/newsfirstlive-kannada/media/post_attachments/wp-content/uploads/2025/05/josh_hazlewood_RCB.jpg)
ಐಪಿಎಲ್ನಲ್ಲಿ ಪ್ಲೇ-ಆಫ್ಗಾಗಿ ನಡೆಯುತ್ತಿರುವ ಜಿದ್ದಾಜಿದ್ದಿನ ಪೈಪೋಟಿ ತೀವ್ರಗೊಂಡಿದೆ. ಅಂತಿಮಘಟ್ಟ ತಲುಪಲು ಕೇಲವೇ ಕೆಲವು ಪಂದ್ಯಗಳು ಮಾತ್ರ ಬಾಕಿ ಉಳಿದಿದ್ದರೂ ಇನ್ನೂ ಸರಿಯಾದ ಕ್ಲಾರಿಟಿ ಮಾತ್ರ ಸಿಕ್ಕಿಲ್ಲ.
ಆರ್ಸಿಬಿ, ಪಂಜಾಬ್ ಕಿಂಗ್ಸ್, ಗುಜರಾತ್ ಟೈಟನ್ಸ್, ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಕ್ವಾಲಿಫೈ ಆಗಲು ತೀವ್ರ ಪೈಪೋಟಿ ನಡೆಸ್ತಿವೆ. ಆದರೆ ಈ ಐದು ತಂಡಗಳಲ್ಲಿ ಯಾವುದು ಪ್ಲೇ-ಆಫ್ನಿಂದ ಹೊರಗೆ ಬೀಳಲಿದೆ ಅನ್ನೋದು ಮಾತ್ರ ಖಚಿತವಾಗ್ತಿಲ್ಲ. ಇನ್ನು ಆರನೇ ಸ್ಥಾನದಲ್ಲಿರುವ ಕೋಲ್ಕತ್ತ ನೈಟ್ ರೈಡರ್ಸ್ ಪ್ಲೇ-ಆಫ್ ರೇಸ್ನಿಂದ ಹೊರ ಬಿದ್ದಿದೆ.
ಇದನ್ನೂ ಓದಿ: ವೈಷ್ಣವ್ ಮದ್ವೆಯಲ್ಲಿ ಕೀರ್ತಿ, ಲಕ್ಷ್ಮಿ ಲಕಲಕ.. ಶಮಂತ್ ಗಟ್ಟಿಮೇಳಕ್ಕೆ ಲಕ್ಷ್ಮೀ ಬಾರಮ್ಮ ಟೀಂ ಸರ್ಪ್ರೈಸ್ ಎಂಟ್ರಿ..!
ಉಳಿದಿರುವ ಐದು ತಂಡಗಳಲ್ಲಿ ಒಂದು ತಂಡ ಪ್ಲೇ-ಆಫ್ನಿಂದ ಹೊರ ಬೀಳೋದು ಪಕ್ಕಾ. ಸದ್ಯದ ಪಾಯಿಂಟ್ಸ್ ಪಟ್ಟಿ ನೋಡೋದಾದರೆ, ಆರ್ಸಿಬಿ, ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ 8 ಪಂದ್ಯಗಳನ್ನು ಗೆದ್ದು ನೆಟ್ ರನ್ಟೇಟ್ ಆಧಾರದ ಮೇಲೆ ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿವೆ.
ಇಲ್ಲಿ ಇನ್ನೊಂದು ವಿಚಾರ ಅಂದರೆ ಆರ್ಸಿಬಿ ಮತ್ತು ಪಂಜಾಬ್ ಕಿಂಗ್ಸ್ 12 ಪಂದ್ಯಗಳನ್ನು ಆಡಿವೆ. ಆದರೆ ಗುಜರಾತ್ ಟೈಟನ್ಸ್ ಕೇವಲ 11 ಪಂದ್ಯಗಳನ್ನು ಆಡಿದೆ. ಇದೀಗ 12ನೇ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡ್ತಿದೆ. ಆರ್ಸಿಬಿ ಮತ್ತು ಪಂಜಾಬ್ ಕಿಂಗ್ಸ್ ಮುಂದೆ ಇನ್ನೂ ಎರಡೆರಡು ಪಂದ್ಯಗಳಿದ್ದು, ಅವುಗಳಲ್ಲಿ ಒಂದು ಪಂದ್ಯ ಗೆದ್ದರೆ ಪ್ಲೇ-ಆಫ್ ಹಾದಿ ಖಚಿತವಾಗಲಿದೆ. ಆದರೆ ಗುಜರಾತ್ ಟೈಟನ್ಸ್ಗೆ ಇಂದು ಆಡುತ್ತಿರುವ ಪಂದ್ಯ ಸೇರಿ ಒಟ್ಟು ಮೂರು ಪಂದ್ಯಗಳು ಬಾಕಿ ಇವೆ. ಇಂದು ಗೆದ್ದರೆ ಗುಜರಾತ್ ಟೈಟನ್ಸ್ ಪ್ಲೇ, ಆಫ್ಗೆ ಹೋಗಲಿದೆ. ಸೋತರೂ ಚಿಂತಿಸಬೇಕಾದ ಅಗತ್ಯ ಇಲ್ಲ. ಉಳಿದಿರುವ ಎರಡು ಪಂದ್ಯಗಳಲ್ಲಿ ಒಂದು ಮ್ಯಾಚ್ ಗೆದ್ದರೆ ಸಾಕು.
ಇದನ್ನೂ ಓದಿ: ನಿನ್ನೆಯ ಪಂದ್ಯ ರದ್ದು.. ಅಭಿಮಾನಿಗಳಿಗೆ ಬಿಗ್ ಅಪ್ಡೇಟ್ಸ್ ಕೊಟ್ಟ ಆರ್ಸಿಬಿ..
ನಾಲ್ಕು ಮತ್ತು ಐದನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಇವೆ. ಮುಂಬೈ ಇಂಡಿಯನ್ಸ್ ಈಗಾಗಲೇ 12 ಪಂದ್ಯಗಳನ್ನು ಆಡಿದೆ. ಅದರಲ್ಲಿ 7 ಪಂದ್ಯಗಳನ್ನು ಗೆದ್ದುಕೊಂಡು 14 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ಬಳಿ ಇನ್ನೂ ಎರಡೂ ಪಂದ್ಯಗಳು ಬಾಕಿ ಇದ್ದು, ಎರಡರಲ್ಲೂ ಗೆದ್ದರೆ ಪ್ಲೇ-ಆಫ್ ಪ್ರವೇಶಿಸುವ ಸಾಧ್ಯತೆ ಇದೆ.
ಇನ್ನು ಐದನೇ ಸ್ಥಾನದಲ್ಲಿದ್ದುಕೊಂಡು ಪೈಪೋಟಿ ನೀಡ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಇಂದು ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸುತ್ತಿದೆ. 6 ಪಂದ್ಯವನ್ನು ಗೆದ್ದು 13 ಅಂಕಗಳೊಂದಿಗೆ ಸೆಣಸಾಟ ನಡೆಸ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಇಂದು ಗೆದ್ದರೆ 15 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ಹೋಗಲಿದೆ. ಜೊತೆಗೆ ಇನ್ನುಳಿದ ಎರಡೂ ಪಂದ್ಯವನ್ನು ಗೆದ್ದರೆ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಪ್ಲೇ-ಆಫ್ ಪ್ರವೇಶ ಮಾಡುವ ಸಾಧ್ಯತೆ ಇದೆ. ಹೀಗಾಗಿ ಈ ಐದೂ ತಂಡಗಳಿಗೂ ಗೆಲುವಿನ ಜೊತೆಗೆ ನೆಟ್ರೇಟ್ ಕೂಡ ಪ್ಲೇ-ಆಫ್ಗೆ ತುಂಬಾನೇ ಮುಖ್ಯವಾಗಿದೆ.
ಇದನ್ನೂ ಓದಿ: ಶ್ರೇಯಸ್ ಅಯ್ಯರ್ಗೆ ಮತ್ತೊಂದು ಗೆಲುವು, ಆದರೂ ಪ್ಲೇ-ಆಫ್ ಎಂಟ್ರಿ ಖಚಿತವಾಗಿಲ್ಲ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್