/newsfirstlive-kannada/media/post_attachments/wp-content/uploads/2025/03/Rajat_Patidar.jpg)
ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ನಡೆಯುತ್ತಿರುವ ಐಪಿಎಲ್​ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್, ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 197 ರನ್​ಗಳ ಬಿಗ್ ಟಾರ್ಗೆಟ್ ನೀಡಿದೆ. ನಾಯಕ ರಜತ್ ಪಾಟಿದಾರ್ ಅವರ ಅಮೋಘವಾದ ಅರ್ಧಶತಕದ ನೆರವಿನಿಂದ ಆರ್​ಸಿಬಿ ಬಿಗ್ ಸ್ಕೋರ್ ಕಲೆ ಹಾಕಿದೆ.
ಚೇಪಕ್​ ಇಂಟರ್​ ನ್ಯಾಷನಲ್​ ಕ್ರಿಕೆಟ್​​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ನಾಯಕ ರುತುರಾಜ್ ಗಾಯಕ್ವಾಡ್ ಟಾಸ್ ಗೆದ್ದು ಆರ್​​ಸಿಬಿಯನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದರು. ಓಪನರ್ ಆಗಿ ಕ್ರೀಸ್​ಗೆ ಆಗಮಿಸಿದ ಫಿಲಿಪ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಒಳ್ಳೆಯ ಆರಂಭ ಪಡೆದುಕೊಂಡರು. ಫಿಲಿಪ್​ ಸಾಲ್ಟ್​​ ಬ್ಯಾಟಿಂಗ್​ನಲ್ಲಿ ಅಬ್ಬರಿಸಿ 16 ಬಾಲ್​ನಲ್ಲಿ 5 ಭರ್ಜರಿ ಫೋರ್​​, 1 ಸಿಕ್ಸರ್​ ಸಮೇತ 32 ರನ್​ ಚಚ್ಚಿ ಧೋನಿಯಿಂದ ಸ್ಟಂಪ್ ಔಟ್ ಆದ್ರು.
ಇದನ್ನೂ ಓದಿ: ಬ್ಯಾಂಕಾಕ್‌ನಲ್ಲಿ ಪ್ರಬಲ ಭೂಕಂಪ, ಕಟ್ಟಡಗಳ ಕುಸಿತ.. ಭಾರತೀಯರಿಗಾಗಿ ಸಹಾಯವಾಣಿ ಆರಂಭ
/newsfirstlive-kannada/media/post_attachments/wp-content/uploads/2025/03/CSK-vs-RCB-1.jpg)
ಇನ್ನು ಸ್ಟಾರ್ ಬ್ಯಾಟರ್​ ವಿರಾಟ್​ ಕೊಹ್ಲಿ ನಿಧಾನಗತಿಯ ಬ್ಯಾಟಿಂಗ್​ ಮೂಲಕ ಆರಂಭದಿಂದಲೂ ರನ್​ ಗಳಿಸಲು ಪರದಾಡಿದರು ಎನ್ನಬಹುದು. ಏಕೆಂದರೆ ಅವರು ಆಡಿದ 30 ಎಸೆತಗಳಲ್ಲಿ 2 ಫೋರ್, 1 ಸಿಕ್ಸರ್​​ ಸಮೇತ 31 ರನ್​ ಗಳಿಸಿ ಆಡುವಾಗ ರಚೀನ್ ರವೀಂದ್ರಗೆ ಕ್ಯಾಚ್ ಕೊಟ್ಟು ಹೊರ ನಡೆದರು. ರಜತ್​ ಪಾಟಿದಾರ್​ ಮೂರು ಜೀವದಾನ ಪಡೆದುಕೊಂಡು ಕೊನೆಯವರೆಗೂ ಕ್ರೀಸ್​ನಲ್ಲೇ ಬ್ಯಾಟ್ ಬೀಸಿ ಸ್ಫೋಟಕ ಹಾಫ್​ಸೆಂಚುರಿ ಬಾರಿಸಿದರು.
ಇನ್ನು ದೇವದತ್ ಪಡಿಕ್ಕಲ್ 27, ಟಿಮ್ ಡೇವಿಡ್ 8 ಬಾಲ್​ಗೆ 22 ರನ್​ಗಳು ಆರ್​ಸಿಬಿ 190 ರನ್​ಗಳ ಗಡಿ ದಾಟಲು ಅನುಕೂಲವಾಯಿತು. ಹೀಗಾಗಿ 20 ಓವರ್​ಗಳಲ್ಲಿ 7 ವಿಕೆಟ್​ಗೆ ಆರ್​ಸಿಬಿ 197 ರನ್​ಗಳ ಬಿಗ್ ಟಾರ್ಗೆಟ್ ನೀಡಿದೆ. ಚೆನ್ನೈ ಇದೀಗ ಬ್ಯಾಟಿಂಗ್ ಮಾಡಲು ಕ್ರೀಸ್​ಗೆ ಆಗಮಿಸಿದೆ. ಆರ್​ಸಿಬಿ ಪರ ಅನುಭವಿ ಭುವನೇಶ್ವರ್ ಕುಮಾರ್ ಪೇಸ್ ಬೌಲಿಂಗ್ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us