Advertisment

KKR vs SRH ಪಂದ್ಯ ಮಳೆ ಆತಂಕ.. ಪಂದ್ಯ ಕ್ಯಾನ್ಸಲ್​ ಆದರೆ ಫೈನಲ್​​ಗೆ ಹೋಗೋದು ಈ ತಂಡ..!

author-image
Ganesh
Updated On
KKR vs SRH ಪಂದ್ಯ ಮಳೆ ಆತಂಕ.. ಪಂದ್ಯ ಕ್ಯಾನ್ಸಲ್​ ಆದರೆ ಫೈನಲ್​​ಗೆ ಹೋಗೋದು ಈ ತಂಡ..!
Advertisment
  • ಇವತ್ತು ಕೋಲ್ಕತ್ತ, ಹೈದರಾಬಾದ್ ತಂಡಗಳ ನಡುವೆ ಫೈಟ್
  • ಮೋದಿ ಸ್ಟೇಡಿಯಂನಲ್ಲಿ ಸಂಜೆ ವೇಳೆಗೆ ಮಳೆ ನಿರೀಕ್ಷೆ ಮಾಡಲಾಗಿದೆ
  • ನಾಳೆ ಆರ್​ಸಿಬಿ ಜೊತೆ ರಾಜಸ್ಥಾನ್ ಎಲಿಮಿನೇಟರ್ ಪಂದ್ಯ

ಐಪಿಎಲ್​ ಸೀಸನ್ 17 ಪ್ಲೇಆಫ್ ಹಂತಕ್ಕೆ ಬಂದು ನಿಂತಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ.

Advertisment

ಗುಜರಾತ್​ನ ಶ್ರೀ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಇವತ್ತಿನ ಪಂದ್ಯಕ್ಕೆ ಮಳೆಯ ಆತಂಕ ಇದೆ. ಯಾಕೆಂದರೆ ಮೇ 13 ರಂದು ಗುಜರಾತ್​​ ಟೈಟನ್ಸ್ ಹಾಗೂ ಕೋಲ್ಕತ್ತ ನೈಟ್​ ರೈಡರ್ಸ್ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಹೀಗಾಗಿ ಇವತ್ತಿನ ಪಂದ್ಯಕ್ಕೆ ಮಳೆ ಬಂದರೆ ಏನು ಕತೆ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.

ಇದನ್ನೂ ಓದಿ:ನಾಳೆ ಆರ್​ಸಿಬಿ ಪಂದ್ಯ.. ಇವತ್ತು ಫೈನಲ್​​ಗೆ ಹೋಗೋದು ಯಾರು..?

ಏನಾಗುತ್ತೆ ಮಳೆ ಬಂದರೆ..?
ಕ್ವಾಲಿಫೈಯರ್-1 ಪಂದ್ಯದ ವೇಳೆ ಮಳೆ ಬಂದರೆ ಅಂಪೈರ್​​ಗಳು ತಲಾ ಐದು ಓವರ್​ನ ಪಂದ್ಯ ನಡೆಸಲು ಪ್ರಯತ್ನ ಮಾಡುತ್ತಾರೆ. ಅದೂ ಸಾಧ್ಯವಾಗದಿದ್ದರೆ ಸೂಪರ್ ಓವರ್ ಮೂಲಕ ಫಲಿತಾಂಶ ಪಡೆಯಲು ಪ್ರಯತ್ನಿಸುತ್ತಾರೆ. ಒಂದು ವೇಳೆ ಸೂಪರ್ ಓವರ್ ಕೂಡ ಸಾಧ್ಯವಾಗದಿದ್ದರೆ ಪಂದ್ಯ ರದ್ದಾಗುತ್ತದೆ.

ಅಂತಹ ಪರಿಸ್ಥಿತಿಯಲ್ಲಿ ಪಾಯಿಂಟ್ಸ್ ಟೇಬಲ್ ಪ್ರಕಾರ ವಿಜೇತರನ್ನು ಘೋಷಿಸಲಾಗುತ್ತದೆ. ಅಂದರೆ ಗುಂಪು ಹಂತದ ನಂತರ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ತಂಡವನ್ನು ವಿಜೇತ ಎಂದು ಘೋಷಿಸುತ್ತಾರೆ. ಸದ್ಯ ಪಾಯಿಂಟ್ಸ್​ ಟೇಬಲ್​ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಅಗ್ರ ಸ್ಥಾನದಲ್ಲಿರೋದ್ರಿಂದ ಕೆಕೆಆರ್​ ಫೈನಲ್ ಪ್ರವೇಶ ಮಾಡಲಿದೆ. ಹೈದರಾಬಾದ್​ ಕ್ವಾಲಿಫೈಯರ್​-2 ಪಂದ್ಯವನ್ನು ಆಡಬೇಕಾಗುತ್ತದೆ.

Advertisment

ಇದನ್ನೂ ಓದಿ:ಗೆದ್ದೆತ್ತಿನ ಬಾಲ ಹಿಡಿಯೋದು ಅಂದ್ರೆ ಹೀಗೆಯೇ ಅಂತೆ.. ಸಖತ್ ವೈರಲ್ ಆಗ್ತಿದ್ದಾರೆ CSK ಈ ಅಭಿಮಾನಿಗಳು..!

ಕ್ವಾಲಿಫೈಯರ್-1 ರಂತೆಯೇ ಎಲಿಮಿನೇಟರ್ ಮತ್ತು ಕ್ವಾಲಿಫೈಯರ್-2ರಲ್ಲೂ ಮಳೆ ಬಂದರೆ ಅದೇ ನಿಯಮದಡಿ ವಿಜೇತರನ್ನು ನಿರ್ಧರಿಸಲಾಗುತ್ತದೆ. ಅದಾಗ್ಯೂ ಫೈನಲ್ ನಿಯಮಗಳು ಸ್ವಲ್ಪ ಭಿನ್ನವಾಗಿರುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment