newsfirstkannada.com

ಚಿನ್ನಸ್ವಾಮಿಯಲ್ಲಿ ವಿರಾಟ್​ ವೀರಾವೇಶ.. ತವರಿನ ಪ್ರೇಕ್ಷಕರಿಗೆ ಮನರಂಜನೆಯ ಫುಲ್ ಮೀಲ್ಸ್ ಉಣಬಡಿಸಿದ ಕಿಂಗ್ ಕೊಹ್ಲಿ

Share :

Published March 30, 2024 at 2:05pm

Update March 30, 2024 at 2:09pm

    ಪಂದ್ಯ ಸೋತ್ರೂ ವಿರಾಟ್ ಚಿನ್ನಸ್ವಾಮಿಯಲ್ಲಿ ವಿರಾಜಿಸಿದ್ದಾರೆ

    ಕೆಕೆಆರ್ ವಿರುದ್ಧ ನರಸಿಂಹನ ಉಗ್ರರೂಪ ತಾಳಿದ್ದ ವಿರಾಟ್.!

    ಐಪಿಎಲ್​​​​​​ ಟೂರ್ನಿಯಲ್ಲಿ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಗರಿ

ಆರ್​ಸಿಬಿಯ ಸತತ ಎರಡನೇ ಗೆಲುವಿಗೆ ಕೆಕೆಆರ್​​​​​​​​ ಅಡ್ಡಗಾಲಾಗಿದೆ. ವಿಕ್ಟರಿ ನಿರೀಕ್ಷೆಯಲ್ಲಿದ್ದ ಫ್ಯಾನ್ಸ್​ ಬೇಸರ ಹೇಳತೀರದು. ಆದ್ರೆ ಪಂದ್ಯ ಸೋತ್ರೂ ವಿರಾಟ್ ಕೊಹ್ಲಿ ಚಿನ್ನಸ್ವಾಮಿ ಕಿಂಗ್​ಡಮ್​​​ನಲ್ಲಿ ವಿರಾಜಿಸಿದ್ದಾರೆ. ಸೋಲಿನಲ್ಲೂ ವಿರಾಟ್​ ವೀರಾವೇಶ ಹೇಗಿತ್ತು

ಅಬ್ಬಬ್ಬಾ, ಅದೆಂಥಾ ವೀರಾವೇಶ, ಸಿಕ್ಸರ್​​​​-ಬೌಂಡರಿಗಳ ಮೊರೆತ. ನೆರೆದಿದ್ದ ಪ್ರೇಕ್ಷಕರಿಗೆ ಪಕ್ಕಾ ವಸೂಲಿ ಟ್ರೀಟ್​​ ಸಿಗ್ತು. ಬ್ಯಾಟಿಂಗ್​ನಲ್ಲಿ ಸುನಾಮಿ-ಸುಂಟಗಾಳಿಯನ್ನೆ ಎಬ್ಬಿಸಿದ ವಿರಾಟ್ ಕೊಹ್ಲಿ ಚಿನ್ನಸ್ವಾಮಿ ನನ್ನ ಕಿಂಗ್​ಡಮ್ ಅನ್ನೋದನ್ನ ಪ್ರೂವ್ ಮಾಡಿದ್ರು.

ಚಿನ್ನಸ್ವಾಮಿ ಕಿಂಗ್​ಡಮ್​​​​​​ನಲ್ಲಿ ಕೊಹ್ಲಿ ರಣಾರ್ಭಟ..!

ಹೇಳಿಕೇಳಿ ಎಂ.ಚಿನ್ನಸ್ವಾಮಿ ಮೈದಾನ ಕೊಹ್ಲಿಯ ಕಿಂಗ್​ಡಮ್​​​. ಅಂದ್ಮೇಲೆ ವಿರಾಟ್​ ಅಬ್ಬರ ಇರಲೇಬೇಕು ಅಲ್ವಾ?. ಕೆಕೆಆರ್ ವಿರುದ್ಧ ನರಸಿಂಹನ ಉಗ್ರರೂಪ ತಾಳಿದ ವಿರಾಟ್​​​, ಸಿಕ್ಸರ್​​​-ಬೌಂಡರಿಗಳ ಸರಮಾಲೆಯನ್ನ ಕಟ್ಟಿದ್ರು. ಕೊಹ್ಲಿ ಒಂದೊಂದು ಸಿಕ್ಸ್​​, ಬೌಂಡ್ರಿ ಸಿಡಿಸ್ತಿದ್ರೆ ಪ್ರೇಕ್ಷಕರು ಹುಚ್ಚೆದ್ದು ಕುಣಿದು ಕುಪ್ಪಳಿಸಿದ್ರು.

ತನ್ನ ಕಿಂಗ್​ಡಮ್​​​​ನಲ್ಲಿ ಸತತ 2ನೇ ಹಾಫ್​ಸೆಂಚುರಿ..!

ಕೆಕೆಆರ್ ಬೌಲರ್​ಗಳ ಮೈಚಳಿ ಬಿಡಿಸಿದ ಕೊಹ್ಲಿ ಜಸ್ಟ್​ 36 ಎಸೆತಗಳಲ್ಲಿ ಹಾಫ್​ಸೆಂಚುರಿ ಕಂಪ್ಲೀಟ್ ಮಾಡಿದ್ರು. ಆ ಮೂಲಕ ಪ್ರಸಕ್ತ ಐಪಿಎಲ್​​​​​​ ಟೂರ್ನಿಯಲ್ಲಿ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಗಳಿಸಿದ್ರು. ಕಳೆದ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್ ವಿರುದ್ಧ ಸಿಡಿಲಬ್ಬರದ 77 ರನ್​ ಚಚ್ಚಿ ಶೈನ್ ಆಗಿದ್ರು.

ಫೇವರಿಟ್​​ ಗ್ರೌಂಡ್​​​ನಲ್ಲಿ 22ನೇ ಅರ್ಧಶತಕ..!

ದಶಕಕ್ಕೂ ಅಧಿಕ ಕಾಲ ಕೊಹ್ಲಿ ಚಿನ್ನಸ್ವಾಮಿ ಕಿಂಗ್​​ಡಮ್​ನಲ್ಲಿ ರಾಜನಂತೆ ಮೆರೆದಿದ್ದಾರೆ. ಕೆಕೆಆರ್ ಕೂಡ ವಿರಾಟ್​ ವೀರಾವೇಶಕ್ಕೆ ಬ್ರೇಕ್​​ ಹಾಕಲು ಸಾಧ್ಯವಾಗ್ಲಿಲ್ಲ. ಸ್ಫೋಟಕ ಅರ್ಧಶತಕ ಪೂರೈಸಿದ ಕಿಂಗ್ ಕೊಹ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 22ನೇ ಹಾಫ್​​ಸೆಂಚುರಿ ಪೂರ್ಣಗೊಳಿಸಿದ್ರು.

ಗ್ರೀನ್​​​-ಮ್ಯಾಕ್ಸ್​ವೆಲ್​ ಜೊತೆ ಭರ್ಜರಿ ಜೊತೆಯಾಟ

ಕೆಕೆಆರ್ ಮೇಲೆ ದಂಡೆತ್ತಿದ್ದ ಹೋದ ಕಿಂಗ್ ಕೊಹ್ಲಿ ಕ್ಯಾಮರೂನ್ ಗ್ರೀನ್​ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್​ ಉತ್ತಮ ಜೊತೆಯಾಟ ಆಡಿ ಸೈ ಅನ್ನಿಸಿಕೊಂಡಿದ್ರು. ಗ್ರೀನ್​ ಜೊತೆ ಕೂಡಿಕೊಂಡು ಬಿರುಸಿನ 65 ರನ್ ಕಲೆಹಾಕಿದ್ರೆ, ಕೊಹ್ಲಿ ಹಾಗೂ ಮ್ಯಾಕ್ಸ್​ವೆಲ್​ ಸಿಡಿಲಬ್ಬರದ 42 ರನ್​ ಬಾರಿಸಿದ್ರು.

ಕೋಲ್ಕತ್ತಾಗೆ ಚಳ್ಳೆಹಣ್ಣು ತಿನ್ನಿಸಿದ ಛಲದಂಕ..!

ಮೊದಲ ಎಸೆತದಿಂದ ಕೊನೆ ಎಸೆತದ ತನಕ ಕೊಹ್ಲಿ, ಕೋಲ್ಕತ್ತಾಗೆ ದುಸ್ವಪ್ನರಾಗಿ ಕಾಡಿದ್ರು. ಒಂದೂವರೆ ಗಂಟೆ ಕಾಲ ಕೆಕೆಆರ್ ಬೌಲರ್ಸ್​ ಬೆಂಡೆತ್ತಿದ ವಿರಾಟ್​​ 59 ಎಸೆತಗಳಲ್ಲಿ ವಿಸ್ಫೋಟಕ 83 ರನ್ ಗಳಿಸಿ ಅಜೇಯರಾಗುಳಿದ್ರು. ಆ ಮೂಲಕ ತವರಿನ ಪ್ರೇಕ್ಷಕರಿಗೆ ಮನರಂಜನೆ ಫುಲ್ ಮೀಲ್ಸ್ ಉಣಬಡಿಸಿದ್ರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಚಿನ್ನಸ್ವಾಮಿಯಲ್ಲಿ ವಿರಾಟ್​ ವೀರಾವೇಶ.. ತವರಿನ ಪ್ರೇಕ್ಷಕರಿಗೆ ಮನರಂಜನೆಯ ಫುಲ್ ಮೀಲ್ಸ್ ಉಣಬಡಿಸಿದ ಕಿಂಗ್ ಕೊಹ್ಲಿ

https://newsfirstlive.com/wp-content/uploads/2024/03/VIRAT_KOHLI-4.jpg

Load More