newsfirstkannada.com

ಎರಡೆರಡು ಬಾರಿ RCB ದಾಖಲೆ ಉಡೀಸ್.. IPLನಲ್ಲಿ ಕೆಲವೊಂದು ಅಚ್ಚರಿ ವಿಸ್ಮಯಗಳು ಇಲ್ಲಿವೆ!​

Share :

Published April 12, 2024 at 2:47pm

  ಮಯಾಂಕ್ ಯಾದವ್​ ಶರವೇಗದ ಬೌಲಿಂಗ್ ಮೂಲಕ ಸೆನ್ಷೆಷನ್

  IPLನಲ್ಲಿ ಮ್ಯಾಕ್ಸ್​ವೆಲ್​​​​ಗಿಂತ ಸಿರಾಜ್​​​ ಹೆಚ್ಚು ಸಿಕ್ಸ್ ಬಾರಿಸಿದ್ದಾರಾ..?

  ಯಾವ ಆಟಗಾರ ಬೇಡವಾಗಿದ್ನೋ, ಅವರೇ ಈಗ ಮ್ಯಾಚ್ ವಿನ್ನರ್

ಐಪಿಎಲ್​ ಅಂದ್ರೆ ಪಕ್ಕಾ ಎಂಟರ್​​​ಟೈನ್​ಮೆಂಟ್​ ಟೂರ್ನಿ. ಮ್ಯಾಚ್​​ ನೋಡೋರಿಗೆ ಮರಂಜನೆಯ ಮೋಸವಿಲ್ಲ. ಲೋ ಸ್ಕೋರ್​ ಗೇಮ್ ಆದ್ರೂ ಸೈ, ಬಿಗ್ ಸ್ಕೋರ್ ಗೇಮ್ ಆದ್ರೂ ಸೈ. ಸಿಕ್ಸರ್​​​​-ಬೌಂಡ್ರಿಗಳ ಮಳೆಯೆ ಸುರಿಯುತ್ತೆ. ಇಂತಹ ಐಪಿಎಲ್​​ನಲ್ಲಿ ಕಣ್ಣು ಕುಕ್ಕಿಸುವ ಅನೇಕ ಘಟನೆಗಳು ನಡೆದಿವೆ. ಈ ಘಟನೆಗಳನ್ನ ಟೂರ್ನಿಗೂ ಮುನ್ನ ಯಾರೊಬ್ಬರು ನಿರೀಕ್ಷೆ ಮಾಡಿರಲಿಲ್ಲ.

17ನೇ ಐಪಿಎಲ್​​​​​​​​​​​​ ಸಂಗ್ರಾಮದಲ್ಲಿ 25 ಪಂದ್ಯಗಳು ಮುಗಿದಿವೆ. ಪಂದ್ಯದಿಂದ ಪಂದ್ಯಕ್ಕೆ ಟೂರ್ನಿಯ ಕೌತುಕತೆ ಡಬಲ್​ ಆಗ್ತಿದೆ. ಕೊನೆ ಎಸೆತದ ತನಕ ಅನ್​​ಪ್ರಡಿಕ್ಟಬಲ್​ ರಿಸಲ್ಟ್​ ಹೊರಬೀಳ್ತಿದೆ. ಟ್ವಿಸ್ಟ್​ ಆ್ಯಂಡ್​ ಟರ್ನ್​ ನೋಡುಗರ ಹಾರ್ಟ್​ಬೀಟ್ ಹೆಚ್ಚಿಸಿದೆ. ಈ ನಡುವೆ ಟೂರ್ನಿಯಲ್ಲಿ ಕಣ್ಣು ಕುಕ್ಕಿಸುವ ಅನೇಕ ಸಂಗತಿಗಳು ನಡೆದಿದೆ. ಇವು ಕೂಡ ಐಪಿಎಲ್ ಕ್ರೇಜ್​ ದುಪ್ಪಟ್ಟಾಗುವಂತೆ ಮಾಡಿವೆ. ಅಂತಹ ಕಣ್ಣು ಕುಕ್ಕಿಸಿದ ಸಂಗತಿಗಳು ಇಲ್ಲಿವೆ.

ಧೋನಿ-ಕೊಹ್ಲಿ ತಬ್ಬಿಕೊಂಡು ಅಚ್ಚರಿ ಮೂಡಿಸಿದ ಗಂಭೀರ್..!

ಯಾರೊಬ್ಬರು ಇದನ್ನ ನಿರೀಕ್ಷೆ ಮಾಡಿರಲೇ ಇಲ್ಲ. ಐಪಿಎಲ್​ನಲ್ಲಿ ಗೌತಮ್​ ಗಂಭೀರ್ ಹಾಗೂ ಕಿಂಗ್ ಕೊಹ್ಲಿ ವೈರತ್ವಕ್ಕೆ ದೊಡ್ಡ ಇತಿಹಾಸವಿತ್ತು. ಇಂತಹ ವೈರತ್ವಕ್ಕೆ ಇತ್ತೀಚಿಗೆ ಗಂಭೀರ್​​ ನಾಂದಿ ಹಾಡಿದ್ರು. ಆರ್​ಸಿಬಿ ಎದುರಿನ ಪಂದ್ಯದಲ್ಲಿ ಮೆಂಟರ್​​​​​ ಗೌತಮ್ ಗಂಭೀರ್​​​ ಕೊಹ್ಲಿಯನ್ನ ತಬ್ಬಿಕೊಂಡು ಆತ್ಮೀಯವಾಗಿ ಮಾತನಾಡಿಸಿದ್ರು.

ಇನ್ನು ಧೋನಿ ಅಂದ್ರೆ ಗಂಭೀರ್​ಗೆ ಅಷ್ಟಕಷ್ಟೆ. ಸಮಯ ಸಿಕ್ಕಾಗಲೆಲ್ಲ ಮಹಿಯನ್ನ ಹರಿತವಾದ ಮಾತಿನಿಂದ ಟೀಕಿಸ್ತಿದ್ರು. ಇಂತಹ ಗಂಭೀರ್​​ ಸಿಎಸ್​​ಕೆ ಎದುರಿನ ಪಂದ್ಯದ ಬಳಿಕ ಧೋನಿಯನ್ನ ಹಗ್​ ಮಾಡಿದ್ರು. ಗೌತಿಯ ಈ ನಡೆ ಅನೇಕರಿಗೆ ಅಚ್ಚರಿ ತರಿಸಿತ್ತು.

ಧೋನಿಯ ಒನ್ ಹ್ಯಾಂಡೆಡ್ ಸಿಕ್ಸ್​​ಗೆ ಎಲ್ಲರೂ ಬೆರಗು..!

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಧೋನಿ ಆಟ ಎಲ್ಲರ ಮೆಚ್ಚುಗೆ ಗಳಿಸಿತ್ತು. ಈ ಪಂದ್ಯದಲ್ಲಿ ಧೋನಿ ಎನ್ರಿಚ್​ ನಾರ್ಟ್ಜೆ ಬೌಲಿಂಗ್​ನಲ್ಲಿ ಒಂದೇ ಕೈಯಲ್ಲಿ ಸಿಕ್ಸರ್​ ಎತ್ತಿದ್ರು. ಮಾಹಿಯ ಈ ಒನ್​​ ಹ್ಯಾಂಡ್ ಸಿಕ್ಸ್​ಗೆ ಪ್ರೇಕ್ಷಕರು ಮೂಕವಿಸ್ಮಿತರಾದ್ರು..

ಬೇಡವಾದ ಆಟಗಾರನೇ ಈಗ ಪಂಜಾಬ್​​​​ ಮ್ಯಾಚ್​ ವಿನ್ನರ್

ಹರಾಜಿನಲ್ಲಿ ಎಸಗಿದ ತಪ್ಪಿನಿಂದಾಗಿ ಶಶಾಂಕ್​ ಸಿಂಗ್ ಪಂಜಾಬ್ ಕಿಂಗ್ಸ್​ ತಂಡವನ್ನ ಸೇರಿಕೊಂಡ್ರು. ಅಚ್ಚರಿ ಏನಂದ್ರೆ ಯಾವ ಆಟಗಾರ ಬೇಡವಾಗಿದ್ನೋ, ಇಂದು ಅದೇ ಶಶಾಂಕ್ ಸಿಂಗ್ ಪಂಜಾಬ್ ಕಿಂಗ್ಸ್​​ ತಂಡದ ಮ್ಯಾಚ್​ ವಿನ್ನರ್​ ಆಗಿ ಗುರುತಿಸಿಕೊಂಡಿದ್ದಾರೆ.

ಮ್ಯಾಕ್ಸ್​​ವೆಲ್​​​ಗಿಂತ ಮೊಹಮ್ಮದ್​ ಸಿರಾಜ್​​ ಅಧಿಕ ಸಿಕ್ಸ್

ಇದು ಅಚ್ಚರಿ ಅನ್ನಿಸಿದ್ರೂ ಸತ್ಯ. ಸ್ಪೋಟಕ ಆಟಕ್ಕೆ ಹೆಸರುವಾಸಿ ಗ್ಲೆನ್ ಮ್ಯಾಕ್ಸ್​ವೆಲ್​​​​ಗಿಂತ ವೇಗಿ ಮೊಹಮ್ಮದ್ ಸಿರಾಜ್​​​ ಅಧಿಕ ಸಿಕ್ಸರ್ ಸಿಡಿಸಿದ್ದಾರೆ. ಮ್ಯಾಕ್ಸಿ 5 ಇನ್ನಿಂಗ್ಸ್​ನಿಂದ 1 ಸಿಕ್ಸ್ ಬಾರಿಸಿದ್ರೆ, ಸಿರಾಜ್​​ 1 ಇನ್ನಿಂಗ್ಸ್​​​ನಲ್ಲಿ 2 ಸಿಕ್ಸರ್​​​​ ಸಿಡಿಸಿದ್ದಾರೆ.

ಒಂದೇ ಸೀಸನ್​​.. ಎರಡೆರಡು ಬಾರಿ RCB ರೆಕಾರ್ಡ್​ ಖತಂ..!

ಐಪಿಎಲ್​ ಪಂದ್ಯವೊಂದರಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆ ಆರ್​ಸಿಬಿ ಹೆಸರಿನಲ್ಲಿತ್ತು. ಪುಣೆ ವಾರಿಯರ್ಸ್​ ವಿರುದ್ಧ 263 ರನ್ ಗಳಿಸಿತ್ತು. ಈ ರೆಕಾರ್ಡ್​ ಇದೇ ಸೀಸನ್​ನಲ್ಲಿ 2 ಬಾರಿ ಬ್ರೇಕ್ ಹಾಕಿದೆ. ಹೈದ್ರಾಬಾದ್,​ ಮುಂಬೈ ವಿರುದ್ಧ 277 ಹಾಗೂ ಕೆಕೆಆರ್​​ ಡೆಲ್ಲಿ ಎದುರು 272 ರನ್ ಗಳಿಸಿ ಬಾಯಿ ಮೇಲೆ ಬೆರಳಿಟ್ಟುವಂತೆ ಮಾಡ್ತು.

150 + ಕಿ.ಮೀ ವೇಗದಲ್ಲಿ ಮಯಾಂಕ್ ಯಾದವ್​​​​ ಬೌಲಿಂಗ್

21 ರ ಮಯಾಂಕ್ ಯಾದವ್​ ಶರವೇಗದ ಬೌಲಿಂಗ್ ಮೂಲಕ ಸೆನ್ಷೆಷನ್​​ ಸೃಷ್ಟಿಸಿದ್ದಾರೆ. ಕನ್ಸಸ್ಟನ್ಸಿ ಆಗಿ 150 ಕ್ಕೂ ಅಧಿಕ ಕಿ.ಮೀ ವೇಗದಲ್ಲಿ ದಾಳಿ ನಡೆಸಿ ಬ್ಯಾಟ್ಸ್​​ಮನ್ ನಿದ್ದೆಗೆಡಿಸಿದ್ದಾರೆ. ಮಯಂಕ್​ 156.7 ಕಿ.ಮೀನಲ್ಲಿ ಬೌಲಿಂಗ್ ಮಾಡಿದ್ದು ಈ ಸೀಸನ್​​​​​​​​ನ ಫಾಸೆಸ್ಟ್​ ಬೌಲಿಂಗ್ ಆಗಿದೆ.

ಇದಿಷ್ಟೇ ಅಲ್ಲದೇ, ಮಾಜಿ ಚಾಂಪಿಯನ್​​​ ಸಿಎಸ್​ಕೆ ಹಾಗೂ ಮುಂಬೈ ವಿರುದ್ಧ ಹೈದ್ರಾಬಾದ್​​ಗೆ ಗೆಲುವು, ಕಿಂಗ್ ಕೊಹ್ಲಿ ಜೊತೆ ಆರೆಂಜ್​​​​​​​ ಕ್ಯಾಪ್​​​ಗಾಗಿ ರಿಯಾನ್​ ಪರಾಗ್​ ಫೈಟ್​​​, ಕ್ರಿಕೆಟ್ ಪ್ರೇಮಿಗಳ ಕಣ್ಣು ಕುಕ್ಕಿಸಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಎರಡೆರಡು ಬಾರಿ RCB ದಾಖಲೆ ಉಡೀಸ್.. IPLನಲ್ಲಿ ಕೆಲವೊಂದು ಅಚ್ಚರಿ ವಿಸ್ಮಯಗಳು ಇಲ್ಲಿವೆ!​

https://newsfirstlive.com/wp-content/uploads/2024/04/VIRAT_KOHLI_RCB-1.jpg

Load More