newsfirstkannada.com

IPLನಲ್ಲಿ ಅತ್ಯಂತ ದೊಡ್ಡ ರೆಕಾರ್ಡ್​ಗೆ ಕೈ ಹಾಕಿದ SRH.. ನಂ-3 ಕುರಿತು ಟ್ರಾವಿಸ್ ಹೆಡ್, ಅಭಿಷೇಕ್ ಏನಂದ್ರು ಗೊತ್ತಾ?

Share :

Published April 21, 2024 at 12:23pm

    ಅತ್ಯಧಿಕ ರನ್ ಹೊಡೆದ ತಂಡ ಎನ್ನುವ ಹೆಗ್ಗಳಿಕೆ ಎಸ್​ಆರ್​ಹೆಚ್​ ಪಾಲು

    ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ನಂಬರ್- 3 ಬಗ್ಗೆ ಹೇಳುವುದೇನು?

    ಆರ್​ಸಿಬಿ ಹೆಸರಲ್ಲಿದ್ದ ರೆಕಾರ್ಡ್​ ಕಸಿದುಕೊಂಡ ಹೈದ್ರಾಬಾದ್ ಟೀಮ್

2024ರ ಐಪಿಎಲ್​ ಟೂರ್ನಿಯಲ್ಲಿ ಹೊಡಿಬಡಿ ಆಟ ಆಡುತ್ತಿರುವ ಸನ್​ರೈಸರ್ಸ್ ಹೈದ್ರಾಬಾದ್ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದಾರೆ. ಕ್ರೀಸ್​ಗೆ ಬರುವ ಹೈದ್ರಾಬಾದ್ ತಂಡದ ಬ್ಯಾಟ್ಸ್​ಮನ್​ಗಳು ಬೌಲರ್​ಗಳ ಮೇಲೆ ಡೆಡ್ಲಿ ಅಟ್ಯಾಕ್​ ಮಾಡುತ್ತಿದ್ದಾರೆ. ಈಗಾಗಲೇ 287 ರನ್​ ಬಾರಿಸುವ ಮೂಲಕ ಇಡೀ ಪಿಎಲ್ ಟೂರ್ನಿಗಳಲ್ಲೇ ಅತ್ಯಧಿಕ ರನ್ ಹೊಡೆದ ತಂಡ ಎನ್ನುವ ಹೆಗ್ಗಳಿಕೆ ಎಸ್​ಆರ್​ಹೆಚ್​ ಪಡೆದುಕೊಂಡಿದೆ. ಸದ್ಯ ತಂಡದ ಮುಂದಿನ ಟಾರ್ಗೆಟ್​ ನಂಬರ್ 3 ಎಂದು ಹೇಳುತ್ತಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 300 ರನ್​ಗಳ ಗುರಿಯನ್ನೇ ಇಟ್ಟುಕೊಂಡೇ ಎಸ್​ಆರ್​ಹೆಚ್ ದಾಳಿಗೆ ಇಳಿದಿತ್ತು ಎನ್ನಲಾಗಿದೆ. ಆದರೆ ಅಂದುಕೊಂಡಿದ್ದು ಜಸ್ಟ್ ಮಿಸ್ ಆಗಿದೆ ಎಂದು ಹೇಳಲಾಗ್ತಿದೆ. ಸದ್ಯ ಈ ಬಗ್ಗೆ ಓಪನರ್ ಬ್ಯಾಟ್ಸ್​ಮನ್​ಗಳಾದ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾಗೆ ಪ್ರಶ್ನೆಯೊಂದನ್ನು ಕೇಳಲಾಗಿದೆ. SRHಗೆ ಮುಂದಿನ ದೊಡ್ಡ ಸ್ಕೋರ್ ಯಾವುದು? ಎಂದು ಪ್ರಶ್ನಿಸಲಾಗಿದೆ.

ಸದ್ಯ ಇದಕ್ಕೆ ಉತ್ತರಿಸಿರುವ ಅಭಿಷೇಕ್ ಶರ್ಮಾ, ನಮ್ಮ ಮುಂದಿನ ನಂಬರ್ 3 ಎಂದು ಕಾಣುತ್ತಿದೆ. ಅದು ನಮ್ಮ ಟಾರ್ಗೆಟ್ ಆಗಿದ್ದು ಒಳ್ಳೆಯ ಬ್ಯಾಟಿಂಗ್​ನಿಂದ ಅದನ್ನು ಮುಟ್ಟುತ್ತೇವೆ ಎಂದು ಹೇಳಿದ್ದಾರೆ.

ಇನ್ನು ಟ್ರಾವಿಸ್ ಹೆಡ್ ಮಾತನಾಡಿ, ಮುಂದಿನ ಮ್ಯಾಚ್​ನಲ್ಲಿ ಕ್ರಿಕೆಟ್​ ಫ್ಯಾನ್ಸ್​ ಇನ್ನಷ್ಟು ಕುತೂಹಲದಿಂದ ಬ್ಯಾಟಿಂಗ್ ನೋಡ್ತಾರೆ. ನಾವು ಉತ್ತಮ ಫಾರ್ಮ್​ನಲ್ಲಿ ಇದ್ದು ಇದೇ ಬ್ಯಾಟಿಂಗ್​ ಅನ್ನು ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.

ಎಸ್​ಆರ್​ಹೆಚ್​ ಓಪನರ್ಸ್ ಹೆಡ್ ಹಾಗೂ ಅಭಿಷೇಕ್ ಕ್ರೀಸ್​ಗೆ ಬಂದವರೇ ಒಂದು ರನ್​ ತೆಗೆಯುವುದಕ್ಕಿಂತ ಸಿಕ್ಸ್​, ಫೋರ್ ಬಾರಿಸುವುದೇ ಹೆಚ್ಚು. ಈಗಾಗಲೇ ಮುಂಬೈ, ಆರ್​ಸಿಬಿ ಹಾಗೂ ಡೆಲ್ಲಿ ವಿರುದ್ಧ ಇವರ ಆಟಕ್ಕೆ ಕ್ರಿಕೆಟ್​ ಫ್ಯಾನ್ಸ್ ಫಿದಾ ಆಗಿದ್ದಾರೆ. ಡೆಲ್ಲಿ ವಿರುದ್ಧ 3 ನಂಬರ್ ಟಾರ್ಗೆಟ್​ ಇಟ್ಟುಕೊಂಡೆ ದಾಳಿಗೆ ಇಳಿದಿದ್ದರು ಎನ್ನಲಾಗಿದೆ. ಅಂದುಕೊಂಡಂತೆ ಸಖತ್ ಆಗೇ ಈ ಇಬ್ಬರು ಬ್ಯಾಟಿಂಗ್ ಮಾಡಿದರು. ಕೇವಲ 6 ಓವರ್​ನಲ್ಲಿ 125 ರನ್ ಕಲೆ ಹಾಕಿದ್ದರು. ಆದರೆ ಕುಲ್​ದೀಪ್​ ಬೌಲಿಂಗ್​ನಿಂದ ಸ್ವಲ್ಪ ಹಿನ್ನಡೆಯಾಯಿತು ಎನ್ನಬಹುದು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

IPLನಲ್ಲಿ ಅತ್ಯಂತ ದೊಡ್ಡ ರೆಕಾರ್ಡ್​ಗೆ ಕೈ ಹಾಕಿದ SRH.. ನಂ-3 ಕುರಿತು ಟ್ರಾವಿಸ್ ಹೆಡ್, ಅಭಿಷೇಕ್ ಏನಂದ್ರು ಗೊತ್ತಾ?

https://newsfirstlive.com/wp-content/uploads/2024/04/SRH_BATTING.jpg

Load More