ಆರೆಂಜ್ ಕ್ಯಾಪ್​​ ರೇಸ್​​ನಲ್ಲಿ ವಿರಾಟ್ ಕೊಹ್ಲಿ.. ಹೆಚ್ಚು ರನ್​ ಗಳಿಸಿದ ಆಟಗಾರ ಯಾರು?

author-image
Ganesh
Updated On
ಆರೆಂಜ್ ಕ್ಯಾಪ್​​ ರೇಸ್​​ನಲ್ಲಿ ವಿರಾಟ್ ಕೊಹ್ಲಿ.. ಹೆಚ್ಚು ರನ್​ ಗಳಿಸಿದ ಆಟಗಾರ ಯಾರು?
Advertisment
  • ಆರೆಂಜ್ ಕ್ಯಾಪ್​ ರೇಸ್​​ನಲ್ಲಿ ಯಾವೆಲ್ಲ ಸ್ಟಾರ್ ಇದ್ದಾರೆ?
  • ಈ ಬಾರಿಯ IPLನಲ್ಲಿ ಕೊಹ್ಲಿ ಎಷ್ಟು ರನ್​​ಗಳಿಸಿದ್ದಾರೆ?
  • ಐವರು ಸ್ಟಾರ್​​ಗಳಿಂದ ಪೈಪೋಟಿ, ಆರೆಂಜ್ ಕ್ಯಾಪ್ ಯಾರಿಗೆ?

ಐಪಿಎಲ್​ನಲ್ಲಿ ಆರೆಂಜ್ ಕ್ಯಾಪ್​​ಗೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಗುಜರಾತ್ ಟೈಟಾನ್ಸ್‌ನ ಸಾಯಿ ಸುದರ್ಶನ್ ಮತ್ತೊಮ್ಮೆ ಆರೆಂಜ್ ಕ್ಯಾಪ್‌ ತೊಟ್ಟಿದ್ದಾರೆ. ನಿನ್ನೆ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಅವರು 52 ರನ್‌ಗಳನ್ನು ಬಾರಿಸಿ ಮತ್ತೊಮ್ಮೆ ಆರೆಂಜ್ ಕ್ಯಾಪ್ ತೊಟ್ಟಿದ್ದಾರೆ.

ಇದನ್ನೂ ಓದಿ: ವಿಕೆಟ್​ಗಾಗಿ KKR ಬೌಲರ್​ಗಳ ಪರದಾಟ.. ಇಬ್ಬರು ಓಪನರ್​ಗಳಿಂದ ಭರ್ಜರಿ ಅರ್ಧಶತಕ ​​

ಕೋಲ್ಕತ್ತಾ-ಗುಜರಾತ್ ಪಂದ್ಯಕ್ಕೂ ಮೊದಲು ಸುದರ್ಶನ್ 365 ರನ್ ಗಳಿಸಿದ್ದರು. ಕೆಕೆಆರ್ ವಿರುದ್ಧದ 4 ರನ್ ಗಳಿಸಿದ ಬೆನ್ನಲ್ಲೇ, 18ನೇ ಆವೃತ್ತಿಯ ಐಪಿಎಲ್​​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಪೂರನ್ ದಾಖಲೆಯನ್ನು ಹಿಂದಿಕ್ಕಿದರು. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಸಾಯಿ ಸುದರ್ಶನ್ 36 ಎಸೆತಗಳಲ್ಲಿ 52 ರನ್ ಗಳಿಸಿದರು. ಪ್ರಸಕ್ತ ಋತುವಿನಲ್ಲಿ ಅವರು ಒಟ್ಟು 417 ರನ್​ಗಳಿಸಿದ್ದಾರೆ. ನಿಕೋಲಸ್ ಪೂರನ್ 49 ರನ್​ಗಳ ಹಿನ್ನಡೆ ಅನುಭವಿಸಿದ್ದಾರೆ.

ಯಾರೆಲ್ಲ ರೇಸ್​ನಲ್ಲಿದ್ದಾರೆ..?

  • ಸಾಯಿ ಸುದರ್ಶನ್ (GT) - 417 ರನ್‌ಗಳು
  •  ನಿಕೋಲಸ್ ಪೂರನ್ (LSG) - 368 ರನ್
  •  ಸೂರ್ಯಕುಮಾರ್ ಯಾದವ್ (MI) - 333 ರನ್
  •  ಜೋಸ್ ಬಟ್ಲರ್ (GT) - 327 ರನ್‌ಗಳು
  •  ವಿರಾಟ್ ಕೊಹ್ಲಿ (RCB) - 322 ರನ್‌ಗಳು

ಇದನ್ನೂ ಓದಿ: ಆರಂಭಿಕ ಬ್ಯಾಟರ್​ಗಳ ಸ್ಫೋಟಕ ಬ್ಯಾಟಿಂಗ್​.. ಗುಜರಾತ್​​ನ ಗಿಲ್​​ ಸೇನೆಗೆ ಮತ್ತೊಂದು ವಿಜಯ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment