/newsfirstlive-kannada/media/post_attachments/wp-content/uploads/2025/05/rcb-10.jpg)
ಇಂಡಿಯನ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯವು ಗುಜರಾತ್ನ ಅಹ್ಮದಾಬಾದ್ನಲ್ಲಿರುವ ಶ್ರೀ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ ಅಂತಾ ಬಿಸಿಸಿಐ ತಿಳಿಸಿದೆ. ಜೊತೆಗೆ ಕ್ವಾಲಿಫೈಯರ್-2 ಪಂದ್ಯ ಕೂಡ ನರೇಂದ್ರ ಮೋದಿ ಸ್ಟೇಡಿಯಂನಲ್ಲೇ ನಡೆಸಲು ಬಿಸಿಸಿಐ ನಿರ್ಧರಿಸಿದೆ.
ಇನ್ನು, ಕ್ವಾಲಿಫೈಯರ್ ಮೊದಲ ಪಂದ್ಯ ಹಾಗೂ ಎಲಿಮಿನೇಟರ್ ಪಂದ್ಯವು ಪಂಜಾಬ್ನ ಮಲ್ಲನಪುರ ಮೈದಾನದಲ್ಲಿ ನಡೆಸಲು ನಿರ್ಧರಿಸಿದೆ. ಮಲ್ಲನಪುರ ಮೈದಾನವು ಪಂಜಾಬ್ ಕಿಂಗ್ಸ್ನ ತವರು ಮೈದಾನವಾಗಿದೆ.
ಇದನ್ನೂ ಓದಿ: ಪಾಕ್ಗೆ ಹೋಗಿ ಬಂದ್ಮೇಲೆ ಈ ಕಿಲಾಡಿ ಲೇಡಿ ಬರೆದಿದ್ದೇನು ಗೊತ್ತಾ..? ಜ್ಯೋತಿ ಡೈರಿ ರಹಸ್ಯ ರಿವೀಲ್..!
ಮಳೆ ಬರುವ ಮುಂಜಾಗೃತ ಕ್ರಮವಾಗಿ ಪಂದ್ಯ ನಡೆಯುವ ಸ್ಥಳವನ್ನು ಬದಲಾಯಿಸಲಾಗಿದೆ. ಈ ಮೊದಲು ಬಿಸಿಸಿಐ ಒಂದು ಪ್ಲೇ-ಆಫ್ ಪಂದ್ಯ ಹಾಗೂ ಫೈನಲ್ ಮ್ಯಾಚ್ ಅನ್ನು ಕೋಲ್ಕತ್ತ ಈಡನ್ ಗಾರ್ಡನ್ನಲ್ಲಿ ನಡೆಸಲು ನಿರ್ಧರಿಸಿತ್ತು. ಅಲ್ಲದೇ, ಇನ್ನುಳಿದ ಎರಡು ಪಂದ್ಯಗಳನ್ನು ಹೈದರಾಬಾದ್ನಲ್ಲಿ ನಡೆಸಲು ನಿರ್ಧರಿಸಿತ್ತು. ಇದೀಗ ಹೈದರಾಬಾದ್ನಲ್ಲಿ ನಡೆಯುವ ಪಂದ್ಯಗಳನ್ನು ಮಲ್ಲನಪುರದಲ್ಲಿ ಹಾಗೂ ಕೋಲ್ಕತ್ತದಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನು ಗುಜರಾತ್ನಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಹೊಸ ಅಪ್ಡೇಟ್ಸ್..!
- 29-ಮೇ-25 (ಗುರುವಾರ) 7:30 PM: ಕ್ವಾಲಿಫೈಯರ್ 1 (ಮಲ್ಲನಪುರ)
- 30-ಮೇ-25 (ಶುಕ್ರವಾರ) – 7:30 PM: ಎಲಿಮಿನೇಟರ್ (ಮಲ್ಲನಪುರ)
- 01-ಜೂನ್-25 (ಭಾನುವಾರ) 7:30 PM: ಕ್ವಾಲಿಫೈರ್ 2 (ಅಹ್ಮದಾಬಾದ್)
- 03-ಜೂನ್-25 (ಮಂಗಳವಾರ) 7:30 PM: ಫೈನಲ್ (ಅಹ್ಮದಾಬಾದ್)
ಐಪಿಎಲ್ ರೋಚಕಘಟ್ಟ ತಲುಪುತ್ತಿದ್ದು, ಯಾರು ಕಪ್ ಗೆಲ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಮೂರು ತಂಡಗಳು ಪ್ಲೇ-ಆಫ್ ಪ್ರವೇಶ ಮಾಡಿವೆ. ಗುಜರಾತ್ ಟೈಟನ್ಸ್, ಆರ್ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಪ್ಲೇ-ಆಫ್ನಲ್ಲಿ ಆಡೋದು ಪಕ್ಕಾ ಆಗಿದೆ. ಇನ್ನು ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಪ್ಲೇ-ಆಫ್ ಪ್ರವೇಶಕ್ಕೆ ಪ್ರಯತ್ನ ಮಾಡ್ತಿದೆ. ಈ ಎರಡು ತಂಡಗಳಲ್ಲಿ ಒಂದು ತಂಡ ಪ್ಲೇ-ಆಫ್ಗೆ ಅರ್ಹತೆ ಪಡೆಯಲಿದೆ.
ಇದನ್ನೂ ಓದಿ: ಪ್ಲೇ-ಆಫ್ ಎಂಟ್ರಿ ಖುಷಿಯಲ್ಲಿ ಮೈಮರೆತರೆ ಕಷ್ಟ.. ಆರ್ಸಿಬಿ ಮುಂದಿನ ಪಂದ್ಯ ಯಾವಾಗ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್