ಐಪಿಎಲ್​​ಗೆ ಕೈಕೊಟ್ಟ ಇಂಗ್ಲೆಂಡ್​ನ ಐದು ಸ್ಟಾರ್ ಆಟಗಾರರು.. ಆರ್​ಸಿಬಿಗೂ ಆಘಾತ..!

author-image
Ganesh
Updated On
ಐಪಿಎಲ್​​ಗೆ ಕೈಕೊಟ್ಟ ಇಂಗ್ಲೆಂಡ್​ನ ಐದು ಸ್ಟಾರ್ ಆಟಗಾರರು.. ಆರ್​ಸಿಬಿಗೂ ಆಘಾತ..!
Advertisment
  • ವೆಸ್ಟ್​ ವಿಂಡೀಸ್​ ಪ್ರವಾಸಕ್ಕೆ ಇಂಗ್ಲೆಂಡ್​ನಿಂದ ತಂಡ ಪ್ರಕಟ
  • ಮೇ 29 ರಿಂದ ಏಕದಿನ ಪಂದ್ಯ ಆಡಲಿರುವ ಇಂಗ್ಲೆಂಡ್
  • ಒಟ್ಟು ಐದು ಸ್ಟಾರ್ ಆಟಗಾರರು ಇಂಗ್ಲೆಂಡ್ ತಂಡಕ್ಕೆ ಕಂಬ್ಯಾಕ್

ಐಪಿಎಲ್​ನ ಮುಂದಿನ ಪಂದ್ಯಗಳಿಗೆ ದಿನಾಂಕ ನಿಕ್ಕಿ ಆಗಿದೆ. ಯುದ್ಧ ಬಿಕ್ಕಟ್ಟು ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದ್ದ ಪಂದ್ಯಗಳು, ಮೇ 17 ರಿಂದ ಆರಂಭಗೊಳ್ಳುತ್ತಿವೆ. ಅಂತೆಯೇ ಮೇ 17 ರಂದು ಆರ್​ಸಿಬಿ ಮತ್ತು ಕೋಲ್ಕತ್ತ ನೈಟ್​ ರೈಡರ್ಸ್​ ತಂಡಗಳು ಬೆಂಗಳೂರಿನಲ್ಲಿ ಸೆಣಸಾಟ ನಡೆಸಲಿವೆ.

ಈ ಮಧ್ಯೆ ಐಪಿಎಲ್​​ ಫ್ರಾಂಚೈಸಿಗಳಿಗೆ ದೊಡ್ಡ ಆಘಾತ ಎದುರಾಗಿದೆ. ಕೆಲವು ಅಂತಾರಾಷ್ಟ್ರೀಯ ಆಟಗಾರರು ದೇಶದ ತಂಡಗಳಿಗೆ ಕಂಬ್ಯಾಕ್ ಮಾಡಿದ್ದಾರೆ. ಹೀಗಾಗಿ ಕೆಲವು ತಂಡಗಳು ಬಲಿಷ್ಠ ಆಟಗಾರರ ಅಲಭ್ಯತೆಯನ್ನು ಎದುರಿಸಲಿವೆ.

ಇದನ್ನೂ ಓದಿ: ಕೊನೆಗೂ ಈಡೇರಲಿಲ್ಲ ಕೊಹ್ಲಿಯ ಆ ಒಂದು ಕನಸು.. ಸಾಧನೆಯ ಹಮ್ಮೀರನಿಗೆ ಅದೊಂದು ಕೊರಗು..!

ವಿಶೇಷವಾಗಿ ಇಂಗ್ಲೆಂಡ್ ಮೇ 29 ರಿಂದ ಆರಂಭವಾಗಲಿರುವ ವೆಸ್ಟ್ ವಿಂಡೀಸ್ ಪ್ರವಾಸಕ್ಕೆ ತಂಡವನ್ನು ಪ್ರಕಟಿಸಿದೆ. ಅದರಲ್ಲಿ ಐಪಿಎಲ್ ಆಡ್ತಿರುವ ಐದು ಇಂಗ್ಲೆಂಡ್ ಆಟಗಾರರು ತಂಡದಲ್ಲಿದ್ದಾರೆ. ಅವರು ಐಪಿಎಲ್​ನ ಮುಂದಿನ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಅದರಲ್ಲಿ ಆರ್​ಸಿಬಿ ಸ್ಫೋಟಕ ಬ್ಯಾಟ್ಸಮನ್ ಜೊಕೊಬ್ ಬೆಥಲ್ ಕೂಡ ಸೇರಿದ್ದಾರೆ.

ಸ್ಟಾರ್ ಬ್ಯಾಟರ್​ ಜೋಶ್ ಬಟ್ಲರ್, ಜೊಕೊಬ್ ಬೆಥಲ್, ಜಮೀ ಓವರ್ಟನ್, ವಿಲ್ ಜಾಕ್ಸ್, ಜೋಫ್ರಾ ಅರ್ಚರ್ ಇಂಗ್ಲೆಂಡ್ ತಂಡಕ್ಕೆ ಮರಳಿದ್ದಾರೆ. ಅವರಲ್ಲಿ ಸ್ಪಿನ್ನರ್​ಗಳಾದ ಟಾಮ್ ಹಾರ್ಟ್ಲಿ, ವೇಗಿ ಬ್ರ್ಯಾಡನ್ ಕರ್ಸೆ ಅವರೂ ಅವರೂ ಕೂಡ ಇಂಗ್ಲೆಂಡ್ ತಂಡದ ಭಾಗವಾಗಿದ್ದಾರೆ. ಲಿಯಾಮ್ ಲಿವಿಂಗ್​ಸ್ಟೋನ್ ತಂಡಕ್ಕೆ ಆಯ್ಕೆ ಆಗಿಲ್ಲ. ಮೇ 29 ರಿಂದ ಜೂನ್ 3ವರೆಗೆ ಏಕದಿನ ಪಂದ್ಯ ನಡೆಯಲಿದೆ. ಇದೇ ಅವಧಿಯಲ್ಲಿ ಭಾರತದಲ್ಲಿ ಐಪಿಎಲ್​ನ ಅಂತಿಘಟ್ಟದ ಪಂದ್ಯಗಳು ನಡೆಯಲಿವೆ. ಇನ್ನು ಟಿ-20 ತಂಡಕ್ಕೆ ಫಿಲ್​ ಸಾಲ್ಟ್ ಕೂಡ ಆಯ್ಕೆ ಆಗಿದ್ದಾರೆ.

ಇದನ್ನೂ ಓದಿ: ಆರ್​ಸಿಬಿಗೆ ಭರ್ಜರಿ ಗುಡ್​​ನ್ಯೂಸ್​.. ಮುಂದಿನ ಎಲ್ಲಾ ಪಂದ್ಯ ಆಡ್ತಾರೆ ಇಂಗ್ಲೆಂಡ್​ನ ಸ್ಟಾರ್​ ಪ್ಲೇಯರ್​..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment