ಸೂರ್ಯಗೆ ಬಿಗ್ ಶಾಕ್ ಕೊಟ್ಟ ವಿರಾಟ್ ಕೊಹ್ಲಿ.. ನಿನ್ನೆಯ ಪಂದ್ಯದಲ್ಲಿ ಆಗಿದ್ದೇನು ಗೊತ್ತಾ..?

author-image
Ganesh
Updated On
ಸೂರ್ಯಗೆ ಬಿಗ್ ಶಾಕ್ ಕೊಟ್ಟ ವಿರಾಟ್ ಕೊಹ್ಲಿ.. ನಿನ್ನೆಯ ಪಂದ್ಯದಲ್ಲಿ ಆಗಿದ್ದೇನು ಗೊತ್ತಾ..?
Advertisment
  • ಸಾಯಿ ಸುದರ್ಶನ್, ನಿಕೋಲಸ್ ಪೂರನ್​​ಗೂ ಆಘಾತ
  • ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ವಿರಾಟ್ ಕೊಹ್ಲಿ ಅಮೋಘ 51 ರನ್ಸ್
  • ಈ ಬಾರಿಯ ಆರೆಂಜ್ ಕ್ಯಾಪ್ ಸ್ಪರ್ಧಿಗಳು ಯಾಱರು..? ​

ನಿನ್ನೆ ಮಧ್ಯಾಹ್ನ ಮುಂಬೈ ಮತ್ತು ಲಕ್ನೋ ನಡುವೆ ನಡೆದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಆರೆಂಜ್ ಕ್ಯಾಪ್ ಪಡೆದರು. ಬೆನ್ನಲ್ಲೇ ವಿರಾಟ್ ಕೊಹ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಅದ್ಭುತವಾಗಿ ಆಡುವ ಮೂಲಕ ಅದನ್ನು ಕಿತ್ತುಕೊಂಡಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್ 54 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಆ ಮೂಲಕ ಆರೆಂಜ್ ಕ್ಯಾಪ್ ಗೆದ್ದರು. ಸಂಜೆ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ವಿರಾಟ್ ಕೊಹ್ಲಿ, 51 ರನ್‌ಗಳ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಆ ಮೂಲಕ ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್​ ಅನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು.

ಇದನ್ನೂ ಓದಿ: 6, 6, 6, 6 ! ಟೀಕೆಗಳಿಗೆ ಉತ್ತರ ಕೊಟ್ಟ ಪಾಂಡ್ಯ.. ವಿಸ್ಫೋಟಕ ಬ್ಯಾಟಿಂಗ್ ಅಬ್ಬರ ಹೇಗಿತ್ತು..?

ಕಳೆದ ಶನಿವಾರದವರೆಗೆ ಗುಜರಾತ್ ತಂಡದ ಸಾಯಿ ಸುದರ್ಶನ್ ಆರೆಂಜ್ ಕ್ಯಾಪ್ ಅನ್ನು ತಮ್ಮದಾಗಿಸಿಕೊಂಡಿದ್ದರು. ಸುದರ್ಶನ್ 8 ಪಂದ್ಯಗಳಲ್ಲಿ 417 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದರು. ಕೊಹ್ಲಿ 392 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದರು. ನಿಕೋಲಸ್ ಪೂರನ್ 9 ಪಂದ್ಯಗಳಲ್ಲಿ 377 ರನ್ ಗಳಿಸಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರು.

ಈಗ ಏನಾಗಿದೆ..?

  • ವಿರಾಟ್ ಕೊಹ್ಲಿ- 443 ರನ್ಸ್​
  •  ಸೂರ್ಯಕುಮಾರ್ ಯಾದವ್- 427 ರನ್ಸ್​
  •  ಸಾಯಿ ಸುದರ್ಶನ್- 417
  •  ನಿಕೋಲಸ್ ಪೂರನ್- 404
  •  ಮಿಚಲ್ ಮಾರ್ಷ್ - 378
  •  ಕೆ.ಎಲ್.ರಾಹುಲ್ - 364

ಇದನ್ನೂ ಓದಿ: ಶೋಯೆಬ್ ಅಖ್ತರ್​​ಗೆ ಬಿಗ್ ಶಾಕ್ ಕೊಟ್ಟ ಭಾರತ ಸರ್ಕಾರ; ಪಾಕ್​ಗೆ ಮತ್ತೊಂದು ಮಾಸ್ಟರ್​ ಸ್ಟ್ರೋಕ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment