/newsfirstlive-kannada/media/post_attachments/wp-content/uploads/2025/03/VYSHAK-VIJAYAKUMAR.jpg)
ಐಪಿಎಲ್ನ ಐದನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್, ಪಂಜಾಬ್ ಕಿಂಗ್ಸ್ ವಿರುದ್ಧ ವಿರೋಚಿತ ಸೋಲು ಅನುಭವಿಸಿದೆ. 11 ರನ್ಗಳ ಗೆಲುವು ಪಡೆದ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್, 18ನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಪಂಜಾಬ್ ಕಿಂಗ್ಸ್, ಶ್ರೇಯಸ್ ಅಯ್ಯರ್ ಅವರ 97 ರನ್ಗಳ ಕೊಡುಗೆಯಿಂದ ಐದು ವಿಕೆಟ್ ಕಳೆದುಕೊಂಡು 243 ರನ್ಗಳಿಸಿತ್ತು. ಈ ಬೃಹತ್ ಗುರಿಯನ್ನು ಬೆನ್ನು ಹತ್ತಿದ್ದ ಗುಜರಾತ್ ಟೈಟನ್ಸ್ ಕೂಡ, ಚೇಸಿಂಗ್ನಲ್ಲಿ ಹಿಂದೆ ಬೀಳಲಿಲ್ಲ. ಪಂಜಾಬ್ ತಂಡಕ್ಕೆ ಸರಿಯಾದ ಪೈಪೋಟಿ ನೀಡಿತು. ಪಂಜಾಬ್ ತಂಡದ ಪರ ಸಾಯಿ ಸುದರ್ಶನ್ 41 ಬಾಲ್ನಲ್ಲಿ 74 ರನ್ಗಳಿಸಿ ಗೆಲುವಿನತ್ತ ಕೊಂಡೊಯ್ದಿದ್ದರು.
ಇದನ್ನೂ ಓದಿ: 4, 4, 4, 6, 6, 6, 6, 6; ಶ್ರೇಯಸ್ ಅಯ್ಯರ್ ಸಿಡಿಲಬ್ಬರದ ಅರ್ಧ ಶತಕ ಹೇಗಿತ್ತು?
ಆದರೆ ಕೊನೆಯಲ್ಲಿ ತೆವಾಟಿಯಾ ಮತ್ತು ಶೆರ್ಫೆನ್ ಔಟಾದ ಪರಿಣಾಮ 11 ರನ್ಗಳಿಂದ ಸೋಲನ್ನು ಎದುರಿಸಬೇಕಾಯಿತು. ಇನ್ನು ಗುಜರಾತ್ ಟೈಟನ್ಸ್ ಪರ, ಗಿಲ್ 14 ಬಾಲ್ನಲ್ಲಿ 33 ರನ್ಗಳಿಸಿದರು. ಜೋಶ್ ಬಟ್ಲರ್ 54 ರನ್ಗಳಿಸಿದ್ರೆ, ಶೆರ್ಫೆನ್ 46 ರನ್ಗಳಿಸಿದರು. ನಿಗಧಿತ 20 ಓವರ್ನಲ್ಲಿ ಗುಜರಾತ್ ಟೈಟನ್ಸ್ 5 ವಿಕೆಟ್ ಕಳೆದುಕೊಂಡು 232 ರನ್ಗಳಿಸಿ ಸೋಲಿಗೆ ಶರಣಾಯ್ತು.
ಇಂಪ್ಯಾಕ್ಟ್ ಪ್ಲೇಯರ್ ಆಗಿ ಮಿಂಚಿದ ಕನ್ನಡಿಗ
ಇನ್ನು ನಿನ್ನೆಯ ಪಂದ್ಯದಲ್ಲಿ ಕನ್ನಡಗಿ ಪ್ರಸಿದ್ಧ ಕೃಷ್ಣ ಪಂಜಾಬ್ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. 14ನೇ ಓವರ್ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕೆ ಇಳಿದ ವೈಶಾಕ್ ವಿಜಯ್ಕುಮಾರ್, ಮೂರು ಓವರ್ ಮಾಡಿ ಕೇವಲ 28 ರನ್ಗಳನ್ನು ನೀಡಿದರು. 15ನೇ ಓವರ್ನಲ್ಲಿ 5 ರನ್, 17ನೇ ಓವರ್ನಲ್ಲಿ ಮೂರು ವೈಡ್ ಬಾಲ್ ಹಾಕಿ ಐದು ರನ್ ಬಿಟ್ಟುಕೊಟ್ಟರು. ಆ ಮೂಲಕ ಗೆಲುವಿನ ಸನಿಹಕ್ಕೆ ಬಂದಿದ್ದ ಗುಜರಾತ್ ಟೈಟನ್ಸ್ಗೆ ತೀವ್ರ ಒತ್ತಡ ಹಾಕಿದರು. ಇನ್ನು, 19ನೇ ಓವರ್ನಲ್ಲಿ 18 ರನ್ಗಳನ್ನು ನೀಡಿದರೂ, ಪಂದ್ಯ ಪಂಜಾಬ್ ಪರ ವಾಲಿತ್ತು.
ಉಳಿದೆಲ್ಲ ಬೌಲರ್ಗಳಿಗೆ ಹೋಲಿಕೆ ಮಾಡಿದರೆ ವಿಜಯ್ಕುಮಾರ್ ಅವರ ಬೌಲಿಂಗ್ ತುಂಬಾನೇ ಪರಿಣಾಮಕಾರಿಯಾಗಿತ್ತು. 9.30 ಎಕನಾಮಿಯಲ್ಲಿ ಬಾಲ್ ಮಾಡಿದ ವೈಶಾಕ್, 28 ರನ್ಗಳನ್ನು ನೀಡಿದರು. ಆದರೆ ಅವರಿಗೆ ಯಾವುದೇ ವಿಕೆಟ್ ಸಿಗಲಿಲ್ಲ.
ಇದನ್ನೂ ಓದಿ: ಶತಕಕ್ಕೆ ಮೂರೇ 3 ರನ್ ಬೇಕಿತ್ತು.. ಆದ್ರೂ ತಂಡಕ್ಕಾಗಿ ತ್ಯಾಗ ಮಾಡಿದ ಕ್ಯಾಪ್ಟನ್ ಶ್ರೇಯಸ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್