ಐಪಿಎಲ್ ಮೆಗಾ ಆಕ್ಷನ್ ಯಾವ ದೇಶದಲ್ಲಿ ನಡೆಯುತ್ತದೆ..?
ಭಾರತ-ಆಸ್ಟ್ರೇಲಿಯಾ ಮಧ್ಯೆದ ಪಂದ್ಯ ಜೊತೆ ಆಕ್ಷನ್ ಕ್ಲ್ಯಾಶ್
ಮೆಗಾ ಆಕ್ಷನ್ಗಾಗಿ ಬಿಸಿಸಿಐ ಅಂತಿಮ ಕೆಲಸಗಳು ನಡೆದಿವೆ
ಐಪಿಎಲ್ 2025 ಟೂರ್ನಿಯ ರಿಟೈನ್ ಆಟಗಾರರ ಹೆಸರು ಘೋಷಣೆ ಈಗಾಗಲೇ ಆಗಿದೆ. ಇನ್ನೇನಿದ್ದರು ಮೆಗಾ ಆಕ್ಷನ್ ನಡೆಯಬೇಕಿದೆ. ತಂಡದಲ್ಲಿ ಬಲಿಷ್ಠ ಆಟಗಾರರನ್ನು ಉಳಿಸಿಕೊಂಡು ಉಳಿದ ಪ್ಲೇಯರ್ಗಳನ್ನ 10 ಫ್ರಾಂಚೈಸಿಗಳು ರಿಲೀಸ್ ಮಾಡಿವೆ. 2025ರ ಐಪಿಎಲ್ ಸೀಸನ್ 18ರ ಮೆಗಾ ಆಕ್ಷನ್ ಸೌದಿ ಅರೇಬಿಯಾದಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಕನ್ನಡಿಗನ ಮೇಲೆ ಮುಂಬೈ ಇಂಡಿಯನ್ಸ್ ಕಣ್ಣು.. ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆಯಲು ಫ್ರಾಂಚೈಸಿ ಪ್ಲಾನ್!
ಇಂಡಿಯನ್ ಪ್ರೀಮಿಯರ್ ಲೀಗ್ನ ಮೆಗಾ ಹರಾಜನ್ನು ಇದೇ ತಿಂಗಳು 24 ಹಾಗೂ 25 ರಂದು ಸೌದಿ ಅರೇಬಿಯಾದ ರಿಯಾದ್ ನಗರದಲ್ಲಿ ನಡೆಯಲಿದೆ. ಆದರೆ ಈ ಕುರಿತು ಬಿಸಿಸಿಐ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಮೆಗಾ ಆಕ್ಷನ್ಗಾಗಿ ಬಿಸಿಸಿಐ ಅಂತಿಮ ಕೆಲಸಗಳನ್ನು ಮಾಡುತ್ತಿದ್ದು ಶೀಘ್ರದಲ್ಲೇ ಸ್ಥಳ ಹಾಗೂ ದಿನಾಂಕ ಘೋಷಣೆ ಮಾಡಲಿದೆ ಎಂದು ಐಪಿಎಲ್ ಮೂಲಗಳು ಹೇಳುತ್ತಿವೆ.
ಇದನ್ನೂ ಓದಿ: IND vs SA; ಡರ್ಬನ್ ತಲುಪಿದ ಸೂರ್ಯಕುಮಾರ್ ನೇತೃತ್ವದ ಟೀಮ್.. T20 ಪಂದ್ಯ ಯಾವಾಗ?
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನವೆಂಬರ್ 22 ರಿಂದ 26 ರವರೆಗೆ ಪರ್ತ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಇದೇ ದಿನಾಂಕ ಅಂದರೆ ನ.24, 25 ರಂದು ಐಪಿಎಲ್ ಆಕ್ಷನ್ ಕೂಡ ನಡೆಯುತ್ತದೆ ಎನ್ನಲಾಗುತ್ತಿದೆ. ಈ ಎರಡು ಕೂಡ ಡಿಸ್ನಿ ಸ್ಟಾರ್ನಲ್ಲಿ ಪ್ರಸಾರ ಆಗುವುದರಿಂದ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಹರಾಜು ಮಧ್ಯಾಹ್ನ ನಂತರ ನಡೆದರೆ ಪ್ರಸಾರದ ಘರ್ಷಣೆ ತಪ್ಪಿಸಬಹುದು ಎನ್ನಲಾಗುತ್ತಿದೆ. ಆದರೆ ಅಧಿಕಾರಿಗಳು ಯಾವ ನಿರ್ಧಾರ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.
ಇನ್ನು ಈ ಸಲದ ಮೆಗಾ ಆಕ್ಷನ್ನಲ್ಲಿ ಭಾರತದ ಆಟಗಾರರಾದ ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಆರ್ಶ್ದೀಪ್ ಸಿಂಗ್ ಮತ್ತು ಇಶಾನ್ ಕಿಶನ್ ದೊಡ್ಡ ಮಟ್ಟದಲ್ಲಿ ಖರೀದಿ ಆಗಬಹುದು ಎನ್ನಲಾಗುತ್ತಿದೆ. ಇನ್ನೊಂದೆಡೆ ಕಿಶನ್ ಅವರನ್ನು ತಂಡಕ್ಕೆ ಮತ್ತೆ ವಾಪಸ್ ಪಡೆಯಲು ಮುಂಬೈ ಇಂಡಿಯನ್ಸ್ ಪ್ಲಾನ್ ಮಾಡುತ್ತಿದೆ ಎನ್ನಲಾಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ