/newsfirstlive-kannada/media/post_attachments/wp-content/uploads/2025/04/RCB_TEAM-2.jpg)
ಪ್ಲೇ-ಆಫ್ಗೆ ಎಂಟ್ರಿ ನೀಡಿರುವ ಆರ್ಸಿಬಿ ಸಖತ್ ಜೋಶ್ನಲ್ಲಿದೆ. ಅದೇ ಖುಷಿಯಲ್ಲಿ ಮೈಮರೆತರೆ ತುಂಬಾ ಕಷ್ಟ. ಯಾಕೆಂದರೆ ಆರ್ಸಿಬಿಗೆ ಐಪಿಎಲ್ ಪುನರಾರಂಭದ ನಂತರ ಇಲ್ಲಿಯವರೆಗೆ ಆಡುವ ಅವಕಾಶ ಸಿಕ್ಕಿಲ್ಲ. ಹೀಗಾಗಿ ಮೇ 23 ರಂದು ನಡೆಯಲಿರುವ ಪಂದ್ಯದಲ್ಲಿ ಸ್ಟ್ರಾಂಗ್ ಆಗಿ ಕಂಬ್ಯಾಕ್ ಮಾಡುವ ಮೂಲಕ ಎದುರಾಳಿ ತಂಡಗಳಿಗೆ ಖಡಕ್ ಎಚ್ಚರಿಕೆ ನೀಡಬೇಕಿದೆ.
ಪ್ಲೇ-ಆಫ್ ಪ್ರವೇಶ ಮಾಡಿದ್ದರೂ, ಆರ್ಸಿಬಿಗೆ ಲೀಗ್ ಹಂತದ ಎರಡು ಪಂದ್ಯಗಳು ಇನ್ನೂ ಬಾಕಿ ಇವೆ. ಸನ್ ರೈಸರ್ಸ್ ಹೈದರಾಬಾದ್ ಹಾಗೂ ಎಲ್ಎಸ್ಜಿ ವಿರುದ್ಧ ಪಂದ್ಯಗಳಿವೆ. ಮೇ 23 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಹೈದರಾಬಾದ್ ತಂಡದ ವಿರುದ್ಧ ಆರ್ಸಿಬಿ ಸೆಣಸಾಟ ನಡೆಸಲಿದೆ. ಈ ಎರಡೂ ಪಂದ್ಯಗಳು ಆರ್ಸಿಬಿಗೆ ತುಂಬಾನೇ ಮುಖ್ಯವಾಗಿದೆ. ಪ್ಲೇ-ಆಫ್ನಲ್ಲಿ ಆರ್ಸಿಬಿ ಅಗ್ರಸ್ಥಾನದಲ್ಲಿದ್ದರೆ, ಫೈನಲ್ ಪ್ರವೇಶ ಮಾಡಲು ಎರಡು ದಾರಿಗಳು ಇರುತ್ತವೆ. ಹಾಗಾಗಿ ಲೀಗ್ ಹಂತದಲ್ಲಿ ಉಳಿದಿರುವ ಎರಡೂ ಪಂದ್ಯಗಳನ್ನೂ ಆರ್ಸಿಬಿ ಗೆಲ್ಲಲೇಬೇಕಿದೆ.
ಇದನ್ನೂ ಓದಿ: ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಜೊತೆ ರಾಥಿ ಗಲಾಟೆ.. ಔಟ್ ಆಗ್ತಿದ್ದಂತೆ ಹೀಗೆ ಮಾಡಬಹುದಾ?
ಮೇ 17 ರಂದು ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಮ್ಯಾಚ್ ಇತ್ತು. ಆದರೆ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಮೇ 23 ರಂದು ಮಳೆ ಬೀಳುವ ಸಂಭವ ಇದೆ. ಯಾಕೆಂದರೆ ಬೆಂಗಳೂರಲ್ಲಿ ಕಳೆದ ಒಂದು ವಾರದಿಂದ ಸಂಜೆ ವೇಳೆಗೆ ನಿರಂತರವಾಗಿ ಮಳೆಯಾಗುತ್ತಿದೆ. ಒಂದು ವೇಳೆ ಮಳೆರಾಯ ಕೃಪೆ ತೋರಿದರೆ, ಸಂಜೆ 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. 7.30ಕ್ಕೆ ಎಂದಿನಂತೆ ಪಂದ್ಯ ಆರಂಭವಾಗಲಿದೆ.
ಇದನ್ನೂ ಓದಿ: ಸ್ಪಿನ್ನರ್ ದಿಗ್ವೇಶ್ ರಾಥಿಗೆ ಬಿಗ್ ಶಾಕ್; ಅಭಿಷೇಕ್ ಜತೆ ವಾಗ್ವಾದ.. IPL ಮ್ಯಾಚ್ನಿಂದ ಅಮಾನತು
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್