Advertisment

ದತ್ತು ಪುತ್ರ vs ಮನೆ ಮಗ.. ಚಿನ್ನಸ್ವಾಮಿಯಲ್ಲಿ ಇವತ್ತು ಆರ್​ಸಿಬಿ ಸ್ಪೆಷಲ್ ಪ್ಲಾನ್..!

author-image
Ganesh
Updated On
ವಿರಾಟ್​ ಕೊಹ್ಲಿ V/S ಕೆ.ಎಲ್‌ ರಾಹುಲ್ ಸಮರ; ಇವತ್ತಿನ RCB ಟಾರ್ಗೆಟ್ ಪ್ಲೇ ಆಫ್​ ಅಲ್ಲವೇ ಅಲ್ಲ!
Advertisment
  • ಆರ್​ಸಿಬಿ ಡೆಲ್ಲಿ ಕ್ಯಾಪಿಟಲ್ಸ್ ಕಾಳಗಕ್ಕೆ ಕೌಂಟ್​ಡೌನ್
  • ಬೆಂಗಳೂರಿನಲ್ಲಿ ನಡೆಯಲಿದೆ ಮೆಗಾ ಬ್ಯಾಟಲ್
  • ದತ್ತು ಪುತ್ರ ಕೊಹ್ಲಿ, ಮನೆ ಮಗ ರಾಹುಲ್​ ಅಟ್ರಾಕ್ಷನ್

ಬೆಂಗಳೂರಿನಲ್ಲಿ ಇವತ್ತು ಬಿಸಿಲಿನ ತಾಪಕ್ಕಿಂತ ಕ್ರಿಕೆಟ್​​​ನ​ ಫೀವರ್​​ ಜಾಸ್ತಿ ಇರುತ್ತೆ. ಇವತ್ತು ಸಿಲಿಕಾನ್ ಸಿಟಿಯಲ್ಲಿ ಆರ್​ಸಿಬಿ, ಡೆಲ್ಲಿ ಬ್ಯಾಟಲ್ ನಡೀತಿದೆ. ಸೋಲಿಲ್ಲದ ಸರದಾರ ಡೆಲ್ಲಿ vs ಹೋಮ್​​ಗ್ರೌಂಡ್​​ನಲ್ಲಿ ಗೆಲುವಿನ ಹುಡುಕಾಟದಲ್ಲಿರೋ ಆರ್​ಸಿಬಿ ನಡುವಿನ ಕಾಳಗ ಹಲವು ಕಾರಣಗಳಿಂದ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿದೆ.

Advertisment

ದತ್ತು ಪುತ್ರ vs ಮನೆ ಮಗ..!

ಬೆಂಗಳೂರಿನ ದತ್ತು ಪುತ್ರ ವಿರಾಟ್ ಕೊಹ್ಲಿ ಹಾಗೂ ಮನೆ ಮಗ ಕೆ.ಎಲ್.ರಾಹುಲ್ ಇಂದಿನ ಕದನದ ಸೆಂಟರ್ ಆಫ್ ಅಟ್ರಾಕ್ಷನ್. ದೆಹಲಿ ಮೂಲದ ವಿರಾಟ್, ಆರ್​ಸಿಬಿಯ ತಂಡದ ಮೇನ್ ಫಿಲ್ಲರ್​ ಆಗಿದ್ರೆ ಕರ್ನಾಟಕದ ಹೆಮ್ಮೆ ಕೆ.ಎಲ್.ರಾಹುಲ್ ಡೆಲ್ಲಿಯ ಬೆನ್ನೆಲುಬಾಗಿದ್ದಾರೆ. ಸಾಲಿಡ್ ಟಚ್​ನಲ್ಲಿರುವ ಸ್ನೇಹಿತರ ಸವಾಲ್​​​, ಪಂದ್ಯಕ್ಕೆ ಮತ್ತಷ್ಟು ಹೈಪ್ ನೀಡಿದೆ.

ಆರ್​ಸಿಬಿ ವರ್ಸಸ್ ಎಕ್ಸ್​-ಆರ್​ಸಿಬಿಯನ್ಸ್ ಬ್ಯಾಟಲ್

ಕದನ ಜಸ್ಟ್ ಆರ್​ಸಿಬಿ ಹಾಗೂ ಡೆಲ್ಲಿ ಕಾಳಗ ಮಾತ್ರವಲ್ಲ. ಆರ್​ಸಿಬಿ ವರ್ಸಸ್ ಮಾಜಿ ಆರ್​ಸಿಬಿಯನ್ಸ್​​ ನಡುವಿನ ಮಹಾ ಕಾಳಗ. ಕೆ.ಎಲ್.ರಾಹುಲ್, ಫಾಫ್ ಡುಪ್ಲೆಸಿ, ವೇಗಿ ಮಿಚೆಲ್ ಸ್ಟಾರ್ಕ್​ ಇವರೆಲ್ಲರೂ ಆರ್​​ಸಿಬಿಯ ಮಾಜಿ ಪ್ಲೇಯರ್​​ಗಳೇ. ಡೆಲ್ಲಿ ತಂಡದ ಬಲವಾಗಿರೋ ಇವ್ರಿಗೆ, ಚಿನ್ನಸ್ವಾಮಿ ಮೈದಾನದ ಪಿಚ್ ಹಾಗೂ ಇಲ್ಲಿನ ಪ್ಲೇಯಿಂಗ್​ ಕಂಡಿಷನ್ಸ್​​ ಬಗ್ಗೆ ಚೆನ್ನಾಗಿ ಅರಿವಿದೆ. ಈ ತ್ರಿಮೂರ್ತಿಗಳ ಆಟಕ್ಕೆ ಕಡಿವಾಣ ಹಾಕಲು ಚಕ್ರವ್ಯೂಹ ರಚಿಸಬೇಕಿದೆ.

ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗೆಲ್ಲುವ ಫೇವರಿಟ್ ತಂಡ ಯಾವುದು.. ಆರ್​​ಸಿಬಿನಾ, ಡೆಲ್ಲಿನಾ?

Advertisment

publive-image

ತವರಲ್ಲಿ ಗೆಲ್ಲೋ ತವಕ..!

ಟೂರ್ನಿಯಲ್ಲಿ ಆರ್​ಸಿಬಿ ಸಾಲಿಡ್ ಸ್ಟಾರ್ಟ್ ಸಿಕ್ಕಿದೆ ನಿಜ. 4ರ ಪೈಕಿ ಮೂರರಲ್ಲಿ ಗೆದ್ದಿರುವ ಆರ್​ಸಿಬಿ, ತವರಿನಲ್ಲಿ ಮುಖಭಂಗ ಅನುಭವಿಸಿದೆ. ಇಂದು ಹೋಮ್​​ಗ್ರೌಂಡ್​ನಲ್ಲಿ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿದೆ. ಆರ್​ಸಿಬಿ ಗೆಲ್ಲಬೇಕಾದ್ರೆ ಕಳೆದ ಎರಡು ಪಂದ್ಯಗಳಿಂದ ವೈಫಲ್ಯ ಅನುಭವಿಸ್ತಿರುವ ಫಿಲ್ ಸಾಲ್ಟ್​, ಪವರ್​ ಪ್ಲೇನಲ್ಲೇ ಪವರ್ ತೋರಿಸಬೇಕಿದೆ.

ಚಿನ್ನಸ್ವಾಮಿಯಲ್ಲೂ ಬೇಕಿದೆ ಭರ್ಜರಿ ಬ್ಯಾಟಿಂಗ್

ಬೆಂಗಳೂರಿನಲ್ಲಿ ಆರ್​ಸಿಬಿ ಗೆಲ್ಲಬೇಕಾದ್ರೆ ವಾಂಖೆಡೆಯಲ್ಲಿ ಮುಂಬೈ ವಿರುದ್ಧ ಗೆಲುವಿಗೆ ಪಠಿಸಿದ್ದ ಮಂತ್ರವನ್ನೇ ಆರ್​ಸಿಬಿ ಜಪಿಸಬೇಕಿದೆ. ಮುಂಬೈ ಎದುರು ಹೇಗೆ ಸಂಘಟಿತ ಆಟವಾಡಿತ್ತೋ ಅದೇ ರೀತಿ ಹೋರಾಡಬೇಕಿದೆ. ಮುಖ್ಯವಾಗಿ ಬೌಲರ್​ಗಳಿಗೆ ಹೆಚ್ಚು ಸಹಾಯ ಸಿಗದ ಚಿನ್ನಸ್ವಾಮಿ ಗ್ರೌಂಡ್​ನಲ್ಲಿ ಬ್ಯಾಟರ್​ಗಳು ಅಬ್ಬರಿಸಬೇಕಿದೆ. ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಜಿತೇಶ್ ಶರ್ಮಾ ಅದೇ ಆಟ ಮುಂದುವರೆಸಬೇಕು. ಇವ್ರ ಜೊತೆ ಲಿಯಾಮ್​​ ಲಿವಿಂಗ್ ಸ್ಟೋನ್ ಕೂಡ ಸಿಡಿಯಬೇಕಿದೆ.

ಇದನ್ನೂ ಓದಿ: ಬೆಂಗಳೂರಲ್ಲೇ ಇವತ್ತು ಐಪಿಎಲ್ ಮ್ಯಾಚ್.. ಆರ್​ಸಿಬಿ ತಂಡದಲ್ಲಿ ಸಣ್ಣ ಬದಲಾವಣೆ ನಿರೀಕ್ಷೆ..!

Advertisment

publive-image

ಬೌಲಿಂಗ್​ಗೆ ವಿಭಾಗದಲ್ಲಿ ಜೋಶ್ ಹೇಜಲ್​ವುಡ್​ಗೆ ಭುವನೇಶ್ವರ್ ಕುಮಾರ್, ಯಶ್ ದಯಾಳ್ ಉತ್ತಮ ಸಾಥ್ ನೀಡಬೇಕಿದೆ. ಮಾರಕ ಬೌಲಿಂಗ್ ಮೂಲಕ ಎದುರಾಳಿ ಪಡೆಯನ್ನು ಕಟ್ಟಿ ಹಾಕಬೇಕಿದೆ. ಸ್ಪಿನ್ನರ್​ಗಳಾದ ಸುಯಶ್ ಶರ್ಮಾ, ಕೃನಾಲ್ ಪಾಂಡ್ಯರ ರೋಲ್ ಕೂಡ ಮೋಸ್ಟ್ ಕ್ರೂಶಿಯಲ್​ ಆಗಿರಲಿದೆ. ಮಿಡಲ್ ಓವರ್​ಗಳಲ್ಲಿ ರನ್​ಗೆ ಕಡಿವಾಣ ಹಾಕಿ ವಿಕೆಟ್ ಬೇಟೆಯಾಡಬೇಕಿದೆ.

ಡೆಲ್ಲಿ ತಂಡಕ್ಕೆ ಜೇಕ್ ಫ್ರೇಸರ್ ಮೆಕ್‌ಗುರ್ಕ್, ಅಭಿಷೇಕ್ ಪೊರೆಲ್​​​, ಟ್ರಿಸ್ಟನ್ ಸ್ಟಬ್​, ಅಶುತೋಷ್ ಶರ್ಮಾರಂಥ ಪವರ್​ ಹಿಟ್ಟರ್​ಗಳ ಬಲವಿದೆ. ಬೌಲಿಂಗ್​ನಲ್ಲಿ ಚೈನಾಮನ್ ಕುಲ್​ದೀಪ್ ಮುಕೇಶ್ ಕುಮಾರ್, ಮೋಹಿತ್ ಶರ್ಮಾರಂಥ ಚಾಣಾಕ್ಷ ಬೌಲರ್​ಗಳಿದ್ದಾರೆ. ಹೀಗಾಗಿ ಡೆಲ್ಲಿಗೆ ಡಿಚ್ಚಿ ನೀಡಬೇಕಾದ್ರೆ ಆರ್​ಸಿಬಿ ಸ್ಪೆಷಲ್​ ಪ್ಲಾನ್​​​​​​​ ರೂಪಿಸಿಯೇ ಕಣಕ್ಕಿಳಿಯಬೇಕಿದೆ.

ಇದನ್ನೂ ಓದಿ: ರಾಜಸ್ಥಾನ್ ರಾಯಲ್ಸ್​ಗೆ ಮಾಸ್ಟರ್​ ಸ್ಟ್ರೋಕ್ ಕೊಟ್ಟಿದ್ದೇ ಕನ್ನಡಿಗ.. ಮತ್ತೆ ಪ್ರಸಿದ್ಧ್ ಕೃಷ್ಣ ಶೈನ್..!

Advertisment

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment