/newsfirstlive-kannada/media/post_attachments/wp-content/uploads/2025/03/RISHABH_PANT-3.jpg)
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್- 18 ಆರಂಭಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ. ಈ ಬಾರಿ ಐಪಿಎಲ್ ಟೂರ್ನಿ ಡೇರ್ಡೆವಿಲ್ ಬ್ಯಾಟ್ಸ್ಮನ್ ರಿಷಭ್ ಪಂತ್ ಪಾಲಿಗೆ ಅಗ್ನಿ ಪರೀಕ್ಷೆ ಕಣವಾಗಿದೆ. ಸೀಸನ್- 18ರಲ್ಲಿ ಲಕ್ನೋ ನಾಯಕ ನೀಡುವ ಪರ್ಫಾಮೆನ್ಸ್ ಪಂತ್ ಭವಿಷ್ಯವನ್ನ ನಿರ್ಧರಿಸಲಿದೆ. ಫ್ಲಾಪ್ ಆದ್ರೆ ಟೀಮ್ ಇಂಡಿಯಾ ಡೋರ್ ಕ್ಲೋಸ್ ಆಗಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 18ರ ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ. ಮಾರ್ಚ್ 22ರಿಂದ ಆರಂಭವಾಗೋ ಕಲರ್ಫುಲ್ ಟೂರ್ನಿಯ ಫೀವರ್ ಕ್ರಿಕೆಟ್ ಲೋಕವನ್ನ ಆವರಿಸ್ತಿದೆ. ಭರ್ಜರಿ ಎಂಟರ್ಟೈನ್ಮೆಂಟ್ನ ಎದುರು ನೋಡ್ತಿರೋ ಫ್ಯಾನ್ಸ್ ಟೂರ್ನಿಗಾಗಿ ಕುತೂಹಲದಿಂದ ಕಾಯ್ತಿದ್ದಾರೆ.
ಅಭಿಮಾನಿಗಳ ಪಾಲಿಗೆ ಈ ಬಾರಿಯ ಐಪಿಎಲ್ ಟೂರ್ನಿ ಮನರಂಜನೆಯ ಬಾಡೂಟದ ವೇದಿಕೆಯಾಗಿದೆ. ಆದ್ರೆ, ಲಕ್ನೋ ಸೂಪರ್ ಜೈಂಟ್ಸ್ ಕ್ಯಾಪ್ಟನ್ ರಿಷಭ್ ಪಂತ್ ಪಾಲಿಗೆ ಈ ಐಪಿಎಲ್ ಅಗ್ನಿಪರೀಕ್ಷೆಯ ಕಣವಾಗಿದೆ. ಈ ಸೀಸನ್ನ ಪರ್ಫಾಮೆನ್ಸ್ ಪಂತ್ ಹಣೆಬರಹವನ್ನ ಬದಲಾಯಿಸಲಿದೆ.
IPL ಅಖಾಡದಲ್ಲಿ ರಿಷಭ್ ಪಂತ್ಗೆ ಅಗ್ನಿಪರೀಕ್ಷೆ.!
ಈ ಸೀಸನ್ನ ಐಪಿಎಲ್ ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಪಾಲಿಗೆ ಅಗ್ನಿಪರೀಕ್ಷೆಯ ಕಣ. ಈ ಸೀಸನ್ ಐಪಿಎಲ್ನಲ್ಲಿ ಡೇರ್ಡೆವಿಲ್ ರಿಷಭ್ ಪಂತ್ ಧೂಳೆಬ್ಬಿಸಲೇ ಬೇಕಿದೆ. ಅಬ್ಬರದ ಆಟವಾಡಿ ಪಂತ್, ಸಾಮರ್ಥ್ಯವನ್ನ ಮತ್ತೊಮ್ಮೆ ನಿರೂಪಿಸಬೇಕಿದೆ. ಬ್ಯಾಟ್ ಹಿಡಿದು ಘರ್ಜಿಸದಿದ್ರೆ ರಿಷಭ್ ಪಂತ್, ವೈಟ್ ಬಾಲ್ ಕರಿಯರ್ ಸಂಕಷ್ಟಕ್ಕೆ ಸಿಲುಕಲಿದೆ.
ಕಮ್ಬ್ಯಾಕ್ ಬಳಿಕ T20ಯಲ್ಲಿ ಪಂತ್ ಪವರ್ಲೆಸ್.!
ಆ್ಯಕ್ಸಿಡೆಂಟ್ಗೆ ತುತ್ತಾಗಿ ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ಪಂತ್ ಕ್ರಿಕೆಟ್ ಅಂಗಳಕ್ಕೆ ಮರಳಿದ್ದರು. ಕಳೆದ ಐಪಿಎಲ್ ವೇಳೆ ಫೀಲ್ಡ್ಗೆ ಕಮ್ಬ್ಯಾಕ್ ಮಾಡಿದ ಪಂತ್ ಬ್ಯಾಟಿಂಗ್ನಲ್ಲಿ ಹಳೆದ ಖದರ್ ಮಾಯವಾಗಿದೆ. IPLನಲ್ಲಿ ಒಕೆ ಒಕೆ ಪರ್ಫಾಮೆನ್ಸ್ ನೀಡಿದ ರಿಷಭ್ ಪಂತ್, ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ ಸಾಧಾರಣ ಆಟವಾಡ್ತಿದ್ದಾರೆ.
ಕಮ್ಬ್ಯಾಕ್ ಬಳಿಕ T20Iನಲ್ಲಿ ಪಂತ್
ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡಿದ ಬಳಿಕ ಟಿ20 ಫಾರ್ಮೆಟ್ನಲ್ಲಿ 10 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ರಿಷಭ್ ಪಂತ್ 22 ರನ್ಗಳಿಸಿದ್ದಾರೆ. ಕೇವಲ 27.75ರ ಸರಾಸರಿ ಹೊಂದಿರೋ ಪಂತ್, 131ರ ಸ್ಟ್ರೈಕ್ರೇಟ್ ಹೊಂದಿದ್ದಾರೆ.
ಏಕದಿನದಲ್ಲಿ ಬೆಂಚ್.. T20ಯಲ್ಲಿ ಸ್ಥಾನಕ್ಕೂ ಕುತ್ತು.!
ಸದ್ಯ ಟೀಮ್ ಇಂಡಿಯಾದ ಏಕದಿನ ತಂಡದಲ್ಲಿ ಪಂತ್ ಬೆಂಚ್ಗೆ ಸೀಮಿತವಾಗಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕೆ.ಎಲ್ ರಾಹುಲ್ ಸ್ಥಾನವನ್ನ ಕಬ್ಜಾ ಮಾಡಿದ್ದಾರೆ. ಇದೀಗ ಪಂತ್ ಟಿ20 ಸ್ಥಾನಕ್ಕೂ ಕುತ್ತು ಬಂದಿದೆ. ಪಂತ್ ಡಲ್ ಪರ್ಫಾಮೆನ್ಸ್ ನೀಡ್ತಾ ಇದ್ರೆ, ಉಳಿದ ಆಟಗಾರರು ಜಬರ್ದಸ್ತ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಎಸ್ಪೆಷಲಿ ಸಂಜು ಸ್ಯಾಮ್ಸನ್ ಸ್ಪೋಟಕ ಆಟವಾಡ್ತಿದ್ದು, ರಿಷಭ್ ಪಂತ್ ಜಾಗಕ್ಕೆ ಕುತ್ತು ತಂದಿದ್ದಾರೆ. ಇನ್ನೊರ್ವ ಯುವ ವಿಕೆಟ್ ಕೀಪರ್ ಇಶಾನ್ ಕಿಶನ್ ಏನಾದ್ರೂ ಈ ಐಪಿಎಲ್ನಲ್ಲಿ ಸಿಡಿದೆದ್ರೆ, ಪಂತ್ಗೆ ಸಂಕಷ್ಟ ತಪ್ಪಿದ್ದಲ್ಲ.
ಬರೋಬ್ಬರಿ 27 ಕೋಟಿಗೆ ಒದಗಿಸಬೇಕಿದೆ ನ್ಯಾಯ.!
ರಿಷಭ್ ಪಂತ್.. ಐಪಿಎಲ್ ಇತಿಹಾಸದ ಮೋಸ್ಟ್ ಎಕ್ಸ್ಪೆನ್ಸಿವ್ ಪ್ಲೇಯರ್. ಒಂದಲ್ಲ, ಎರಡಲ್ಲ.. ಬರೋಬ್ಬರಿ 27 ಕೋಟಿ ರೂಪಾಯಿ ನೀಡಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಈ ಬಾರಿ ಆಕ್ಷನ್ನಲ್ಲಿ ಖರೀದಿಸಿದೆ. ತನ್ನ ಆಟದ ಮೂಲಕ ಭವಿಷ್ಯವನ್ನ ಭದ್ರಪಡಿಸಿಕೊಳ್ಳೋದು ಮಾತ್ರವಲ್ಲ. ದುಬಾರಿ ಪ್ಲೇಯರ್ ಪಂತ್, ತೆಗೆದುಕೊಂಡಿರೋ ದುಬಾರಿ ಮೊತ್ತಕ್ಕೂ ಆನ್ಫೀಲ್ಡ್ನಲ್ಲಿ ನ್ಯಾಯ ಒದಗಿಸಬೇಕಿದೆ.
ಇದನ್ನೂ ಓದಿ: ನ್ಯೂ RCB ಟೀಮ್ ಹೇಗಿದೆ.. ಬಲಿಷ್ಠ ತಂಡದ ಸ್ಟ್ರೆಂಥ್- ವೀಕ್ನೆಸ್ ಏನೇನು ಇವೆ?
ಹೇಳಿ ಕೇಳಿ.. ಲಕ್ನೋ ಸೂಪರ್ ಜೈಂಟ್ಸ್ ಮಾಲೀಕ ಸಂಜೀವ್ ಗೊಯೆಂಕಾ ಪಕ್ಕಾ ಬ್ಯುಸಿನೆಸ್ಮನ್. ದುಡ್ಡು ಕೊಡ್ತಿನಿ, ಪರ್ಫಾಮ್ ಮಾಡಿ ಅನ್ನೋ ಲೆಕ್ಕಾಚಾರ ಗೋತೆಂಕಾದ್ದು. ಲೆಜೆಂಡರಿ ಕ್ಯಾಪ್ಟನ್ ಎಮ್.ಎಸ್ ಧೋನಿಯನ್ನೇ ನಾಯಕತ್ವದಿಂದ ಕೆಳಗಿಳಿಸಿ ಅವಮಾನಿಸಿದ್ದ ಗೋಯೆಂಕಾ, ಕನ್ನಡಿಗ ಕೆ.ಎಲ್ ರಾಹುಲ್ ವಿಚಾರದಲ್ಲೂ ಇದೇ ರೀತಿ ನಡೆದುಕೊಂಡಿದ್ದ ಇತಿಹಾಸ ಹೊಂದಿದ್ದಾರೆ. ಇಂತಾ ಗೋಯೆಂಕಾ ಪಂತ್ ಪರ್ಫಾಮ್ ಮಾಡ್ಲಿಲ್ಲ ಅಂದ್ರೆ ಬಿಡ್ತಾರಾ?.
ಈ ಬಾರಿಯ ಐಪಿಎಲ್ ಟೂರ್ನಿ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಪಾಲಿಗೆ ಡು ಆರ್ ಡೈ ವೇದಿಕೆಯಾಗಿದೆ. ಪರ್ಫಾಮ್ ಮಾಡಿ ಶೈನ್ ಆದ್ರೆ ಒಕೆ. ಇಲ್ಲದಿದ್ರೆ, ಕರಿಯರ್ ಸಂಕಷ್ಟಕ್ಕೆ ಸಿಲುಕೋ ಸಾಧ್ಯತೆ ದಟ್ಟವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ