/newsfirstlive-kannada/media/post_attachments/wp-content/uploads/2024/08/Siraj.jpg)
2025ರ ಐಪಿಎಲ್ ಪಂದ್ಯಕ್ಕಾಗಿ ಎಲ್ಲರೂ ಎದುರು ನೋಡುತ್ತಿದ್ದಾರೆ. ಅದರಲ್ಲೂ ಆರ್​ಸಿಬಿ ತಂಡದ ವಿಚಾರವಾಗಿ ಕುತೂಹಲ ಹೆಚ್ಚಾಗುತ್ತಿದೆ. ಫ್ಯಾನ್ಸ್​ಗೆ ಈ ಬಾರಿ ಯಾರು ನಾಯಕತ್ವ ವಹಿಸಲಿದ್ದಾರೆ ಎಂಬ ಪ್ರಶ್ನೆಯ ಜೊತೆಗೆ ತಂಡದಿಂದ ಯಾರೆಲ್ಲಾ ಹೊರಗುಳಿಯಲಿದ್ದಾರೆ ಎಂಬ ಪ್ರಶ್ನೆಯೂ ಕಾಡುತ್ತಿದೆ. ಆದರೆ ರೆಡ್​ ಆರ್ಮಿ ಈ ಮೂವರು ಆಟಗಾರರನ್ನು ತಂಡದಿಂದ ಕೈಬಿಡಲಿದೆ ಎಂಬ ಮಾತುಗಳು ಹರಿದಾಡುತ್ತಿವೆ.
ನಾಯಕತ್ವದಿಂದ ಕೆಳಗಿಳಿಯಲಿದ್ದಾರಾ ಫಾಪ್​
ಫಾಫ್​ ಡುಪ್ಲೆಸಿಸ್​​ ಆರ್​ಸಿಬಿಯ ಮೂರು ಆವೃತ್ತಿಗಳನ್ನು ಮುನ್ನಡೆಸಿದ್ದಾರೆ. ಆದರೆ ಈವರೆಗೆ ಅವರಿಂದ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಬ್ಯಾಟಿಂಗ್​​ನಲ್ಲೂ ಉತ್ತಮ ಪ್ರದರ್ಶನ ತೋರಿದರೂ ಅವರ ನಾಯಕತ್ವದ ಬಗ್ಗೆ ಹಲವು ಪ್ರಶ್ನೆಗಳು ಮೂಡಿದ್ದವು. ಆದರೀಗ ಅವರನ್ನು ತಂಡ ಕೈಬಿಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಕುರಿತಾಗಿ ಆರ್​ಸಿಬಿ ಫ್ಯಾನ್ಸ್​ ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಇಂದು ನಿರ್ಧಾರವಾಗಲಿದೆ ವಿನೇಶ್ ಪೋಗಟ್​​ ಭವಿಷ್ಯ.. ಬೆಳ್ಳಿ ಪದಕ ಸಿಗೋದು ಮಾತ್ರ..
ಗ್ರೀನ್​ ಇಲ್ವಾ ಗ್ರೀನ್​ ಸಿಗ್ನಲ್​
ಕ್ಯಾಮರೂನ್​ ಗ್ರೀಲ್​ ಆಲ್​​ರೌಂಡರ್​ ಆಗಿದ್ದು, ಭಾರೀ ವೆಚ್ಚದೊಂದಿಗೆ ಅವರನ್ನು ಖರೀದಿಸಲಾಗಿದೆ. ಆದೆ ಅವರು ರೆಡ್​ ಆರ್ಮಿಗೆ ತನ್ನ ತಾಖತ್ತನ್ನು ತೋರಿಸಿಲ್ಲ. ಹೀಗಾಗಿ ಮುಂಬರುವ ಐಪಿಎಲ್ ಹರಾಜಿನಲ್ಲಿ ತಂಡದಿಂದ ಕೈಬಿಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ನೀರಜ್ ಚೋಪ್ರಾ ಕೋಟಿ ಕೋಟಿ ಆಸ್ತಿ ಒಡೆಯ.. ಚಿನ್ನ ಗೆದ್ದ ನದೀಮ್ ಬಳಿ ಎಷ್ಟು ಕೋಟಿ ಆಸ್ತಿ ಇದೆ..?
ಮ್ಯಾಕ್ಸ್​ಗಿಲ್ವಾ ಅವಕಾಶ
ಗ್ಲೇನ್​ ಮ್ಯಾಕ್ಸ್​ವೆಲ್​ ತಂಡದಿಂದ ಕೈಬಿಡುವ ಸಾಧ್ಯತೆ ಬಹುಪಾಲಿದೆ. ಕಳೆದ ಆರ್​ಸಿಬಿ ಪ್ರದರ್ಶನವನ್ನು ಕಂಡಾಗ ಮ್ಯಾಕ್ಸ್​ವೆಲ್​ ಸೊನ್ನೆ ಸುತ್ತಿದ್ದೇ ಜಾಸ್ತಿ. ಹಾಗಾಗಿ ಈ ಬಾರಿ ಆತನಿಗೆ ಗುಡ್​ ಬೈ ಹೇಳುವ ಸಾಧ್ಯತೆ ಇದೆ.
ಫಾಫ್​​ ಬದಲಿಗೆ ಯಾರು ನಾಯಕ?
ಆರ್​ಸಿಬಿ ಫಾಫ್​​ ಬದಲಿಗೆ ಕೆ.ಎಲ್​ ರಾಹುಲ್​ನನ್ನು ನಾಯಕನನ್ನಾಗಿ ಸ್ವೀಕರಿಸಲಿದೆ ಎನ್ನಲಾಗುತ್ತಿದೆ. ಅತ್ತ ಕೊಹ್ಲಿ ಕೂಡ ತಂಡದಲ್ಲಿ ಇದ್ದು, ಅವರ ಮಾರ್ಗದರ್ಶನದೊಂದಿಗೆ ಕೆ ಎಲ್​ ರಾಹುಲ್​ ನಾಯಕತ್ವ ವಹಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಭೀಕರ ರಸ್ತೆ ಅಪಘಾತದಲ್ಲಿ ನಜ್ಜುಗುಜ್ಜಾದ ಟಾಟಾ ಸುಮೋ.. 6 ಮಂದಿ ಸಾವು, ಇಬ್ಬರು ಗಂಭೀರ
ಇನ್ನು ಬೆಂಗಳೂರು ತಂಡ ಕೆಲವು ಸಂಭಾವ್ಯ ಆಟಗಾರನನ್ನು ಉಳಿಸಿಕೊಳ್ಳಲಿದೆ. ಅದರಲ್ಲಿ ವಿರಾಟ್ ಕೊಹ್ಲಿ, ಸಿರಾಜ್ ಮತ್ತು ರಜತ್ ಪಾಟಿದಾರ್ ಅವರನ್ನು ಉಳಿಸಿಕೊಳ್ಳುವುದು ಖಚಿತ ಎನ್ನಲಾಗುತ್ತಿದೆ. ಮತ್ತೊಂದೆಡೆ, ಯಶ್ ದಯಾಳ್ ಮತ್ತು ವಿಲ್ ಜಾಕ್ಸ್ ಅವರನ್ನು ಕೂಡ ತಂಡದಲ್ಲಿ ಇರಿಸಿಕೊಳ್ಳಬಹುದು ಎನ್ನಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us