/newsfirstlive-kannada/media/post_attachments/wp-content/uploads/2024/03/RCB-DOG.jpg)
ಕೆಕೆಆರ್​​​ ಸವಾಲಿಗೆ ಆರ್​​​ಸಿಬಿ ರೆಡಿ
ಇಂದು ನಡೆಯೋ ಕೊಲ್ಕತ್ತಾ ನೈಟ್​ ರೈಡರ್ಸ್​ ಎದುರಿನ ಕದನಕ್ಕೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಭರ್ಜರಿ ಅಭ್ಯಾಸ ನಡೆಸಿದೆ. ನಿನ್ನೆ ಚಿನ್ನಸ್ವಾಮಿ ಮೈದಾನದಲ್ಲಿ ಡುಪ್ಲೆಸಿ ಪಡೆ ಅಂಡರ್​ಲೈಟ್ಸ್​​ ಅಭ್ಯಾಸ ನಡೆಸ್ತು. ಬ್ಯಾಟಿಂಗ್​ - ಬೌಲಿಂಗ್​ ನಡೆಸಿ ಆಟಗಾರರು ಬೆವರಿಳಿಸಿದ್ರು. ವಿರಾಟ್​ ಕೊಹ್ಲಿ, ಗ್ಲೇನ್​ ಮ್ಯಾಕ್ಸ್​ವೆಲ್​, ಫಾಫ್​ ಡುಪ್ಲೆಸಿ ಭರ್ಜರಿ ಬ್ಯಾಟಿಂಗ್​ ನಡೆಸಿ ಬೆವರಿಳಿಸಿದ್ರು.
/newsfirstlive-kannada/media/post_attachments/wp-content/uploads/2024/03/MAXWELL.jpg)
ಶ್ವಾನ ಪ್ರಿಯರಿಗೆ ಗುಡ್​ನ್ಯೂಸ್​ ಕೊಟ್ಟ RCB
ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿ ಶ್ವಾನ ಪ್ರಿಯರಿಗೆ ಗುಡ್​ನ್ಯೂಸ್​ ಕೊಟ್ಟಿದೆ. ಕಳೆದ ವರ್ಷದಂತೆ ಈ ವರ್ಷವೂ ಪಂದ್ಯ ನೋಡಲು ಬರೋ ಅಭಿಮಾನಿಗಳು ತಮ್ಮ ಶ್ವಾನವನ್ನೂ ಕರೆದುಕೊಂಡು ಬರಬಹುದು. ಚಿನ್ನಸ್ವಾಮಿ ಮೈದಾನದಲ್ಲಿ ಪ್ರೇಕ್ಷಕರ ಸ್ಟ್ಯಾಂಡ್​ನ ಬಳಿಯೇ ಶ್ವಾನಗಳಿಗಾಗಿ ‘ಡಾಗ್​ ಔಟ್​’ ನಿರ್ಮಿಸಲಾಗಿದೆ. ಇಲ್ಲಿ ಶ್ವಾನಗಳನ್ನ ಬಿಟ್ಟು ಪಂದ್ಯವನ್ನ ವೀಕ್ಷಿಸಬಹುದಾಗಿದೆ.
DOGOUT: A unique initiative where a section of the Chinnaswamy stadium is dedicated to our Furry friends! 🐶
Isn’t that pawsome? 🐾🤩#PlayBold#ನಮ್ಮRCB#IPL2024pic.twitter.com/GYgomhSM8I— Royal Challengers Bengaluru (@RCBTweets) March 28, 2024
ಮಗುವನ್ನ ಎತ್ತಾಡಿಸಿದ ಎಮ್​.ಎಸ್​ ಧೋನಿ
ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಬ್ಯಾಟ್ಸ್​ಮನ್​ ಎಮ್​.ಎಸ್​ ಧೋನಿ ಪುಟ್ಟ ಮಗುವಿನೊಂದಿಗೆ ಕಾಲ ಕಳೆದಿದ್ದಾರೆ. ಇವೆಂಟ್​ವೊಂದರಲ್ಲಿ ಭಾಗಿಯಾಗಿದ್ದ ವೇಳೆ ಅಭಿಮಾನಿಯೊಬ್ಬರ ಮಗುವನ್ನ ಎತ್ತಾಡಿಸಿದ್ದಾರೆ. ಈ ಕ್ಯೂಟ್​ ವಿಡಿಯೋ ಸೋಷಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.
MS Dhoni with a cute Kid 😍#IPL2024pic.twitter.com/UakirbwtqF
— Don Cricket 🏏 (@doncricket_) March 28, 2024
ಸ್ಟೇಡಿಯಂಗೆ ‘ರಾಯಲ್’​ ಎಂಟ್ರಿ ಕೊಟ್ಟ ಜಾಂಟಿ ರೋಡ್ಸ್​​
ಲಕ್ನೋ ಸೂಪರ್​ ಜೈಂಟ್ಸ್​​ ತಂಡದ ಫೀಲ್ಡಿಂಗ್​ ಕೋಚ್​ ಜಾಂಟಿ ರೋಡ್ಸ್​​ ಬೈಕ್​ ರೈಡ್​ ಮಾಡಿ ಎಂಜಾಯ್​ ಮಾಡಿದ್ದಾರೆ. ಟೀಮ್​ ಹೋಟೆಲ್​ನಿಂದ ಸ್ಟೇಡಿಯಂಗೆ ಜಾಂಟಿರೋಡ್ಸ್​​ ಬೈಕ್​ನಲ್ಲಿ ಸ್ಟೈಲಿಶ್ ಆಗಿ ತೆರಳಿದ್ದಾರೆ. ಆಟಗಾರರೆಲ್ಲಾ ಅಭ್ಯಾಸಕ್ಕೆಂದು ಸ್ಟೇಡಿಯಂಗೆ ಬಸ್​ನಲ್ಲಿ ತೆರಳಿದ್ರೆ, ಜಾಂಟಿ ರೋಡ್ಸ್​​ ರಾಯಲ್​ ಎನ್​ಫೀಲ್ಡ್​​ ಬೈಕ್​ ಏರಿ ಸ್ಟೇಡಿಯಂಗೆ ರಾಯಲ್​ ಎಂಟ್ರಿ ಕೊಟ್ಟಿದ್ದಾರೆ.
Jonty Rhodes taking a bike ride to the stadium. pic.twitter.com/AmGGvhgCVN
— Mufaddal Vohra (@mufaddal_vohra) March 28, 2024
ನೆಟ್ಸ್​ನಲ್ಲಿ ಬೆವರಿಳಿಸಿದ ಗುಜರಾತ್ ಟೈಟನ್ಸ್​​
ಮೊದಲ ಪಂದ್ಯ ಗೆದ್ದು, 2ನೇ ಪಂದ್ಯದಲ್ಲಿ ಸೋಲುಂಡಿರುವ ಗುಜರಾತ್​ ಟೈಟನ್ಸ್​​ ಗೆಲುವಿನ ಹಳಿಗೆ ಮರಳಲು ಕಸರತ್ತು ಶುರುಮಾಡಿದೆ. ಕೇನ್​ ವಿಲಿಯಮ್​ಸನ್​, ಶುಭ್​ಮನ್​ ಗಿಲ್​, ಸಾಯಿ ಸುದರ್ಶನ್​ ಸೇರಿದಂತೆ ಪ್ರಮುಖ ಆಟಗಾರರು ನೆಟ್ಸ್​ನಲ್ಲಿ ಬೆವರಿಳಿಸಿದ್ದಾರೆ. ಭಾನುವಾರ ಸನ್​ರೈಸರ್ಸ್​​ ಹೈದ್ರಾಬಾದ್​​ ವಿರುದ್ಧ ಗುಜರಾತ್​ ಸೆಣೆಸಲಿದೆ.
🔊 Get ready for some KSMR! #AavaDe | #GTKarshe | #TATATIPL2024pic.twitter.com/j13VL81UEt
— Gujarat Titans (@gujarat_titans) March 29, 2024
ಮುಂಬೈ ಇಂಡಿಯನ್ಸ್​ಗೆ ಮತ್ತೊಂದು ಆಘಾತ
ಸನ್​​ರೈಸರ್ಸ್​ ಹೈದ್ರಾಬಾದ್​ ಎದುರಿನ ಸೋಲಿನ ಬೆನ್ನಲ್ಲೇ ಮುಂಬೈ ಇಂಡಿಯನ್ಸ್​ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ತಂಡದ ಪ್ರಮುಖ ಬ್ಯಾಟ್ಸ್​​ಮನ್ ಸೂರ್ಯಕುಮಾರ್​ ಯಾದವ್​​​ ಮುಂಬರುವ ಇನ್ನಷ್ಟು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಎನ್​ಸಿಎನಲ್ಲಿ ಬೀಡು ಬಿಟ್ಟಿರುವ ಸೂರ್ಯ, ಇನ್ನೂ ಸಂಪೂರ್ಣ ಫಿಟ್​ ಆಗಿಲ್ಲ. ಮುಂದಿನ 2-3 ಪಂದ್ಯಗಳಿಂದಲೂ ಹೊರಗುಳಿಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
/newsfirstlive-kannada/media/post_attachments/wp-content/uploads/2023/11/Surya-Kumar-yadav.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us