/newsfirstlive-kannada/media/post_attachments/wp-content/uploads/2024/05/VIRAT_KOHLI_NEW-1.jpg)
2024ರ ಐಪಿಎಲ್ ಜರ್ನಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಗಿಸಿದೆ. ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಯ ಸ್ಥಾನಕ್ಕೆ ಕುಸಿದ್ದಿದ್ದ ಆರ್ಸಿಬಿ, ಎರಡನೇ ಹಂತದಲ್ಲಿ ರೋಚಕವಾಗಿ ಗೆದ್ದು ಪ್ಲೇ-ಆಫ್ಗೆ ಬಂದು ಸಾಧನೆ ಮಾಡಿತು. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲುವ ಮೂಲಕ ಕಪ್ ಗೆಲ್ಲುವ ಕನಸನ್ನು ಮುಂದಿನ ವರ್ಷಕ್ಕೆ ಮುಂದೂಡಿದೆ.
ಇದನ್ನೂ ಓದಿ:ಆರ್ಸಿಬಿ ಅಭಿಮಾನಿಗಳಿಗಾಗಿ ಸ್ಪೆಷಲ್ ಪೋಸ್ಟ್ ಮಾಡಿದ ವಿರಾಟ್ ಕೊಹ್ಲಿ.. ಏನಂದ್ರು..?
ಒಟ್ಟು 15 ಪಂದ್ಯಗಳನ್ನು ಆಡಿರುವ ಆರ್ಸಿಬಿ 7 ಪಂದ್ಯಗಳಲ್ಲಿ ಗೆದ್ದು 8 ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. +0.459 ನೆಟ್ ರನ್ ರೇಟ್ನೊಂದಿಗೆ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಮಾತ್ರವಲ್ಲ, ಪ್ಲೇ-ಆಫ್ ಪ್ರವೇಶಿಸಿದ ತಂಡವಾಗಿ ಹೊರ ಹೊಮ್ಮಿದ ಆರ್ಸಿಬಿಗೆ 6.5 ಕೋಟಿ ಬಹುಮಾನ ಕೂಡ ಸಿಕ್ಕಿದೆ.
ಹೇಗಿದೆ ಆಟಗಾರರ ರಿಪೋರ್ಟ್ ಕಾರ್ಡ್..?
- ವಿರಾಟ್ ಕೊಹ್ಲಿ: (10/10) : 15 ಇನ್ನಿಂಗ್ಸ್ಗಳನ್ನು ಆಡಿರುವ ವಿರಾಟ್ ಕೊಹ್ಲಿ ಒಟ್ಟು 741 ರನ್ಗಳಿಸಿದ್ದಾರೆ. 154.69 ಸ್ಟ್ರೈಕ್ ರೇಟ್ನಲ್ಲಿ 61.75 ಸರಾಸರಿ ರನ್ಗಳಿಸಿದ್ದಾರೆ. ಈಗಲೂ ಕೂಡ ಆರೆಂಜ್ ಕ್ಯಾಪ್ ಲೀಡ್ ಮಾಡುತ್ತಿದ್ದಾರೆ.
- ಫಾಫ್ ಡುಪ್ಲೆಸಿಸ್ (7/10): 15 ಇನ್ನಿಂಗ್ಸ್ ಆಡಿರುವ ಕ್ಯಾಪ್ಟನ್ ಡುಪ್ಲೆಸಿಸ್ 438 ರನ್ಗಳಿಸಿದ್ದಾರೆ. 29.20 ಸರಾಸರಿ ರನ್ಗಳನ್ನು ಹೊಂದಿದ್ದಾರೆ. ಈ ಬಾರಿ ಅಂತಹ ಅದ್ಭುತ ಇನ್ನಿಂಗ್ಸ್ ಮೂಡಿಬಂದಿಲ್ಲ
- ರಜತ್ ಪಾಟೀದಾರ್ (8/10): ಆರ್ಸಿಬಿಯ ಗೇಮ್ ಚೇಂಜರ್ ಇವರು. ಮಿಡಲ್ ಓವರ್ನಲ್ಲಿ ಆರ್ಸಿಬಿ ಸ್ಕೋರ್ ಹೆಚ್ಚಾಗುವಂತೆ ನೋಡಿಕೊಂಡರು. ಸ್ಪಿನ್ನರ್ಗಳ ಬೌಲಿಂಗ್ಗೆ ಲೀಲಾಜಾಲವಾಗಿ ಬೌಂಡರಿ ಬಾರಿಸುವ ಕಸುಬು ಇವರಿಗೆ ಇದೆ. 15 ಇನ್ನಿಂಗ್ಸ್ನಲ್ಲಿ 395 ರನ್ಗಳಿಸಿದ್ದಾರೆ 177.13 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ.
- ಕೆಮರೊನ್ ಗ್ರೀನ್ (7/10): ಐಪಿಎಲ್ನ ಮೊದಲಾರ್ಧದಲ್ಲಿ ಕಳಪೆ ಪ್ರದರ್ಶನ ನೀಡಿದರು. ಆದರೆ ಸೆಕೆಂಡ್ ಹಾಫ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆಲ್ರೌಂಡರ್ ಆಗಿರುವ ಇವರು 255 ರನ್ ಹಾಗೂ 10 ವಿಕೆಟ್ ಪಡೆದುಕೊಂಡಿದ್ದಾರೆ. ಆರ್ಸಿಬಿ ಪರ 13 ಪಂದ್ಯಗಳನ್ನು ಆಡಿದ್ದಾರೆ.
- ಗ್ಲೇನ್ ಮ್ಯಾಕ್ಸ್ವೆಲ್ (2/10): 2024ರ ಐಪಿಎಲ್ನಲ್ಲಿ ಮ್ಯಾಕ್ಸ್ವೆಲ್ ಆರ್ಸಿಬಿಗೆ ದುಸ್ವಪ್ನವಾಗಿ ಕಾಡಿದರು. 10 ಇನ್ನಿಂಗ್ಸ್ ಆಡಿರುವ ಮ್ಯಾಕ್ಸಿ 5.77 ಸರಾಸರಿಯಲ್ಲಿ ಕೇವಲ 52 ರನ್ಗಳಿಸಿದ್ದಾರೆ. 6 ವಿಕೆಟ್ ಪಡೆದುಕೊಂಡು ಭಾರೀ ಕಳಪೆ ಪ್ರದರ್ಶನ ಮಾಡಿದ್ದಾರೆ.
- ವಿಲ್ ಜಾಕ್ಸ್ ( 8/10): ವಿಲ್ ಜಾಕ್ಸ್ ಆರ್ಸಿಬಿ ಗೆಲುವಿಗೆ ಶ್ರಮಿಸಿದ್ದಾರೆ. ಕೇವಲ 8 ಇನ್ನಿಂಗ್ಸ್ ಆಡಿ 230 ರನ್ಗಳಿಸಿ ಗಮನ ಸೆಳೆದರು. ಗುಜರಾತ್ ಟೈಟನ್ಸ್ ವಿರುದ್ಧ ಅದ್ಭುತ ಶತಕ ಬಾರಿಸಿದ್ದನ್ನೂ ಅಭಿಮಾನಿಗಳು ಇನ್ನೂ ಮರೆಯೋದೇ ಇಲ್ಲ.
- ದಿನೇಶ್ ಕಾರ್ತಿಕ್ (9/10): ದಿನೇಶ್ ಕಾರ್ತಿಕ್ಗೆ ಈ ಬಾರಿಯ ಐಪಿಎಲ್ ಫೈನಲ್ ಸೀಸನ್ ಆಗಿತ್ತು. ಅದ್ಭುತ ಇನ್ನಿಂಗ್ಸ್ ಆಡಿರುವ ಡಿ.ಕೆ. 326 ರನ್ಗಳ ಕಾಣಿಕೆ ನೀಡಿದ್ದಾರೆ. 15 ಇನ್ನಿಂಗ್ಸ್ನಲ್ಲಿ ಡಿಕೆ 187.35 ಸ್ಟ್ರೈಕ್ ರೇಟ್ನೊಂದಿಗೆ ಆಡಿದ್ದಾರೆ. ತಮ್ಮ ವೃತ್ತಿ ಜೀವನದ ಕೊನೆಯ ಐಪಿಎಲ್ ಅನ್ನು ಸ್ಮರಣೀಯವಾಗಿ ಉಳಿಸಿಕೊಂಡಿದ್ದಾರೆ.
- ಮಹಿಪಾಲ್ ಲೋಮ್ರರ್ ( 7/10): ಆರ್ಸಿಬಿ ಗೆಲುವಿಗೆ ಇವರ ಕೊಡುಗೆ ಇದೆ. ಡೆತ್ ಓವರ್ಗಳ ಸಮಯದಲ್ಲಿ ಬ್ಯಾಟಿಂಗ್ ಬರುತ್ತಿದ್ದ ಲೋಮ್ರರ್ ಕ್ರೂಷಿಯಲ್ ರನ್ಗಳನ್ನು ಬಾರಿಸಿದ್ದಾರೆ. 10 ಇನ್ನಿಂಗ್ಸ್ ಆಡಿ 125 ರನ್ ಬಾರಿಸಿದ್ದಾರೆ. 185 ಸ್ಟ್ರೈಕ್ ರೇಟ್ನಲ್ಲಿ ಆಡಿರುವ ಅವರು 15.63 ಸರಾಸರಿ ರನ್ ಹೊಂದಿದ್ದಾರೆ.
- ಸ್ವಪ್ನಿಲ್ ಸಿಂಗ್ ( 7/10): ಸ್ವಪ್ನಿಲ್ ಸಿಂಗ್ ಆರ್ಸಿಬಿಗೆ ಲಕ್ ತಂದುಕೊಟ್ಟರು. ಆರ್ಸಿಬಿಗೆ ಅದೃಷ್ಟ ತಂದುಕೊಟ್ಟ ಆಟಗಾರ ಎಂದೇ ಇವರನ್ನು ಬಣ್ಣಿಸಲಾಗುತ್ತದೆ. ಒಟ್ಟು 6 ಇನ್ನಿಂಗ್ಸ್ ಆಡಿರುವ ಇವರು 7 ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ. ಮಾತ್ರವಲ್ಲ, ಆಲ್ರೌಂಡರ್ ಆಗಿರುವ ಸ್ವಪ್ನಿಲ್ ಬ್ಯಾಟ್ ಕೂಡ ಸದ್ದು ಮಾಡಿದೆ.
- ಮಯಾಂಕ್ ಡಗರ್ (2/10): ಇವರನ್ನು ಶಹಬಾಜ್ ಅಹ್ಮದ್ ಸ್ಥಾನಕ್ಕೆ ತೆಗೆದುಕೊಳ್ಳಲಾಗಿತ್ತು. ಯಾವುದೇ ಇಂಪ್ರೆಸಿವ್ ಇಲ್ಲ. ಐದು ಪಂದ್ಯಗಳಲ್ಲಿ ಕೇವಲ ಒಂದು ವಿಕೆಟ್ ಮಾತ್ರ ಪಡೆದುಕೊಂಡಿದ್ದಾರೆ.
- ಕರ್ಣ್ ಶರ್ಮಾ (6/10): ಕೆಲವು ಪಂದ್ಯಗಳಲ್ಲಿ ಬೆಂಚ್ಗೆ ಸೀಮಿತರಾಗಿದ್ದರು. ಒಟ್ಟು 9 ಇನ್ನಿಂಗ್ಸ್ ಆಡಿ 7 ವಿಕೆಟ್ ಪಡೆದುಕೊಂಡಿದ್ದಾರೆ.
- ಮೊಹ್ಮದ್ ಸಿರಾಜ್ (6/10): ಆರ್ಸಿಬಿಗೆ ದುಸ್ವಪ್ನವಾಗಿ ಕಾಡಿದರು. 14 ಪಂದ್ಯಗಳಲ್ಲಿ 15 ವಿಕೆಟ್ ಪಡೆದುಕೊಂಡಿದ್ದಾರೆ.
- ಯಶ್ ದಯಾಳ್ ( 7/10): 2023ರಲ್ಲಿರಲ್ಲಿ ಭಾರೀ ಟೀಕೆಗೆ ಒಳಗಾಗಿದ್ದರು. ಆರ್ಸಿಬಿಗೆ ಬಂದ ಮೇಲೆ ಅವರ ಲಕ್ ಬದಲಾಗಿದ್ದು, ಹವಾ ಸೃಷ್ಟಿಸಿದ್ದಾರೆ. 14 ಪಂದ್ಯಗಳಲ್ಲಿ 15 ವಿಕೆಟ್ ಪಡೆದುಕೊಂಡಿದ್ದಾರೆ.
- ಟೋಪ್ಲಿ (3/10): ಯಾವುದೇ ಇಂಪ್ರೆಸೀವ್ ಇಲ್ಲ. 11.20 ಎಕನಾಮಿಯೊಂದಿಗೆ ಕೇವಲ 4 ವಿಕೆಟ್ ಪಡೆದಿದ್ದಾರೆ. ನಾಲ್ಕು ಪಂದ್ಯಗಳಲ್ಲಿ ಮಾತ್ರ ಆಡಿಸಲಾಗಿದೆ.
- ಲೊಕಿ ಫೆರ್ಗುಸನ್ (6/10): ಇವರನ್ನು ಆರ್ಸಿಬಿ ಬೇಸ್ ಪ್ರೈಸ್ಗೆ ಖರೀದಿ ಮಾಡಿತ್ತು. 7 ಪಂದ್ಯಗಳಲ್ಲಿ 9 ವಿಕೆಟ್ ಪಡೆದುಕೊಂಡಿದ್ದರು.
- ಅಲ್ಜರಿ ಜೋಸೆಫ್ (2/10): ಇವರನ್ನು ಆರ್ಸಿಬಿ ಭಾರೀ ನಿರೀಕ್ಷೆಯಿಟ್ಟು ಒಟ್ಟು 11.50 ಕೋಟಿ ನೀಡಿ ಖರೀದಿ ಮಾಡಿತ್ತು. ಆದರೆ ಇಂಪ್ರೆಸೀವ್ ಮಾಡಲು ಫೇಲ್ ಆಗಿದ್ದಾರೆ. 11.89 ಎಕನಾಮಿಯಲ್ಲಿ ಕೇವಲ ಒಂದು ವಿಕೆಟ್ ಪೆದುಕೊಂಡಿದ್ದಾರೆ.
ಇದನ್ನೂ ಓದಿ:RCB Retention List: ಈ ನಾಲ್ಕು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಆರ್ಸಿಬಿ ಪ್ಲಾನ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್