newsfirstkannada.com

ಐಪಿಎಲ್​​ ಫೀವರ್ ಇದೆಯೋ ಇಲ್ಲವೋ; ಆದರೆ ಈತನ ‘ಮಹಾ ಜಾತ್ರೆ’ ಈಗಾಗಲೇ ಶುರು..!

Share :

Published March 7, 2024 at 11:41am

    ಸೀಸನ್​​-17ಕ್ಕೂ ಮುನ್ನವೇ ಈ ಆಟಗಾರನ ಫೀವರ್ ಜೋರು

    ಮಿಸ್ಟರ್ ಕೂಲ್​ ಗ್ರ್ಯಾಂಡ್ ಎಂಟ್ರಿಗೆ ಫ್ಯಾನ್ಸ್ ಹಂಗಾಮ

    ಸಂತಸಕ್ಕೆ ಪಾರವೇ ಇಲ್ಲ.. ನೋಡಲು ಮುಗಿಬಿದ್ದ ಫ್ಯಾನ್ಸ್

ಕ್ಯಾಚ್ ರಿಚ್ ಲೀಗ್​​ಗೆ ಐದಿನೈದೇ ಐದಿನೈದು ದಿನ ಬಾಕಿ ಇದೆ. ಈ ಸೀಸನ್​​​ಗಾಗಿ ಎಲ್ಲಾ ಫ್ರಾಂಚೈಸಿಗಳು ಸಕಲ ಸಿದ್ದತೆ ನಡೆಸ್ತಿವೆ. ಆದ್ರೀಗ ಈ ಐಪಿಎಲ್​ ಫೀವರ್​ಗಿಂತ ಆತನ ಫೀವರ್ ಜೋರಾಗಿದೆ. ಮತ್ತೆ ಮಹಾ ಜಾತ್ರೆ ನಡೆಯೋ ಮುನ್ಸೂಚನೆಯೂ ಸಿಕ್ಕಿದೆ.

ಇಂಡಿಯನ್ ಪ್ರೀಮಿಯರ್ ಲೀಗ್​​ಗೆ ಕೌಂಟ್​ಡೌನ್ ಶುರುವಾಗಿದೆ. ಸೀಸನ್​​​-17ರಲ್ಲಿ ಕಪ್​ ಗೆಲ್ಲೋ ರಣ ಉತ್ಸಾಹದಲ್ಲಿ ಇಡೀ 10 ತಂಡಗಳು ಸಿದ್ದತೆ ನಡೆಸ್ತಿವೆ. ಇದಕ್ಕಾಗಿ ಬಲಿಷ್ಠ ತಂಡಗಳನ್ನೇ ಕಟ್ಟಿರೋ ಫ್ರಾಂಚೈಸಿಗಳು, ಅಂತಿಮ ಹಂತದ ಕಸರತ್ತು ನಡೆಸ್ತಿವೆ. ತೆರೆ ಮರೆಯಲ್ಲೇ ಸ್ಟ್ರಾಟರ್ಜಿ, ಗೇಮ್​ಪ್ಲಾನ್ ರೂಪಿಸ್ತಿರೋ ಫ್ರಾಂಚೈಸಿಗಳು, ಅಸಲಿ ಅಖಾಡಕ್ಕಿಳಿಯೋದು ಒಂದೇ ಬಾಕಿಯಿದೆ. ಈ ಅಸಲಿ ಐಪಿಎಲ್ ಫೀವರ್ ಆರಂಭಕ್ಕೂ ಮುನ್ನವೇ ಒಬ್ಬರ ಫೀವರ್ ಶುರುವಾಗಿದೆ. ಅದೇ ಮಿಸ್ಟರ್​ ಕೂಲ್ ಮಾಹಿ ಫೀವರ್​.

ಐಪಿಎಲ್​ ಸೀಸನ್​-16ರಲ್ಲಿ ಮಾಹಿ ಫೀವರ್ ಕಣ್ಣು ಕಟ್ಟಿದಂತಿದೆ. ಈ ಹಿಂದಿನ ಸೀಸನ್​​​​​​​ ಐಪಿಎಲ್ ಹಂಗಾಮಕ್ಕಿಂತ ಹೆಚ್ಚು ನಡೆದಿದ್ದೆ ಮಾಹಿ ಜಾತ್ರೆ. ಪ್ರತಿ ಸ್ಟೇಡಿಯಂನಲ್ಲೂ ತಲಾ ಅಭಿಮಾನಿಗಳ ಉತ್ಸಾವವೇ ನಡೆದಿದ್ದು, ಧೋನಿ ಧೋನಿ ಎಂಬ ಘೋಷವಾಕ್ಯಗಳು ಮುಗಿಲು ಮುಟ್ಟಿತ್ತು. ಆದ್ರೀಗ ಇದೇ ಫೀವರ್ ಸೀಸನ್​​-17ರಲ್ಲೂ ಶುರುವಾಗುವ ಮುನ್ಸೂಚನೆ ಸಿಕ್ಕಿದೆ.

ಸೀಸನ್​​-17ಕ್ಕೂ ಮುನ್ನವೇ ಮಾಹಿ ಫೀವರ್ ಶುರು..!
ಅಂಬಾನಿ ಪುತ್ರನ ಪ್ರಿ-ವೆಡ್ಡಿಂಗ್​ನಲ್ಲಿ ಮಿಂಚಿದ್ದ ಮಾಹಿ, ಈಗ ಸೀಸನ್​​-17ರ ಐಪಿಎಲ್​​ಗಾಗಿ ಚೆನ್ನೈಗೆ ಆಗಮಿಸಿದ್ದಾರೆ. ಏರ್​​ಪೋರ್ಟ್​ನಲ್ಲಿ ಮಾಹಿ ಕಾಲಿಟ್ಟಿದ್ದೇ ತಡ, ಚೆನ್ನೈನಲ್ಲಿ ಮಾಹಿಯ ಫೀವರ್ ಶುರುವಾಯ್ತು. ಧೋನಿಯನ್ನ ಕಾರಿನಲ್ಲಿ ಆಗಮಿಸುತ್ತಿರುವುದನ್ನ ದಾರಿಯಲ್ಲಿ ಕಂಡಿದ್ದ ಫ್ಯಾನ್ಸ್,​ ಸಂತಸಕ್ಕೆ ನಿಜಕ್ಕೂ ಪಾರವೇ ಇರಲಿಲ್ಲ. ರಸ್ತೆಯುದ್ದಕ್ಕೂ ಧೋನಿಯನ್ನ ಕಾಣುತ್ತಿದ್ದ ಫ್ಯಾನ್ಸ್​ ಅಂತೂ, ಬೈಕ್​ ನಿಲ್ಲಿಸಿ ಧೋನಿಯನ್ನ ಕಣ್ತುಂಬಿಕೊಳ್ಳುತ್ತಿದ್ರೆ. ಕೆಲವರು ಧೋನಿಯ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿ ಬಿದ್ದಿದ್ರು.

‘ಲಿಯೊ‘ ಮೂವಿ ಸ್ಟ್ರೈಲ್​​ನಲ್ಲಿ ಮಾಹಿಗೆ ಸ್ವಾಗತ..!
ಧೋನಿ ಏರ್​ಪೋರ್ಟ್​ಗೆ ಎಂಟ್ರಿ ನೀಡ್ತಿದ್ದಂತೆ. ಇತ್ತ ಹೋಟೆಲ್​ನಲ್ಲಿ ಧೋನಿಯ ಅದ್ದೂರಿ ಸ್ವಾಗತದ ಸಿದ್ಧತೆ ಜೋರಾಗಿತ್ತು. ಅದರಲ್ಲೂ ಲಿಯೋ ಸಿನಿಮಾದ ಸ್ಟ್ರೈಲ್​​ನಲ್ಲಿ ತಲಾ ಧೋನಿಯ ಪೀಠಿಕೆ ನಿಜಕ್ಕೂ ನೆಕ್ಸ್ಟ್ ಲೆವೆಲ್​ನಲ್ಲಿತ್ತು.

ಜಾಹೀರಾತಿನಲ್ಲೂ ಮಾಹಿ ಮಿಂಚಿಂಗ್​..!
ಅತ್ತ ಧೋನಿ ಚೆನ್ನೈ ಕ್ಯಾಂಪ್​​ಗೆ ಗ್ರ್ಯಾಂಡ್ ಎಂಟ್ರಿ ನೀಡಿದ್ರೆ. ಇತ್ತ ಫ್ಯಾನ್ಸ್​ ಮನದಲ್ಲಿ ತಳಮಳ ಕಾಡ್ತಿತ್ತು. ಧೋನಿಯ ನ್ಯೂ ರೋಲ್​ ಫೋಸ್ಟ್​ನಿಂದ ಯಾವ ಬಾಂಬ್ ಸಿಡಿಸ್ತಾರೆ ಅನ್ನೋ ಢವಢವ ಇತ್ತು. ಈ ಎಲ್ಲಾ ಸಸ್ಪೆನ್ಸ್​ಗೆ ಐಪಿಎಲ್ ಜಾಹೀರಾತು ತೆರೆ ಎಳೆಯಿತು. ಈ ಜಾಹೀರಾತಿನ ಡಬಲ್ ರೋಲ್​ನಲ್ಲಿ ಮಾಹಿ ಮಿಂಚಿದ್ದಾರೆ. ಈ ಪೈಕಿ ಓಲ್ಡ್​ ಏಜ್​ ಗೆಟಪ್​ಗೆ ಫ್ಯಾನ್ಸ್​ ಬಹುಪರಾಕ್ ಎಂದಿದ್ದಾರೆ. ಮತ್ತೊಮ್ಮೆ ಈ ಐಪಿಎಲ್​ನಲ್ಲಿ ಧೋನಿ ಮಹಾ ಜಾತ್ರೆ ನಡೆಯೋದು ಕನ್ಫರ್ಮ್.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಐಪಿಎಲ್​​ ಫೀವರ್ ಇದೆಯೋ ಇಲ್ಲವೋ; ಆದರೆ ಈತನ ‘ಮಹಾ ಜಾತ್ರೆ’ ಈಗಾಗಲೇ ಶುರು..!

https://newsfirstlive.com/wp-content/uploads/2023/11/IPL-2024-1.jpg

Load More