/newsfirstlive-kannada/media/post_attachments/wp-content/uploads/2024/12/Phil-Salt-RCB.jpg)
2025ರ ಇಂಡಿಯನ್ ಪ್ರೀಮಿಯರ್ ಲೀಗ್ ನಾಳೆಯಿಂದ ಶುರುವಾಗಲಿದೆ. ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಆಟಗಾರರನ್ನೇ ಖರೀದಿ ಮಾಡುವ ಮೂಲಕ ಬಲಿಷ್ಠ ತಂಡವನ್ನು ಕಟ್ಟಿದೆ. ಅದರಲ್ಲೂ ಇಂಗ್ಲೆಂಡ್ ತಂಡದ ಸ್ಫೋಟಕ ಬ್ಯಾಟರ್ ಫಿಲ್ ಸಾಲ್ಟ್ ಅವರನ್ನು ಖರೀದಿ ಮಾಡುವಲ್ಲಿ ಆರ್‌ಸಿಬಿ ಯಶಸ್ವಿಯಾಗಿದೆ. ಇವರಿಗೆ ಬರೋಬ್ಬರಿ 11.50 ಕೋಟಿ ನೀಡಿ ಆರ್‌ಸಿಬಿ ತಂಡಕ್ಕೆ ಬರಮಾಡಿಕೊಂಡಿತು.
ಆರ್‌ಸಿಬಿ ತಂಡದಲ್ಲಿ ಹೊಸ ಜವಾಬ್ದಾರಿ
ಇನ್ನು, ಆರ್‌ಸಿಬಿ ವಿದೇಶಿ ಆರಂಭಿಕ ಆಟಗಾರನ ಹುಡುಕಾಟ ನಡೆಸಿತ್ತು. ನಮಗೆ ಉತ್ತಮ ಸ್ಟ್ರೈಕ್ ರೇಟ್ನೊಂದಿಗೆ ದೊಡ್ಡ ಇನಿಂಗ್ಸ್ ಕಟ್ಟುವ ಸ್ಟಾರ್ ಆಟಗಾರರ ಬೇಕಿತ್ತು. ಈ ರೀತಿಯ ಸ್ಫೋಟಕ ಇನಿಂಗ್ಸ್ಗೆ ಹೆಸರು ವಾಸಿ ಫಿಲ್ ಸಾಲ್ಟ್. ಭಾರತದ ಪರ ಇಶಾನ್ ಕಿಶನ್ ಬಿಗ್ ಸ್ಕೋರ್ ಕಲೆ ಹಾಕಬಲ್ಲ ಪ್ಲೇಯರ್. ಆದರೆ ನಮ್ಮ ತಂಡ ಆರಂಭಿಕರಾಗಿ ವಿದೇಶಿ ಆಟಗಾರರನ್ನು ಮನಸ್ಸಿನಲ್ಲಿ ಇಟ್ಟುಕೊಂಡಿತ್ತು. ಹಾಗಾಗಿ ಇವರನ್ನು ಖರೀದಿ ಮಾಡಿದೆವು ಎಂದು ಆರ್‌ಸಿಬಿ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ದಿನೇಶ್ ಕಾರ್ತಿಕ್.
ಆರ್‌ಸಿಬಿ ಸ್ಟ್ರಾಟಜಿ ಹೇಗಿತ್ತು?
28 ವರ್ಷದ ಇಂಗ್ಲೆಂಡ್ ತಂಡದ ಸ್ಫೋಟಕ ಆಟಗಾರ ಫಿಲ್ ಸಾಲ್ಟ್ ತಮ್ಮ ಬಿರುಸಿನ ಬ್ಯಾಟಿಂಗ್‌ನಿಂದಲೇ ಹೆಸರು ವಾಸಿ. ಇವರು ಇಂಗ್ಲೆಂಡ್ ತಂಡದ ಪರ 38 ಟಿ20 ಪಂದ್ಯಗಳಲ್ಲಿ 165.32 ಸ್ಟ್ರೈಕ್ ರೇಟ್‌ನಲ್ಲಿ 1106 ರನ್ ಸಿಡಿಸಿದ್ದಾರೆ. ಅದರಲ್ಲೂ ಇವರ ಟ್ರ್ಯಾಕ್ ರೆಕಾರ್ಡ್ ನೋಡಿ ಆರ್‌ಸಿಬಿ ಖರೀದಿ ಮಾಡಿದೆ.
ಸಾಲ್ಟ್ ತನ್ನ ಕರಿಯರ್ನಲ್ಲೇ ಶೇ. 28ರಷ್ಟು ಸಮಯ ಒಂದು ಓವರ್ನಲ್ಲಿ 6-8 ರನ್ ಗಳಿಸುತ್ತಾರೆ. ಶೇ. 30ರಷ್ಟು ಸಮಯ 1 ಓವರ್ನಲ್ಲಿ 12-15 ರನ್ ಕಲೆ ಹಾಕುತ್ತಾರೆ. 4 ಓವರ್ಗಳ ಪೈಕಿ 1ರಲ್ಲಿ 16ಕ್ಕೂ ಹೆಚ್ಚು ರನ್ ಸಿಡಿಸುತ್ತಾರೆ. ಆವರೇಜ್ 2 ಓವರ್ಗೆ ಒಮ್ಮೆ 12 ರನ್ ಬಾರಿಸೋ ಸಾಮರ್ಥ್ಯ ಇದೆ.
ಫಿಲ್ ಸಾಲ್ಟ್ ಐಪಿಎಲ್ ಸಾಧನೆ ಹೇಗಿದೆ?
ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್-ಬ್ಯಾಟರ್ ಫಿಲಿಪ್ ಸಾಲ್ಟ್. ಇವರು ಸ್ಫೋಟಕ ಬ್ಯಾಟಿಂಗ್‌ನಿಂದಲೇ ಹೆಸರು ಮಾಡಿದವರು. 2024ರ ಐಪಿಎಲ್ನಲ್ಲಿ ಕೆಕೆಆರ್ ತಂಡದ ಪರ ಫಿಲ್ ಸಾಲ್ಟ್ ಆರಂಭಿಕ ಬ್ಯಾಟರ್ ಆಗಿ ಬಿಗ್ ಇನ್ನಿಂಗ್ಸ್ ಆಡಿದ್ದರು. ಕೆಕೆಆರ್ ಫೈನಲ್ ತಲುಪಲು ನೆರವಾಗಿದ್ದರು. ಇದುವರೆಗೂ ತಾನು ಆಡಿರೋ 21 ಐಪಿಎಲ್ ಪಂದ್ಯಗಳಲ್ಲಿ 653 ರನ್ ಬಾರಿಸಿದ್ದಾರೆ. ಇದರಲ್ಲಿ 6 ಅರ್ಧಶತಕಗಳು ಸೇರಿವೆ.
ಇವರ ಟ್ರ್ಯಾಕ್ ರೆಕಾರ್ಡ್ ನೋಡಿ ಆರ್‌ಸಿಬಿ ಬೆಚ್ಚಿಬಿದ್ದಿತ್ತು. ಪ್ಲಾನ್ ಪ್ರಕಾರ ಇವರೇ ಆರ್‌ಸಿಬಿ ತಂಡದ ಓಪನಿಂಗ್ ಸ್ಲಾಟ್ಗೆ ಬೇಕು ಎಂದು ಖರೀದಿ ಮಾಡಲಾಗಿದೆ. ಇವರು ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 3 ಶತಕ ಹಾಗೂ 4 ಅರ್ಧಶತಕಗಳನ್ನು ಬಾರಿಸಿದ್ದಾರೆ. ಎಷ್ಟೋ ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿರೋ ಆಟಗಾರ ಸಾಲ್ಟ್.
ಇದನ್ನೂ ಓದಿ:ಮೈಂಡ್ ಚೆನ್ನಾಗಿ ವರ್ಕ್ ಆಗಬೇಕಾ? ನೀವು ಈ ಕೆಲಸ ಮಾಡಿದ್ರೆ ಸಾವು!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ