/newsfirstlive-kannada/media/post_attachments/wp-content/uploads/2025/04/RISHAB-PANT-1.jpg)
ಐಪಿಎಲ್ನಲ್ಲಿ ನಿನ್ನೆ ಸಂಜೆ ರಾಜಸ್ಥಾನ್ ರಾಯಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿ ಆಗಿದ್ದವು. ಕೊನೆಯ ಓವರ್ನಲ್ಲಿ ನಡೆದ ರೋಚಕ ಕಾದಾಟದ ಪರಿಣಾಮ ಎಲ್ಎಸ್ಜಿ ಕೇವಲ 2 ರನ್ಗಳ ಅಂತರದಿಂದ ಗೆಲುವು ಸಾಧಿಸಿತು.
ಬೆನ್ನಲ್ಲೇ ಪಾಯಿಂಟ್ಸ್ ಪಟ್ಟಿಯಲ್ಲಿ ಭಾರೀ ಏರಿಳಿತ ಆಗಿದೆ. ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಆಘಾತ ಆಗಿದೆ. ಎಲ್ಎಸ್ಜಿ ಆರ್ಸಿಬಿ ಅಲಂಕರಿಸಿದ್ದ ನಾಲ್ಕನೇ ಸ್ಥಾನಕ್ಕೆ ಹೋಗಿ ಕೂತಿದ್ದು, ಆರ್ಸಿಬಿ ಐದನೇ ಸ್ಥಾನಕ್ಕೆ ಕುಸಿದಿದೆ. ಇದರಿಂದ ಆರ್ಸಿಬಿ ಪ್ಲೇ-ಆಫ್ ಹಾದಿಗೆ ಸಣ್ಣ ಹಿನ್ನಡೆ ಆಗಿದೆ.
ಇದನ್ನೂ ಓದಿ: ಘೋರ ದುರಂತ.. ಟ್ರ್ಯಾಕ್ಟರ್‌ನಡಿ ಸಿಲುಕಿ 5 ವರ್ಷದ ಬಾಲಕ ದಾರುಣ ಸಾವು
ಆರ್ಸಿಬಿ ಮುಂದೆ ಇವತ್ತಿನ ಪಂದ್ಯ ಸೇರಿ ಒಟ್ಟು 7 ಪಂದ್ಯಗಳಿವೆ. ಅವುಗಳಲ್ಲಿ ಕನಿಷ್ಠ ನಾಲ್ಕು ಪಂದ್ಯವಾದರೂ ಗೆಲ್ಲಲೇಬೇಕಿದೆ. 7 ಪಂದ್ಯಗಳಲ್ಲಿ ಐದು ಮ್ಯಾಚ್ ಗೆದ್ದಿರುವ ಗುಜರಾತ್ ಟೈಟನ್ಸ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್, ಐದು ಮ್ಯಾಚ್ ಗೆದ್ದು ನೆಟ್ರನ್ ರೇಟ್ ಆಧಾರದ ಮೇಲೆ ಎರಡನೇ ಸ್ಥಾನಕ್ಕೆ ಕುಸಿದಿದೆ.
ಪಂಜಾಬ್ ಮೂರನೇ ಸ್ಥಾನದಲ್ಲಿದ್ದರೆ, ಎಲ್ಎಸ್ಜಿ ನಾಲ್ಕು, ಆರ್ಸಿಬಿ ಐದು, ಕೆಕೆಆರ್ ಆರನೇ ಸ್ಥಾನದಲ್ಲಿದೆ. ಇನ್ನು ಮುಂಬೈ ಇಂಡಿಯನ್ಸ್ ಏಳನೇ ಸ್ಥಾನ, ರಾಜಸ್ಥಾನ್ ರಾಯಲ್ಸ್ 8ನೇ ಸ್ಥಾನದಲ್ಲಿದೆ. ಸನ್ ರೈಸರ್ಸ್ ಹೈದರಾಬಾದ್ 9ನೇ ಸ್ಥಾನದಲ್ಲಿದ್ದರೆ, ಸಿಎಸ್ಕೆ ಕೊನೆಯ ಸ್ಥಾನದಲ್ಲಿದೆ.
ಇದನ್ನೂ ಓದಿ: ಮೊನ್ನೆ ಪಡಿಕ್ಕಲ್.. ಇವತ್ತು ಮತ್ತೊಬ್ಬ ಸ್ಫೋಟಕ ಬ್ಯಾಟರ್ಗೆ ಕೊಕ್ ಸಾಧ್ಯತೆ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್