದ್ಧ ಬಂದಿದೆ.

ಆರ್‌ಸಿಬಿ ತನ್ನ ಏಳನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 25 ರನ್‌ಗಳ ಸೋಲನ್ನು ಕಂಡಿತು. ಈ ಪಂದ್ಯದಲ್ಲಿ ಬೌಲರ್ಸ್ ಹೀನಾಯವಾಗಿ ರನ್ ಹೊಡೆಸಿಕೊಂಡರು. ಪರಿಣಾಮ ಸನ್‌ರೈಸರ್ಸ್ 20 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 287 ರನ್ ಗಳಿಸಿತ್ತು. ಐಪಿಎಲ್ ಇತಿಹಾಸದಲ್ಲೇ ಇದು ಅತಿದೊಡ್ಡ ಸ್ಕೋರ್ ಆಗಿದೆ.

ಇದನ್ನೂ ಓದಿ:ಕ್ರೇನ್​​ಗೆ ಆಟೋ ಡಿಕ್ಕಿ; 22 ವರ್ಷದ ಮಹಿಳೆ, ಆಕೆಯ ಇಬ್ಬರು ಮಕ್ಕಳು ಸೇರಿ 7 ಮಂದಿ ಸಾವು

ಸನ್ ರೈಸರ್ಸ್ ನೀಡಿದ 288 ರನ್​ಗಳ ಗುರಿ ಬೆನ್ನಟ್ಟಿದ ಆರ್​ಸಿಬಿ ಉತ್ತಮ ಹೋರಾಟ ನಡೆಸಿತು. 20 ಓವರ್‌ಗಳಲ್ಲಿ 7 ವಿಕೆಟ್‌ಗೆ 262 ರನ್ ಗಳಿಸಿತು. ದಿನೇಶ್ ಕಾರ್ತಿಕ್ ತಂಡದ ಮಾನ ಕಾಪಾಡಿದರು. 35 ಎಸೆತಗಳಲ್ಲಿ 83 ರನ್‌ಗಳನ್ನು ಬಾರಿಸಿದರು. ಈ ಸೋಲಿನ ಬಳಿಕ ಆರ್‌ಸಿಬಿ ಪಾಯಿಂಟ್ಸ್ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಆರ್‌ಸಿಬಿ ಸತತ ಸೋಲಿನಿಂದ ಭಾರತದ ಶ್ರೇಷ್ಠ ಟೆನಿಸ್ ಆಟಗಾರ ಮಹೇಶ್ ಭೂಪತಿ ತೀವ್ರ ಕೋಪಗೊಂಡಿದ್ದಾರೆ. ಆರ್‌ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡುವಂತೆ ಬಿಸಿಸಿಐಗೆ ಒತ್ತಾಯಿಸಿದ್ದಾರೆ. ಹೊಸ ಮಾಲೀಕರ ಬಂದರಷ್ಟೇ ಫ್ರಾಂಚೈಸಿಗೆ ಏಳಿಗೆ ಇದೆ ಎಂದಿದ್ದಾರೆ.

ಆಟ, ಐಪಿಎಲ್, ಅಭಿಮಾನಿಗಳು ಮತ್ತು ಆಟಗಾರರ ಸಲುವಾಗಿ BCCI ಆರ್​ಸಿಬಿಯನ್ನು ಮಾರಾಟ ಮಾಡಬೇಕು ಎಂದು ಭಾವಿಸುತ್ತೇನೆ. ತಂಡಕ್ಕೆ ಹೊಸ ಮಾಲೀಕರ ಅಗತ್ಯವಿದೆ. ಹೊಸ ಮಾಲೀಕರು ತಂಡವನ್ನು ಉತ್ತಮ ಫ್ರಾಂಚೈಸಿಯನ್ನಾಗಿ ಮಾಡುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ:ದ್ವಾರಕೀಶ್ ಆರೋಗ್ಯದಲ್ಲಿ ಏನಾಗಿತ್ತು..? ಸಾಯುವ ಕೊನೇ ಕ್ಷಣಗಳು ಹೇಗಿದ್ದವು..?

ಆರ್‌ಸಿಬಿಯ ಬೌಲರ್‌ಗಳನ್ನು ಹೊರತುಪಡಿಸಿ, ಬ್ಯಾಟ್ಸ್‌ಮನ್‌ಗಳು ಸಹ ಈ ಬಾರಿ ನಿರಾಸೆಗೊಳಿಸಿದ್ದಾರೆ. ವಿರಾಟ್ ಕೊಹ್ಲಿ ಮತ್ತು ದಿನೇಶ್ ಕಾರ್ತಿಕ್ ಹೊರತುಪಡಿಸಿದರೆ ಯಾರೂ ಸ್ಥಿರತೆ ತೋರಲಿಲ್ಲ. 2008ರಲ್ಲಿ ಸ್ಥಾಪನೆಯಾದ ಆರ್​ಸಿಬಿ ಫ್ರಾಂಚೈಸಿಯನ್ನು ವಿಜಯ್ ಮಲ್ಯ ಖರೀದಿಸಿದ್ದರು. ಬರೋಬ್ಬರಿ 111.6 ಮಿಲಿಯನ್‌ ಡಾಲರ್​ಗೆ ಖರೀದಿಸಿದ್ದರು. ಇದು ಐಪಿಎಲ್​ನ ಎರಡನೇ ಅತಿ ಹೆಚ್ಚು ಬಿಡ್ ಆಗಿತ್ತು. ಆದರೆ 2016ರಲ್ಲಿ ಮಲ್ಯ, ಸಾಲಗಳನ್ನು ಮರುಪಾವತಿಸಲಿಲ್ಲ. ಹಾಗಾಗಿ ಮತ್ತೊಬ್ಬರು ತಂಡವನ್ನು ಖರೀದಿಸಿದರು. ಸದ್ಯ ಆರ್​ಸಿಬಿ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್‌ನ ಮಾಲೀಕತ್ವದಲ್ಲಿದೆ. 2022ರ ಹೊತ್ತಿಗೆ ಆರ್​ಸಿಬಿ 3ನೇ ಶ್ರೀಮಂತ ಫ್ರಾಂಚೈಸ್ ಆಗಿದ್ದು, ಅದರ ನಿವ್ವಳ ಮೌಲ್ಯ 697 ಕೋಟಿ ರೂಪಾಯಿ.

ಇದನ್ನೂ ಓದಿ:ಬ್ರೇಕ್ ಫೇಲ್, ಬೆಳಗಾವಿಯಲ್ಲಿ 20 ಪ್ರಯಾಣಿಕರಿದ್ದ ರಾಜಹಂಸ ಬಸ್​ ಪಲ್ಟಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment