IPL ಬೌಲರ್ಸ್​ಗೆ ಗುಡ್​ನ್ಯೂಸ್.. ಬಾಲ್​​ಗೆ ಎಂಜಲು ಹಚ್ಚಲು ಬಿಸಿಸಿಐ ಅನುಮತಿ..!

author-image
Ganesh
Updated On
IPL ಬೌಲರ್ಸ್​ಗೆ ಗುಡ್​ನ್ಯೂಸ್.. ಬಾಲ್​​ಗೆ ಎಂಜಲು ಹಚ್ಚಲು ಬಿಸಿಸಿಐ ಅನುಮತಿ..!
Advertisment
  • ನಾಳೆಯಿಂದ ಐಪಿಎಲ್-2025 ಆರಂಭ ಆಗಲಿದೆ
  • ಮೊದಲ ಪಂದ್ಯದಲ್ಲಿ ಆರ್​ಸಿಬಿ vs ಕೆಕೆಆರ್ ಸೆಣಸಾಟ
  • ಬಾಲ್​ಗೆ ಎಂಜಲು ಹಚ್ಚುವುದರಿಂದ ಏನು ಲಾಭ..?

ನಾಳೆಯಿಂದ ಆರಂಭವಾಗುವ ಐಪಿಎಲ್​-2025 ಪಂದ್ಯಗಳಲ್ಲಿ ಒಂದಷ್ಟು ಹೊಸ ರೂಲ್ಸ್​​ ಜಾರಿ ಆಗುತ್ತಿವೆ. ಅದರಲ್ಲಿ ಪ್ರಮುಖವಾಗಿ ಆಟಗಾರರು ಚೆಂಡಿಗೆ ಎಂಜಲು ಬಳಸಲು ಬಿಸಿಸಿಐ ಅನುಮತಿ ನೀಡಿದೆ.

ಗುರುವಾರ ಬಿಸಿಸಿಐ ಕೇಂದ್ರ ಕಚೇರಿಯಲ್ಲಿ ಐಪಿಎಲ್ ನಾಯಕರ ಸಭೆ ನಡೆಯಿತು. ಈ ಸಭೆಯಲ್ಲಿ ಬಿಸಿಸಿಐ ಎಂಜಲು ಬಳಸುವ ವಿಷಯ ಪ್ರಸ್ತಾಪಿಸಿತು. ಇದಕ್ಕೆ ಬಹುತೇಕ ನಾಯಕರು ಸಮ್ಮತಿಸಿದ ಕಾರಣ. ಎಂಜಲು ಬಳಕೆ ಅನುಮತಿ ನೀಡಲಾಗಿದೆ.

ಏನು ಪ್ರಯೋಜನ..

2020ರಲ್ಲಿ ಕೋವಿಡ್‌ನಿಂದಾಗಿ ಚೆಂಡಿಗೆ ಎಂಜಲು ಹಾಕುವುದನ್ನು ಐಸಿಸಿ ನಿಷೇಧಗೊಳಿಸಿತ್ತು. ಇದರಿಂದಾಗಿ ಚೆಂಡಿನ ಹೊಳಪು ಕಾಪಾಡಿಕೊಳ್ಳಲು ಕಷ್ಟವಾಗುತ್ತಿತ್ತು. ಚೆಂಡು ಒಂದು ಬದಿಯ ಹೊಳಪು ಕಾಪಾಡುವ ಮೂಲಕ ಚೆಂಡನ್ನು ಸ್ವಿಂಗ್ ಮಾಡಲು ಅನುಕೂಲವಾಗಲಿದೆ. ನಾಳೆಯಿಂದ ಐಪಿಎಲ್-2025 ಆರಂಭ ಆಗುತ್ತಿದೆ. ಮೊದಲ ಪಂದ್ಯದಲ್ಲಿ ಆರ್​ಸಿಬಿ ಮತ್ತು ಕೆಕೆಆರ್ ತಂಡುಗಳು ಸೆಣಸಾಟ ನಡೆಸುತ್ತಿವೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment