/newsfirstlive-kannada/media/post_attachments/wp-content/uploads/2025/06/MAYANK.jpg)
ಐಪಿಎಲ್ ಫೈನಲ್ ಪಂದ್ಯವು ರಜತ್ ಪಾಟೀದಾರ್ ನಾಯಕತ್ವದ RCB ಮತ್ತು ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ನಡುವೆ ಶುರುವಾಗಿದೆ. ಟಾಸ್ ಸೋತು ಬ್ಯಾಟಿಂಗ್ಗೆ ಇಳಿದಿರುವ ಆರ್ಸಿಬಿ ಆರಂಭಿಕ ಆಘಾತ ಅನುಭವಿಸಿದೆ.
ದೊಡ್ಡ ಸ್ಕೋರ್ ನಿರೀಕ್ಷೆಯಲ್ಲಿದ್ದ ಆರ್ಸಿಬಿಗೆ ಪಂಜಾಬ್ ಕಿಂಗ್ಸ್ ಪೆಟ್ಟು ಕೊಟ್ಟಿದೆ. ಅಂದರೆ ಆರ್ಸಿಬಿ ಎರಡು ವಿಕೆಟ್ ಕಳೆದುಕೊಂಡಿದ್ದು, ಸಂಕಷ್ಟದಲ್ಲಿದೆ. ಆರಂಭಿಕ ಬ್ಯಾಟ್ಸಮನ್ ಫಿಲ್ ಸಾಲ್ಟ್, ಒಂದು ಸಿಕ್ಸರ್, ಎರಡು ಬೌಂಡರಿ ಬಾರಿಸಿ ಬಿಗ್ ಸ್ಕೋರ್ ಗಳಿಸುವ ಸೂಚನೆ ನೀಡಿದ್ದರು.
ಇದನ್ನೂ ಓದಿ: ಫೈನಲ್ನಲ್ಲಿ ಕೈಕೊಟ್ಟ ಇಬ್ಬರು ಸ್ಟಾರ್ ಬ್ಯಾಟ್ಸಮನ್.. ಕೊಹ್ಲಿಯೇ ಆರ್ಸಿಬಿಗೆ ಆಧಾರ..!
ಆದರೆ, ಬಾಲ್ ಎದುರಿಸಿ 16 ರನ್ಗಳಿಸಿದ್ದ ಸಾಲ್ಟ್ ಅವರ ವಿಕೆಟ್ ಪಡೆಯುವಲ್ಲಿ ಜೆಮಿಸನ್ ಯಶಸ್ವಿಯಾದರು. ನಂತರ ಬಂದ ಮಯಾಂಕ್ ಅಗರ್ವಾಲ್, ಸ್ಫೋಟಕ ಬ್ಯಾಟಿಂಗ್ ಮಾಡುವ ಸುಳಿವು ನೀಡಿದ್ದರು. 18 ಬಾಲ್ನಲ್ಲಿ ಒಂದು ಸಿಕ್ಸರ್, 2 ಬೌಂಡರಿಯೊಂದಿಗೆ 24 ರನ್ಗಳಿಸಿ ಔಟ್ ಆದರು.
ಭರವಸೆ ಮೂಡಿಸಿದ ಕೊಹ್ಲಿ
ಇತ್ತ ಆರ್ಸಿಬಿ ಎರಡು ವಿಕೆಟ್ ಕಳೆದುಕೊಂಡು 65 ರನ್ಗಳಿಸಿ ಮುನ್ನುಗ್ಗುತ್ತಿದೆ. ಆರ್ಸಿಬಿ ದಂತಕತೆ ವಿರಾಟ್ ಕೊಹ್ಲಿ 17 ರನ್ಗಳಿಸಿ ಭರವಸೆ ಮೂಡಿಸಿದ್ದಾರೆ. ಕೊಹ್ಲಿಗೆ ನಾಯಕ ರಜತ್ ಪಾಟೀದಾರ್ ಸಾಥ್ ನೀಡಿದ್ದಾರೆ.
ಇದನ್ನೂ ಓದಿ: ಆರ್ಸಿಬಿ ಮೊದಲು ಬ್ಯಾಟಿಂಗ್.. ಪಂಜಾಬ್ ವಿರುದ್ಧ ಆಡುವ ಬಲಿಷ್ಠ ತಂಡ ಪ್ರಕಟ..!
ಐಪಿಎಲ್ ಟೂರ್ನಿ ಆರಂಭವಾಗಿ 18 ವರ್ಷಗಳು ಕಳೆದಿವೆ. ಪಂಜಾಬ್ ಕಿಂಗ್ಸ್ ಹಾಗೂ ಆರ್ಸಿಬಿ ಇಲ್ಲಿಯವರೆಗೆ ಒಂದೇ ಒಂದು ಟ್ರೋಫಿಯನ್ನು ಎತ್ತಿ ಹಿಡಿದಿಲ್ಲ. ಹೀಗಾಗಿ 18 ವರ್ಷಗಳ ಟ್ರೋಫಿ ಬರ ನೀಗಿಸಿಕೊಳ್ಳಲು ಎರಡು ತಂಡಗಳು ಸೆಣಸಾಟ ನಡೆಸುತ್ತಿವೆ. ಆರ್ಸಿಬಿ ತಂಡವನ್ನು ರಜತ್ ಪಾಟೀದಾರ್ ಮುನ್ನಡೆಸುತ್ತಿದ್ದರೆ, ಪಂಜಾಬ್ ಕಿಂಗ್ಸ್ ತಂಡವನ್ನು ಶ್ರೇಯಸ್ ಅಯ್ಯರ್ ಲೀಡ್ ಮಾಡ್ತಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ