/newsfirstlive-kannada/media/post_attachments/wp-content/uploads/2025/05/RAJAT_KOHLI-1.jpg)
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್​ ನಡುವಿನ ಪಂದ್ಯ ಮಳೆಯಿಂದ ನಡೆಯಲಿಲ್ಲ. ಇದರಿಂದ ಆರ್​ಸಿಬಿ 12 ಪಂದ್ಯಗಳಿಂದ 17 ಅಂಕ ಪಡೆದು ಟೇಬಲ್​ ಟಾಪರ್ ಆಗಿದೆ. ಇದು ಖುಷಿ ಸಂಗತಿ ಆದರೂ ಪ್ಲೇ ಆಫ್​ ಆಫ್ ಹಾದಿ ಇನ್ನೂ ಅಧಿಕೃತವಾಗಿಲ್ಲ. ಒಂದು ಪಾಯಿಂಟ್ ಬೇಕಾಗಿದೆ. ಅದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ.
ಐಪಿಎಲ್​ನ ಲೀಗ್ ಪಂದ್ಯಗಳು ಇನ್ನು ಬಾಕಿ ಇವೆ. ಗುಜರಾತ್ ಟೈಟನ್ಸ್ 11 ಪಂದ್ಯಗಳಿಂದ 16 ಅಂಕಗಳಿಂದ 2ನೇ ಸ್ಥಾನದಲ್ಲಿದೆ. ಅದರಂತೆ ಮುಂಬೈ ಇಂಡಿಯನ್ಸ್ 12 ಪಂದ್ಯಗಳಿಂದ 14 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಒಂದು ವೇಳೆ ಈ ಎರಡು ತಂಡಗಳು ಲೀಗ್ ಸ್ಟೇಜ್​ನಲ್ಲಿ 18 ಪಾಯಿಂಟ್ ಪಡೆದ್ರೆ ಆರ್​ಸಿಬಿಗೆ ಮುಳುವಾಗಲಿದೆ. ಇದರ ಜೊತೆಗೆ ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಪಂಜಾಬ್ ಕಿಂಗ್ಸ್​ ಕೂಡ ಆರ್​ಸಿಬಿಯಂತೆ 17 ಪಾಯಿಂಟ್ ಪಡೆದುಕೊಂಡರೆ ರಜತ್ ಪಡೆಗೆ ಪ್ಲೇ ಆಫ್ ಕನಸು ಸುಲಭದ್ದಾಗಿರಲ್ಲ.
ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ RCB ಫ್ಯಾನ್ಸ್​ ನೋಡಿ ವಿರಾಟ್ ಕೊಹ್ಲಿ ಭಾವುಕ.. ಬಿಳಿ ಜೆರ್ಸಿಯೇ ಕಾರಣನಾ?
ಎಲ್ಲ ತಂಡಗಳು ಪಾಯಿಂಟ್​ಗಳನ್ನು ಒಂದೇ ಸೇಮ್ ಪಡೆದರೆ ಪ್ಲೇ ಆಫ್​ಗಾಗಿ ಕೊನೆಯಲ್ಲಿ ನೆಟ್​ ರನ್​ರೇಟ್ ತಾಳೆ ಹಾಕುತ್ತಾರೆ. ಸದ್ಯ ಡೆಲ್ಲಿ 11 ಮ್ಯಾಚ್​ಗಳಿಂದ 13 ಪಾಯಿಂಟ್ ಹೊಂದಿದ್ರೆ, ಪಂಜಾಬ್ ಕೂಡ 11 ಮ್ಯಾಚ್​ಗಳಿಂದ 15 ಪಾಯಿಂಟ್ ಪಡೆದಿದೆ. ಒಂದು ವೇಳೆ ಈ ಎರಡು 17 ಪಾಯಿಂಟ್ ಗಳಿಸಿದರೆ ಆರ್​​ಸಿಬಿ ಹಾದಿ ಕಠಿಣವಾಗಲಿದೆ. ಈ ವೇಳೆ ನೆಟ್​ ರನ್​ ರೇಟ್ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಆರ್​ಸಿಬಿ ಸದ್ಯ +0.482, ಪಂಜಾಬ್ +0.376 ಮತ್ತು ದೆಹಲಿ +0.362 ರನ್​ ರೇಟ್ ಹೊಂದಿವೆ. ಪಂಜಾಬ್, ಡೆಲ್ಲಿ ಉಳಿದ ಪಂದ್ಯಗಳಲ್ಲಿ ಗೆದ್ದರೇ ರನ್​ ರೇಟ್ ಮತ್ತಷ್ಟು ಸುಧಾರಿಸುತ್ತದೆ. ಇದು ಆರ್​ಸಿಬಿಗೇ ಕಂಟಕ ತರಲಿವೆ. ಹೀಗಾಗಿಯೇ ಮುಂದಿನ 2 ಪಂದ್ಯಗಳನ್ನು ಆರ್​ಸಿಬಿ ಗೆಲ್ಲಲೇಬೇಕಾಗಿದೆ. ಒಂದು ವೇಳೆ ಮುಂದಿನ ಪಂದ್ಯಗಳಲ್ಲಿ ಆರ್​ಸಿಬಿ ಮುಗ್ಗರಿಸಿದರೂ ರನ್​ ರೇಟ್​ ಇಳಿಕೆ ಆಗಿ ಫೈನಲ್​ಗೆ ಹೋಗುವ ದಾರಿಯಂತೂ ಕಲ್ಲು ಮುಳ್ಳುಗಳಿಂದ ಕೂಡಿರಲಿದೆ.
ಆರ್​ಸಿಬಿ ತಂಡ ಕೆಕೆಆರ್​ ವಿರುದ್ಧ ಜಯ ಸಾಧಿಸಿದ್ದರೇ ಒಟ್ಟು 18 ಅಂಕಗಳಿಂದ ಪ್ಲೇ ಆಫ್​ಗೆ ಹೋಗುತ್ತಿತ್ತು. ಆದರೆ ಪಂದ್ಯ ರದ್ದು ಆಗಿದ್ದರಿಂದ ಕೇವಲ 1 ಅಂಕ ಸಿಕ್ಕಿದೆ. ಮುಂದಿನ ಎರಡು ಪಂದ್ಯಗಳಲ್ಲೂ ಆರ್​ಸಿಬಿ ವಿಜಯ ಸಾಧಿಸಿದ್ರೆ 21 ಅಂಕ ಪಡೆಯಲಿದೆ. ಒಂದು ವೇಳೆ ಸೋತರೆ 17 ಅಂಕಗಳೇ ಗಟ್ಟಿ ಆಗುವುದರಿಂದ ಉಳಿದ 4 ತಂಡಗಳಿಗೆ ಇದು ಲಾಭದಾಯಕ ಆಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ