/newsfirstlive-kannada/media/post_attachments/wp-content/uploads/2024/11/RCB-2.jpg)
ಮುಂಬರುವ ಐಪಿಎಲ್ಗೂ ಮುನ್ನ ಆರ್ಸಿಬಿ ತಂಡದ ಸಪೋರ್ಟ್ ಸ್ಟಾಫ್ ವಿಭಾಗಕ್ಕೆ ಮೇಜರ್ ಸರ್ಜರಿ ಮಾಡಿದೆ. ಬ್ಯಾಟಿಂಗ್ ಕೋಚ್ ನೀಲ್ ಮೆಕೇಂಜಿ, ಬೌಲಿಂಗ್ ಕೋಚ್ ಆ್ಯಡಮ್ ಗ್ರಿಫಿತ್ಗೆ ಗೇಟ್ಪಾಸ್ ನೀಡಿದೆ.
ಜೊತೆಗೆ ಸೈಕಾಲಜಿಸ್ಟ್ ಜೇಮ್ಸ್ ಬೆಲ್ಗೂ ಫ್ರಾಂಚೈಸಿ ಗುಡ್ಬೈ ಹೇಳಿದೆ. ಆ್ಯಡಮ್ ಗ್ರಿಫಿತ್ ಸ್ಥಾನಕ್ಕೆ ಓಂಕಾರ್ ಸಾಲ್ವಿಯನ್ನ ಬೌಲಿಂಗ್ ಕೋಚ್ ಆಗಿ ಆರ್ಸಿಬಿ ನೇಮಿಸಿದೆ. ಮೆಂಟರ್ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಕೋಚ್ ಜವಾಬ್ದಾರಿ ನಿಭಾಯಿಸಲಿದ್ದಾರೆ.
ನವೆಂಬರ್ 24-25 ರಂದು ದುಬೈನಲ್ಲಿ ಮೆಗಾ ಹರಾಜು ನಡೆಯಲಿದೆ. ಅಲ್ಲಿ ಆರ್ಸಿಬಿ ಯಾವೆಲ್ಲ ಆಟಗಾರರನ್ನು ಖರೀದಿ ಮಾಡಲಿದೆ ಅನ್ನೋದು ಗೊತ್ತಾಗಲಿದೆ. ಇನ್ನು ಮೂವರನ್ನು ಆರ್ಸಿಬಿ ಉಳಿಸಿಕೊಂಡಿದ್ದು, ಉಳಿದ ಆಟಗಾರರನ್ನು ರಿಲೀಸ್ ಮಾಡಿದೆ. ಆರ್ಟಿಎಂ ಅಡಿಯಲ್ಲಿ ಇನ್ನೂ ಮೂವರನ್ನು ತಂಡಕ್ಕೆ ಮರು ಆಯ್ಕೆಮಾಡಿಕೊಳ್ಳುವ ಹಕ್ಕನ್ನೂ ಆರ್ಸಿಬಿ ಹೊಂದಿದೆ.
ಇದನ್ನೂ ಓದಿ:ಆರ್ಸಿಬಿ ಈ ಯಂಗ್ ಆಟಗಾರನಿಗೆ ಕ್ಯಾಪ್ಟನ್ಸಿ ನೀಡಬೇಕು -ಉತ್ತಪ್ಪ ಹೇಳಿದ ಹೆಸರು ಯಾವುದು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್