newsfirstkannada.com

ಪ್ಲೇ ಆಫ್ ಕನಸು ಇನ್ನೂ ಜೀವಂತ.. ಪಾಯಿಂಟ್ಸ್ ಟೇಬಲ್​ RCB ಜಿಗಿತ.. ನೋಡೋಕೆ ಖುಷಿ ಆಗುತ್ತೆ..!

Share :

Published May 13, 2024 at 10:23am

Update May 13, 2024 at 10:08am

    ಆರಂಭದಲ್ಲಿ ಸತತ ಸೋಲುಗಳು, ಕೊನೆಯಲ್ಲಿ ಸತತ ಗೆಲುವು

    ಪ್ಲೇ ಆಫ್​ಗೆ ಹೋಗೋದಕ್ಕೆ ಬೆಂಗಳೂರಿಗಿದೆ ಇನ್ನೊಂದು ಹೆಜ್ಜೆ

    ಬೆಂಗಳೂರಿಗೆ ಉಳಿದಿರೋದು ಇದು ಒಂದೇ ಒಂದು ಚಾನ್ಸ್​.!

ಐಪಿಎಲ್​ ಆರಂಭದಲ್ಲಿ ಸತತ ಸೋಲುಗಳನ್ನು ಕಂಡಿದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಟೂರ್ನಿಯ ಕೊನೆ ಹಂತಕ್ಕೆ ಬರುತ್ತಿದ್ದಂತೆ ಸತತ ಗೆಲುವಿನ ನಗೆಯಲ್ಲಿ ತೇಲುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 47 ರನ್​ಗಳಿಂದ ಅಮೋಘವಾದ 5ನೇ ಜಯ ದಾಖಲಿಸಿದೆ. ಈ ಮೂಲಕ ಪಾಯಿಂಟ್ ಟೇಬಲ್​ನಲ್ಲಿ ಆರ್​ಸಿಬಿ ಜಂಪ್ ಮಾಡಿ ಒಂದು ಸ್ಥಾನಕ್ಕೆ ಮೇಲಕ್ಕೆರಿದೆ.

ಎಂ. ಚಿನ್ನಸ್ವಾಮಿ ಸ್ಟೇಡಿಯಂ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್​ಸಿಬಿ ಭರ್ಜರಿ ವಿಜಯ ಪತಾಕೆ ಹಾರಿಸಿದೆ. 13 ಪಂದ್ಯಗಳಿಂದ ಒಟ್ಟು 12 ಅಂಕಗಳನ್ನು ಪಡೆದುಕೊಂಡಿದೆ. ಇದರಿಂದ 7ನೇ ಸ್ಥಾನದಲ್ಲಿದ್ದ ಬೆಂಗಳೂರು ತಂಡ 5ನೇ ಸ್ಥಾನಕ್ಕೆ ಹೋಗಿದೆ. ಅದರಂತೆ 5ನೇ ಸ್ಥಾನದಲ್ಲಿದ್ದ ಪಂತ್ ಪಡೆಯ ಡೆಲ್ಲಿ ಟೀಮ್ 6ನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಕೂಡ ಆರ್​ಸಿಬಿಯ ಪ್ಲೇ ಆಫ್​ ಜೀವಂತವಾಗಿ ಉಳಿದುಕೊಂಡಿದೆ. ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಟೀಮ್ 7 ಸ್ಥಾನಕ್ಕೆ ಜಾರಿದೆ.

ಇದನ್ನೂ ಓದಿ: ನಟ‌ ಚೇತನ್​ ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ.. ಸಿನಿಮಾ ಸ್ಟೈಲ್​ನಲ್ಲಿ ರಾಬರಿ.. ಅಸಲಿಗೆ ಆಗಿದ್ದೇನು..?

ಮೇ 18 ಶನಿವಾರ ಸಂಜೆ ನಡೆಯುವ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಉತ್ತಮವಾದ ರನ್​ ರೇಟ್​ನಲ್ಲಿ ಗೆಲ್ಲಲೇಬೇಕಾಗಿದೆ. ಈ ಪಂದ್ಯದಲ್ಲಿ ಬೆಂಗಳೂರು ಗೆದ್ದರೆ ಒಟ್ಟು 14 ಪಂದ್ಯಳಿಂದ 14 ಪಾಯಿಂಟ್ಸ್​ ಕಲೆಕ್ಟ್​ ಮಾಡಿದಾಗೆ ಆಗುತ್ತದೆ. ಈಗಾಗಲೇ ರಾಜಸ್ಥಾನದ ವಿರುದ್ಧ ಗೆದ್ದು 14 ಪಾಯಿಂಟ್ಸ್​ ಅನ್ನು ಚೆನ್ನೈ ಟೀಮ್ ಪಡೆದಿದೆ. ಹೀಗಾಗಿ ಆರ್​ಸಿಬಿ ಟಾಪ್ 4 ಟೀಮ್​ಗಳಲ್ಲಿ ಇರಬೇಕು ಎಂದಾದರೆ ಹೆಚ್ಚಿನ ರನ್​ ರೇಟ್​ನಲ್ಲಿ ಚೆನ್ನೈ ವಿರುದ್ಧ ಗೆಲ್ಲುವುದು ಅನಿವಾರ್ಯವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಪ್ಲೇ ಆಫ್ ಕನಸು ಇನ್ನೂ ಜೀವಂತ.. ಪಾಯಿಂಟ್ಸ್ ಟೇಬಲ್​ RCB ಜಿಗಿತ.. ನೋಡೋಕೆ ಖುಷಿ ಆಗುತ್ತೆ..!

https://newsfirstlive.com/wp-content/uploads/2024/05/RCB_TEAM.jpg

Load More