/newsfirstlive-kannada/media/post_attachments/wp-content/uploads/2025/04/SAI-SUDARSHAN.jpg)
18ನೇ ಐಪಿಎಲ್ನಲ್ಲೂ ಆರೆಂಜ್ ಕ್ಯಾಪ್ಗಾಗಿ ಜಿದ್ದಾಜಿದ್ದಿನ ಪೈಪೋಟಿ ಶುರುವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯದಲ್ಲಿ ಅಮೋಘ ಆಟವನ್ನಾಡಿದ್ದ ಆರ್ಸಿಬಿ ವಿರಾಟ್ ಕೊಹ್ಲಿ, ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು.
ಸೂರ್ಯ ಕುಮಾರ್ ಯಾದವ್ ಬಳಿಯಿದ್ದ ಆರೆಂಜ್ ಕ್ಯಾಪ್ ಅನ್ನು ಕೊಹ್ಲಿ ಪಡೆದಿದ್ದರು. ಅದಕ್ಕೂ ಮೊದಲು ಸೂರ್ಯಕುಮಾರ್ ಯಾದವ್, ಗುಜರಾತ್ನ ಸಾಯಿ ಸುದರ್ಶನ್ ಬಳಿಯಿಂದ ಕಿತ್ತುಕೊಂಡಿದ್ದರು. ಇದೀಗ ಕೊಹ್ಲಿ ಬಳಿಯಿದ್ದ ಆ ಕ್ಯಾಪ್, ಸಾಯಿ ಸುದರ್ಶನ್ ಪಾಲಾಗಿದೆ. ನಿನ್ನೆಯ ಪಂದ್ಯದಲ್ಲಿ ಸಾಯಿ ಸುದರ್ಶನ್ 30 ಬಾಲ್ನಲ್ಲಿ 39 ರನ್ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಅನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ.
ಹೇಗಿದೆ ಪೈಪೋಟಿ..?
- ಸಾಯಿ ಸುದರ್ಶನ್, 456 ರನ್ಸ್
- ವಿರಾಟ್ ಕೊಹ್ಲಿ, 443 ರನ್ಸ್
- ಸೂರ್ಯಕುಮಾರ್ ಯಾದವ್, 427 ರನ್ಸ್
- ಯಶಸ್ವಿ ಜೈಸ್ವಾಲ್, 426 ರನ್ಸ್
- ಜೋಶ್ ಬಟ್ಲರ್, 406 ರನ್ಸ್
- ನಿಕೋಲಸ್ ಪೂರನ್ 404 ರನ್ಸ್
- ಶುಬ್ಮನ್ ಗಿಲ್, 389 ರನ್ಸ್
- ಮಿಚಲ್ ಮಾರ್ಷ್, 378 ರನ್ಸ್
- ಕೆಎಲ್ ರಾಹುಲ್, 364 ರನ್ಸ್
- ಮಾರ್ಕ್ರಮ್, 335 ರನ್ಸ್
ಇದನ್ನೂ ಓದಿ: ಶತಕದ ಹಿಂದಿನ ಗುಟ್ಟು ಬಿಚ್ಚಿಟ್ಟ ವೈಭವ್ ಸೂರ್ಯವಂಶಿ; ಕನಸು ನನಸಾದ ಕ್ಷಣದ ಬಗ್ಗೆ ಹೇಳಿದ್ದೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ