newsfirstkannada.com

ಮುಂಬೈ ಇಂಡಿಯನ್ಸ್​ಗೆ ಮತ್ತೊಂದು ಆಘಾತ, ಶ್ವಾನ ಪ್ರಿಯರಿಗೆ ಗುಡ್​ನ್ಯೂಸ್​ ಕೊಟ್ಟ RCB.. ಏನದು..?

Share :

Published March 29, 2024 at 1:29pm

    ಮಗುವನ್ನ ಎತ್ತಾಡಿಸಿದ ಎಮ್​.ಎಸ್​ ಧೋನಿ -ವಿಡಿಯೋ

    ಸ್ಟೇಡಿಯಂಗೆ ‘ರಾಯಲ್’​ ಎಂಟ್ರಿ ಕೊಟ್ಟ ಜಾಂಟಿ ರೋಡ್ಸ್​​ -ವಿಡಿಯೋ

    ಐಪಿಎಲ್ ಲೋಕದ ಸೂಪರ್ ಸಿಕ್ಸರ್​ ಇಲ್ಲಿವೆ- ಮಿಸ್ ಮಾಡಲೇಬೇಡಿ

ಕೆಕೆಆರ್​​​ ಸವಾಲಿಗೆ ಆರ್​​​ಸಿಬಿ ರೆಡಿ
ಇಂದು ನಡೆಯೋ ಕೊಲ್ಕತ್ತಾ ನೈಟ್​ ರೈಡರ್ಸ್​ ಎದುರಿನ ಕದನಕ್ಕೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಭರ್ಜರಿ ಅಭ್ಯಾಸ ನಡೆಸಿದೆ. ನಿನ್ನೆ ಚಿನ್ನಸ್ವಾಮಿ ಮೈದಾನದಲ್ಲಿ ಡುಪ್ಲೆಸಿ ಪಡೆ ಅಂಡರ್​ಲೈಟ್ಸ್​​ ಅಭ್ಯಾಸ ನಡೆಸ್ತು. ಬ್ಯಾಟಿಂಗ್​ – ಬೌಲಿಂಗ್​ ನಡೆಸಿ ಆಟಗಾರರು ಬೆವರಿಳಿಸಿದ್ರು. ವಿರಾಟ್​ ಕೊಹ್ಲಿ, ಗ್ಲೇನ್​ ಮ್ಯಾಕ್ಸ್​ವೆಲ್​, ಫಾಫ್​ ಡುಪ್ಲೆಸಿ ಭರ್ಜರಿ ಬ್ಯಾಟಿಂಗ್​ ನಡೆಸಿ ಬೆವರಿಳಿಸಿದ್ರು.

ಶ್ವಾನ ಪ್ರಿಯರಿಗೆ ಗುಡ್​ನ್ಯೂಸ್​ ಕೊಟ್ಟ RCB
ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿ ಶ್ವಾನ ಪ್ರಿಯರಿಗೆ ಗುಡ್​ನ್ಯೂಸ್​ ಕೊಟ್ಟಿದೆ. ಕಳೆದ ವರ್ಷದಂತೆ ಈ ವರ್ಷವೂ ಪಂದ್ಯ ನೋಡಲು ಬರೋ ಅಭಿಮಾನಿಗಳು ತಮ್ಮ ಶ್ವಾನವನ್ನೂ ಕರೆದುಕೊಂಡು ಬರಬಹುದು. ಚಿನ್ನಸ್ವಾಮಿ ಮೈದಾನದಲ್ಲಿ ಪ್ರೇಕ್ಷಕರ ಸ್ಟ್ಯಾಂಡ್​ನ ಬಳಿಯೇ ಶ್ವಾನಗಳಿಗಾಗಿ ‘ಡಾಗ್​ ಔಟ್​’ ನಿರ್ಮಿಸಲಾಗಿದೆ. ಇಲ್ಲಿ ಶ್ವಾನಗಳನ್ನ ಬಿಟ್ಟು ಪಂದ್ಯವನ್ನ ವೀಕ್ಷಿಸಬಹುದಾಗಿದೆ.

ಮಗುವನ್ನ ಎತ್ತಾಡಿಸಿದ ಎಮ್​.ಎಸ್​ ಧೋನಿ

ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಬ್ಯಾಟ್ಸ್​ಮನ್​ ಎಮ್​.ಎಸ್​ ಧೋನಿ ಪುಟ್ಟ ಮಗುವಿನೊಂದಿಗೆ ಕಾಲ ಕಳೆದಿದ್ದಾರೆ. ಇವೆಂಟ್​ವೊಂದರಲ್ಲಿ ಭಾಗಿಯಾಗಿದ್ದ ವೇಳೆ ಅಭಿಮಾನಿಯೊಬ್ಬರ ಮಗುವನ್ನ ಎತ್ತಾಡಿಸಿದ್ದಾರೆ. ಈ ಕ್ಯೂಟ್​ ವಿಡಿಯೋ ಸೋಷಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

ಸ್ಟೇಡಿಯಂಗೆ ‘ರಾಯಲ್’​ ಎಂಟ್ರಿ ಕೊಟ್ಟ ಜಾಂಟಿ ರೋಡ್ಸ್​​

ಲಕ್ನೋ ಸೂಪರ್​ ಜೈಂಟ್ಸ್​​ ತಂಡದ ಫೀಲ್ಡಿಂಗ್​ ಕೋಚ್​ ಜಾಂಟಿ ರೋಡ್ಸ್​​ ಬೈಕ್​ ರೈಡ್​ ಮಾಡಿ ಎಂಜಾಯ್​ ಮಾಡಿದ್ದಾರೆ. ಟೀಮ್​ ಹೋಟೆಲ್​ನಿಂದ ಸ್ಟೇಡಿಯಂಗೆ ಜಾಂಟಿರೋಡ್ಸ್​​ ಬೈಕ್​ನಲ್ಲಿ ಸ್ಟೈಲಿಶ್ ಆಗಿ ತೆರಳಿದ್ದಾರೆ. ಆಟಗಾರರೆಲ್ಲಾ ಅಭ್ಯಾಸಕ್ಕೆಂದು ಸ್ಟೇಡಿಯಂಗೆ ಬಸ್​ನಲ್ಲಿ ತೆರಳಿದ್ರೆ, ಜಾಂಟಿ ರೋಡ್ಸ್​​ ರಾಯಲ್​ ಎನ್​ಫೀಲ್ಡ್​​ ಬೈಕ್​ ಏರಿ ಸ್ಟೇಡಿಯಂಗೆ ರಾಯಲ್​ ಎಂಟ್ರಿ ಕೊಟ್ಟಿದ್ದಾರೆ.

ನೆಟ್ಸ್​ನಲ್ಲಿ ಬೆವರಿಳಿಸಿದ ಗುಜರಾತ್ ಟೈಟನ್ಸ್​​
ಮೊದಲ ಪಂದ್ಯ ಗೆದ್ದು, 2ನೇ ಪಂದ್ಯದಲ್ಲಿ ಸೋಲುಂಡಿರುವ ಗುಜರಾತ್​ ಟೈಟನ್ಸ್​​ ಗೆಲುವಿನ ಹಳಿಗೆ ಮರಳಲು ಕಸರತ್ತು ಶುರುಮಾಡಿದೆ. ಕೇನ್​ ವಿಲಿಯಮ್​ಸನ್​, ಶುಭ್​ಮನ್​ ಗಿಲ್​, ಸಾಯಿ ಸುದರ್ಶನ್​ ಸೇರಿದಂತೆ ಪ್ರಮುಖ ಆಟಗಾರರು ನೆಟ್ಸ್​ನಲ್ಲಿ ಬೆವರಿಳಿಸಿದ್ದಾರೆ. ಭಾನುವಾರ ಸನ್​ರೈಸರ್ಸ್​​ ಹೈದ್ರಾಬಾದ್​​ ವಿರುದ್ಧ ಗುಜರಾತ್​ ಸೆಣೆಸಲಿದೆ.

ಮುಂಬೈ ಇಂಡಿಯನ್ಸ್​ಗೆ ಮತ್ತೊಂದು ಆಘಾತ
ಸನ್​​ರೈಸರ್ಸ್​ ಹೈದ್ರಾಬಾದ್​ ಎದುರಿನ ಸೋಲಿನ ಬೆನ್ನಲ್ಲೇ ಮುಂಬೈ ಇಂಡಿಯನ್ಸ್​ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ತಂಡದ ಪ್ರಮುಖ ಬ್ಯಾಟ್ಸ್​​ಮನ್ ಸೂರ್ಯಕುಮಾರ್​ ಯಾದವ್​​​ ಮುಂಬರುವ ಇನ್ನಷ್ಟು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಎನ್​ಸಿಎನಲ್ಲಿ ಬೀಡು ಬಿಟ್ಟಿರುವ ಸೂರ್ಯ, ಇನ್ನೂ ಸಂಪೂರ್ಣ ಫಿಟ್​ ಆಗಿಲ್ಲ. ಮುಂದಿನ 2-3 ಪಂದ್ಯಗಳಿಂದಲೂ ಹೊರಗುಳಿಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಂಬೈ ಇಂಡಿಯನ್ಸ್​ಗೆ ಮತ್ತೊಂದು ಆಘಾತ, ಶ್ವಾನ ಪ್ರಿಯರಿಗೆ ಗುಡ್​ನ್ಯೂಸ್​ ಕೊಟ್ಟ RCB.. ಏನದು..?

https://newsfirstlive.com/wp-content/uploads/2024/03/RCB-DOG.jpg

Load More