/newsfirstlive-kannada/media/post_attachments/wp-content/uploads/2025/03/RCB-vs-CSK-1.jpg)
ಇಡೀ ಐಪಿಎಲ್ ಟೂರ್ನಿಯದ್ದೇ ಒಂದು ಲೆಕ್ಕವಾದ್ರೆ ಈ ಪಂದ್ಯದ್ದೇ ಒಂದು ಲೆಕ್ಕ. ಶ್ರೀಮಂತ ಕ್ರಿಕೆಟ್ ಲೀಗ್ನ ಹೈಪ್ರೋಪೈಲ್ ತಂಡಗಳ ನಡುವಿನ ಬಿಗ್ ಬ್ಯಾಟಲ್ಗೆ ಚೆನ್ನೈನ ಚೆಪಾಕ್ ರೆಡಿಯಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಫೈಟ್ನ ಫೀವರ್ ಕ್ರಿಕೆಟ್ ಜಗತ್ತನ್ನ ಆವರಿಸಿದೆ.
ಅಭಿಮಾನಿಗಳ ವಲಯದಲ್ಲಿ ಹೈವೋಲ್ಟೆಜ್ ಕದನದ ಕ್ರೇಜ್ ಡಬಲ್ ಆಗಿದೆ. ಹೈಪ್ ಹೆಚ್ಚಾಗಿದೆ. ಜಿದ್ದಾಜಿದ್ದಿನ ಹಣಾಹಣಿಯ ನಿರೀಕ್ಷೆ ಎಲ್ಲರಲ್ಲಿದೆ. ಯೆಲ್ಲೋ ಆರ್ಮಿ ಇಂದಿನ ಪಂದ್ಯದಲ್ಲಿ ರೆಡ್ ಆರ್ಮಿಯನ್ನ ಸೋಲಿಸಿಯೇ ತೀರಲು ಪಣತೊಟ್ಟಿದೆ. ಅದಕ್ಕೆ ಕಾರಣ ಕೂಡ ಇದೆ.
ಇದನ್ನೂ ಓದಿ: ತವರಿನಲ್ಲಿ ಹೈದ್ರಾಬಾದ್ಗೆ ಭಾರೀ ಮುಖಭಂಗ.. ರಿಷಭ್ ಪಂತ್ ಮುಂದೆ ತಲೆ ಬಾಗಿದ ಕಮಿನ್ಸ್
ದಿನಾಂಕ - ಮೇ 18, 2024
ತುಂಬಾ ಹಳೆ ಕತೆಯಲ್ಲ. ಕಳೆದ ಸೀಸನ್ ಐಪಿಎಲ್ನಲ್ಲಿ ಆರ್ಸಿಬಿ-ಸಿಎಸ್ಕೆ ಆಡಿದ ಕೊನೆಯ ಲೀಗ್ ಪಂದ್ಯದ ಕತೆ. ಮೇ 18, 2024ರಂದು ನಡೆದಿದ್ದ ಡು ಆರ್ ಡೈ ಕದನ. ಫ್ಲೇ ಆಫ್ ಎಂಟ್ರಿಗೆ ಉಭಯ ತಂಡಗಳಿಗೂ ಮುಂದೂ ಗೆಲ್ಲಲೇಬೇಕಾದ ಪಂದ್ಯ ಅದು. ಬೆಂಗಳೂರಿನ ಚಿನ್ನಸ್ವಾಮಿ ಮೈದಾನ ಅಭಿಮಾನಿಗಳಿಂದ ಕಿಕ್ಕಿರಿದು ತುಂಬಿತ್ತು. ಯಾವಾಗ್ಲೂ ಆರ್ಸಿಬಿ.. ಆರ್ಸಿಬಿ.. ಎಂಬ ಕಹಳೆ ಮೊಳಗುವ ಆರ್ಸಿಯ ಭದ್ರಕೋಟೆಯಲ್ಲಿ ಅಂದು ಸಿಎಸ್ಕೆ ಪರವೂ ಘೋಷಣೆಗಳು ಕೇಳಿ ಬಂದಿದ್ವು. ರೆಡ್ ಜೆರ್ಸಿಗಳ ಜೊತೆಗೆ ಯೆಲ್ಲೋ ಜೆರ್ಸಿಗಳು ರಾರಾಜಿಸಿದ್ವು.
ಚೆನ್ನೈ ಬೌಲರ್ಗಳ ಚೆಂಡಾಡಿದ RCB ಬ್ಯಾಟರ್ಸ್
ಡು ಆರ್ ಡೈ ಬ್ಯಾಟಲ್ನಲ್ಲಿ ಮೊದಲು ಬ್ಯಾಟಿಂಗ್ಗಿಳಿದ ಆರ್ಸಿಬಿ ಹೋಮ್ಗ್ರೌಂಡ್ನಲ್ಲಿ ಚೆನ್ನೈ ಬೌಲರ್ಗಳ ಚೆಂಡಾಡಿತು. ಕೊಹ್ಲಿ, ಫಾಫ್ ಡುಪ್ಲೆಸಿ, ರಜತ್ ಪಾಟಿದಾರ್, ಕ್ಯಾಮರೂನ್ ಗ್ರೀನ್.. ಅಂತಿಮ ಹಂತದಲ್ಲಿ ಕಣದಲ್ಲಿ ಮ್ಯಾಕ್ಸ್ವೆಲ್ ಎಲ್ಲಾ ಬೌಂಡರಿ, ಸಿಕ್ಸರ್ಗಳಲ್ಲೇ ರನ್ ಡೀಲ್ ಮಾಡಿದ್ರು. 20 ಓವರ್ ಅಂತ್ಯಕ್ಕೆ ಆರ್ಸಿಬಿ 218 ರನ್ಗಳ ಬಿಗ್ ಸ್ಕೋರ್ ಕಲೆ ಹಾಕಿತ್ತು.
ಇದನ್ನೂ ಓದಿ: ಸಿಎಸ್ಕೆ ತಂಡದ ಈ ಬ್ರಹ್ಮಾಸ್ತ್ರ ಎದುರಿಸೋದೇ RCBಗೆ ಇವತ್ತು ದೊಡ್ಡ ಚಾಲೆಂಜ್..!
RCB ಬೊಂಬಾಟ್ ಬೌಲಿಂಗ್
218 ರನ್ಗಳಿಸಿದ್ರೂ ಪ್ಲೇ ಆಫ್ಗೆ ಕ್ವಾಲಿಫೈ ಆಗಲು ಸಿಎಸ್ಕೆಯನ್ನ 200ರ ಒಳಗೆ ಕಟ್ಟಿ ಹಾಕಬೇಕಿತ್ತು. ಬೊಂಬಾಟ್ ಬೌಲಿಂಗ್ ಮಾಡಿದ ಆರ್ಸಿಬಿ ಬೌಲರ್ಸ್, ಸಿಎಸ್ಕೆ ಪ್ರಮುಖ ಬ್ಯಾಟರ್ಗಳಿಗೆ ಕ್ರಿಸ್ನಲ್ಲಿ ನಿಲ್ಲೋಕೆ ಅವಕಾಶ ನೀಡಲಿಲ್ಲ. ಮಿಡಲ್ ಓವರ್ಗಳಲ್ಲಂತೂ ರಚಿನ್ ರವೀಂದ್ರ, ಶಿವಂ ದುಬೆ, ಮಿಚೆಲ್ ಸ್ಯಾಂಟ್ನೆರ್ಗೆ ಬ್ಯಾಕ್ ಟು ಬ್ಯಾಕ್ ಪೆವಿಲಿಯನ್ ದಾರಿ ತೋರಿಸಿದ್ರು. ಇಲ್ಲಿಗೆ ಕಥೆ ಮುಗೀಲಿಲ್ಲ. ಅಸಲಿ ಆಟ ಶುರುವಾಗಿದ್ದೇ ಆಗ. ಯಾಕೆಂದರೆ ಆಗ ಎಂಟ್ರಿಯಾಗಿದ್ದು ತಲಾ
ತಲಾ ಧೋನಿ ಎಂಟ್ರಿಯಾಗಿದ್ದೇ ಆಗಿದ್ದು, ಆರ್ಸಿಬಿ ಹೋಮ್ಗ್ರೌಂಡ್ ಫುಲ್ ಯೆಲ್ಲೋಮಯವಾಯ್ತು. ಧೋನಿ ಪಂದ್ಯವನ್ನ ಗೆಲ್ಲಿಸ್ತಾರೆ ಎಂಬ ಆತ್ಮವಿಶ್ವಾಸದಲ್ಲಿ ಸಿಎಸ್ಕೆ ಫ್ಯಾನ್ಸ್ ತೇಲಾಡ್ತಿದ್ರು. ಇದಕ್ಕೆ ತಕ್ಕಂತೆ ಆಡಿದ 3 ಬೌಂಡರಿ 1 ಸಿಕ್ಸರ್ ಚಚ್ಚಿದ್ರು. ಕೊನೆಯ ಓವರ್ನ 2ನೇ ಎಸೆತದಲ್ಲಿ ಧೋನಿ ಔಟಾದ್ರು. ಸಿಎಸ್ಕೆ ಫ್ಯಾನ್ಸ್ ಸೈಲೆಂಟಾದ್ರೆ ಆರ್ಸಿಬಿ ಅಭಿಮಾನಿಗಳ ಅಬ್ಬರ ಶುರುವಾಯ್ತು.
ಇದನ್ನೂ ಓದಿ: 13 ಬಾಲ್ನಲ್ಲಿ 5 ಸಿಕ್ಸರ್! ಪಂದ್ಯ ಸೋತರೂ SRH ಹುಡುಗನ ಬೊಂಬಾಟ್ ಬ್ಯಾಟಿಂಗ್..!
ಅಂತಿಮವಾಗಿ ರಣರೋಚಕ ಪಂದ್ಯವನ್ನ 27 ರನ್ಗಳ ಅಂತರದಿಂದ ಗೆದ್ದ ಆರ್ಸಿಬಿ, ಪ್ಲೇ ಆಫ್ಗೆ ಎಂಟ್ರಿ ಕೊಡ್ತು. ಸಿಎಸ್ಕೆಯ ಅಭಿಯಾನ ಸೋಲಿನೊಂದಿಗೆ ಅಂತ್ಯವಾಗಿತ್ತು. ಆರ್ಸಿಬಿ ಅಭಿಮಾನಿಗಳಂತೂ ಯುದ್ಧ ಗೆದ್ದಂತೆ ಅಂದು ಸಂಭ್ರಮಿಸಿದ್ರು. ಪಂದ್ಯ ಮುಗಿದ ಬಳಿಕ ತಡ ರಾತ್ರಿ 130ರವರೆಗೆ ಸ್ಟೇಡಿಯಂ ಹೊರಗೆ ಕಾದ ಫ್ಯಾನ್ಸ್ ಆರ್ಸಿಬಿ ಆಟಗಾರರಿಗೆ ಜೈಕಾರ ಹಾಕಿದ್ರು. ಕಬ್ಬನ್ ಪಾರ್ಕ್ ರಸ್ತೆಯ ಇಕ್ಕೆಲಗಳಲ್ಲೂ ಅಭಿಮಾನಿಗಳು ಕಿಕ್ಕಿರಿದು ತುಂಬಿದ್ರು.
RCBಯ ಗೆಲುವು, ಆಟಗಾರರ ಸಂಭ್ರಮ, ಅಭಿಮಾನಿಗಳ ಸೆಲಬ್ರೇಷನ್ ಈ ಎಲ್ಲವೂ ಇಂದು ಸಿಎಸ್ಕೆ ಪಾಳಯದಲ್ಲಿ ಕಿಚ್ಚು ಹತ್ತಿಸಿದೆ. ಅಭಿಮಾನಿಗಳ ವಲಯದಲ್ಲೂ ಪಂದ್ಯದ ಮೇಲೆ ಕ್ರೇಜ್ ಹೆಚ್ಚಾಗಿದೆ. ಅಂತದ್ದೇ ಒಂದು ರಣರೋಚಕ ಪಂದ್ಯದ ನಿರೀಕ್ಷೆ ಕ್ರಿಕೆಟ್ ಲೋಕದಲ್ಲಿದೆ. ಸಿಎಸ್ಕೆ ಸೇಡು ತೀರಿಸಿಕೊಳ್ಳುತ್ತಾ? ಚೆಪಾಕ್ನಲ್ಲೂ ಆರ್ಸಿಬಿ ಪರಾಕ್ರಮ ಮೆರೆಯುತ್ತಾ? ಕಾದು ನೋಡೋಣ.
ಇದನ್ನೂ ಓದಿ: RCB vs CSK ಕದನ.. ಚೆಪಾಕ್ ಸ್ಟೇಡಿಯಂ ಪಿಚ್ ರಿಪೋರ್ಟ್ ಹೇಗಿದೆ..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್