ಆಪರೇಷನ್ ಸಿಂಧೂರ.. ಸಂಕಷ್ಟಕ್ಕೆ ಸಿಲುಕಿದ ಮುಂಬೈ ಇಂಡಿಯನ್ಸ್? ಐಪಿಎಲ್‌ಗೂ ಯುದ್ಧದ ಬಿಸಿ ತಟ್ಟುತ್ತಾ?

author-image
Veena Gangani
Updated On
IPL 2025: ಮೆಗಾ ಹರಾಜಿಗೆ ಮುನ್ನವೇ ಮುಂಬೈ ಇಂಡಿಯನ್ಸ್​ ರೀಟೈನ್​ ಲಿಸ್ಟ್​ ಔಟ್​​; ಯಾರಿಗೆ ಚಾನ್ಸ್​​?
Advertisment
  • ಸರ್ಕಾರದ ಮುಂದಿನ ಸೂಚನೆ ಬರುವವರೆಗೆ ವಿಮಾನ ಹಾರಾಟ ಸ್ಥಗಿತ
  • ಡೆಲ್ಲಿ ಕ್ಯಾಪಿಟಲ್ಸ್ vs ಪಂಜಾಬ್ ಕಿಂಗ್ಸ್ ಪಂದ್ಯ ಮುಂದುವರೆಯುತ್ತಾ?
  • ಮೇ 11ರಂದು ದೆಹಲಿ ಕ್ಯಾಪಿಟಲ್ಸ್ VS ಪಂಜಾಬ್ ಕಿಂಗ್ಸ್ ನಡುವೆ ಮ್ಯಾಚ್

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ ಭಾರತೀಯ ಸೇನೆ ದಿಟ್ಟ ಹೆಜ್ಜೆಯಿಟ್ಟಿದೆ. ಏಪ್ರಿಲ್ 22ರಂದು ಪಾಕ್ ಬೆಂಬಲಿತ ಉಗ್ರರು ಕಾಶ್ಮೀರದ ಪಹಲ್ಗಾಮ್​​ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಪೈಶಾಚಿಕ ಕೃತ್ಯ ನಡೆಸಿದ್ದರು. ಈ ಬೆನ್ನಲ್ಲೇ ಭಯೋತ್ಪಾದಕರನ್ನು ಮಟ್ಟಹಾಕಲು ಭಾರತೀಯ ಸೇನೆಯ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಕೈಗೊಂಡ ಬೆನ್ನಲ್ಲೇ ಪಾಕಿಸ್ತಾನದ ಮೇಲೆ ಭಾರತ ಸೇನೆ ದಾಳಿ ನಡೆಸಿದೆ.

ಇದನ್ನೂ ಓದಿ: ಹಫೀಜ್ ಅಡಗುತಾಣ ಉಡಾಯಿಸಿದ ರಫೇಲ್.. ಪಾಕ್ ಮೇಲೆ ಭಾರತ ಪ್ರಯೋಗಿಸಿದ ಅಸ್ತ್ರಗಳು ಯಾವ್ಯಾವುದು?

publive-image

ಇನ್ನು, ಮುಂಜಾಗ್ರತಾ ಕ್ರಮವಾಗಿ ವಿಮಾನ ಹಾರಾಟವನ್ನು ಬಿಗಿ ಭದ್ರತೆಯ ನಡುವೆ  ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಮುಖ್ಯವಾಗಿ ಧರ್ಮಶಾಲಾ, ಚಂಡೀಗಢ, ಲೇಹ್, ಜಮ್ಮು, ಶ್ರೀನಗರ ಮತ್ತು ಅಮೃತಸರ ಸೇರಿದಂತೆ ವಾಯುವ್ಯ ಭಾರತದ ಹಲವಾರು ವಿಮಾನ ನಿಲ್ದಾಣಗಳಲ್ಲಿ ವಿಮಾನ ಕಾರ್ಯಾಚರಣೆಯನ್ನು ಮುಂದಿನ ಸೂಚನೆ ಬರುವವರೆಗೆ ಸ್ಥಗಿತಗೊಳಿಸಲಾಗಿದೆ.

publive-image

ಆದ್ರೆ ಇದರ ಮಧ್ಯೆ ಮೇ 11ರಂದು ದೆಹಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯವು ನಿಗದಿಯಂತೆ ನಡೆಯಲಿದೆ. ಐಪಿಎಲ್ ಪಂದ್ಯಾವಳಿಯು ನಿಗದಿಯಂತೆ ಮುಂದುವರಿಯುತ್ತದೆ ಎಂದು ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸದ್ಯ ಮಾಹಿತಿ ಪ್ರಕಾರ ಐಪಿಎಲ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಬಗ್ಗೆ ಬಿಸಿಸಿಐ ಆಗಲಿ ಅಥವಾ ಐಪಿಎಲ್ ಆಡಳಿತ ಮಂಡಳಿಯಾಗಲಿ ಇನ್ನೂ ಘೋಷಿಸಿಲ್ಲ. ಒಂದು ವೇಳೆ ಭಾರತ ಹಾಗೂ ಪಾಕಿಸ್ತಾನ ನಡುವೆ ಪೂರ್ಣ ಪ್ರಮಾಣದ ಯುದ್ದ ಘೋಷಣೆಯಾದರೇ, 18ನೇ ಆವೃತ್ತಿಯ ಐಪಿಎಲ್ ಟುರ್ನಿ ತಾತ್ಕಾಲಿಕವಾಗಿ ಮುಂದೂಡಬಹುದು.

publive-image

ಈಗ 18ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯು ಭಾರತದಲ್ಲಿ ಭರ್ಜರಿಯಾಗಿ ಸಾಗುತ್ತಿದೆ. ಈಗಾಗಲೇ ಟೂರ್ನಿಯು ನಿರ್ಣಾಯಕ ಘಟ್ಟದತ್ತ ಸಾಗುತ್ತಿದೆ. ಸದ್ಯ ಟೂರ್ನಿಯಲ್ಲಿ 56 ಪಂದ್ಯಗಳು ಮುಕ್ತಾಯವಾಗಿದ್ದು, ಇನ್ನು, ಕೇವಲ 18 ಪಂದ್ಯಗಳು ನಡೆಯುವುದು ಮಾತ್ರ ಬಾಕಿ ಉಳಿದಿದೆ. ಮೇ 25ರಂದು ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಫೈನಲ್ ಪಂದ್ಯ ನಿಗದಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment