/newsfirstlive-kannada/media/post_attachments/wp-content/uploads/2024/04/RCB-KOHLI-2.jpg)
2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಮುಂದಿನ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆಲ್ಲೋ ನಿರೀಕ್ಷೆಯಲ್ಲಿದೆ. ಹಾಗಾಗಿ ವರ್ಷದ ಕೊನೆಗೆ ಎದುರಾಗಲಿರೋ ಮೆಗಾ ಆಕ್ಷನ್ಗೆ ಮುನ್ನ ಆರ್ಸಿಬಿಯಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ.
ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ರೀಟೈನ್ ಲಿಸ್ಟ್ ರಿಲೀಸ್ ಮಾಡಿದೆ. ಆರ್ಸಿಬಿ ಟೀಮ್ ಮೊದಲು ರೀಟೈನ್ ಮಾಡಿಕೊಂಡಿದ್ದು ವಿರಾಟ್ ಕೊಹ್ಲಿ. 2ನೇ ಆಯ್ಕೆ ರಜತ್ ಪಾಟಿದಾರ್ ಮತ್ತು 3ನೇ ಆಯ್ಕೆಯಾಗಿ ಯಶ್ ದಯಾಳ್ ಅವರನ್ನು ಉಳಿಸಿಕೊಂಡಿದೆ.
ಆರ್ಸಿಬಿ ತಂಡ ವಿರಾಟ್ ಕೊಹ್ಲಿ ಅವರಿಗೆ ಬರೋಬ್ಬರಿ 21 ಕೋಟಿ ನೀಡಿ ಉಳಿಸಿಕೊಂಡಿದೆ. ರಜತ್ ಪಾಟಿದಾರ್ ಅವರಿಗೆ 11 ಕೋಟಿ ಮತ್ತು ಯಶ್ ದಯಾಳ್ ಅವರಿಗೆ 5 ಕೋಟಿ ನೀಡಿ ರೀಟೈನ್ ಮಾಡಿಕೊಳ್ಳಲಾಗಿದೆ. ಈ ಮೂವರಿಗಾಗಿ ಆರ್ಸಿಬಿ ಸುಮಾರು 37 ಕೋಟಿ ಖರ್ಚು ಮಾಡಿದೆ. ಆರ್ಸಿಬಿ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಗೇಟ್ಪಾಸ್ ನೀಡಿದೆ. ಮೆಗಾ ಹರಾಜಿನಲ್ಲಿ ಮ್ಯಾಕ್ಸ್‌ವೆಲ್ ಮೇಲೆ ಆರ್ಸಿಬಿ ಆರ್ಟಿಎಂ ಕಾರ್ಡ್ ಬಳಸಬಹುದು ಎನ್ನುವ ಮಾತುಗಳು ಕೇಳಿ ಬಂದಿವೆ. ಇದರ ಮಧ್ಯೆ ಮ್ಯಾಕ್ಸಿ ಅಮೋಘ ಪ್ರದರ್ಶನ ನೀಡಿದ್ದಾರೆ.
Glenn Maxwell 43(19) vs Pakistan 1st T20I Ball by Ball.
I am watching his cricket regularly whenever he hits reverse shots on the very first ball , he shows confidence
Video credit-@Dilipchoudharyy
— chodry (@chodry178) November 14, 2024
ಪಾಕಿಸ್ತಾನದ ವಿರುದ್ಧ ಮ್ಯಾಕ್ಸಿ ಅಬ್ಬರ
ಇಂದು ನಡೆದ ಮೊದಲ ಟಿ20 ಪಂದ್ಯದಲ್ಲಿ ಪಾಕ್ ವಿರುದ್ಧ ಆಸ್ಟ್ರೇಲಿಯಾ ತಂಡ ಗೆದ್ದು ಬೀಗಿದೆ. ಮಳೆ ಬಂದ ಕಾರಣ ಪಂದ್ಯವನ್ನು 7 ಓವರ್ ಮಾತ್ರ ಆಡಿಸಲಾಯ್ತು. ಟಾಸ್ ಸೋತ್ರೂ ಫಸ್ಟ್ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ಮ್ಯಾಕ್ಸಿ ಅಬ್ಬರಿಸಿದ್ರು. ಕೇವಲ 19 ಬಾಲ್ನಲ್ಲಿ 226 ಬ್ಯಾಟಿಂಗ್ ಸ್ಟ್ರೈಕ್ ರೇಟ್ನಲ್ಲಿ 3 ಸಿಕ್ಸರ್, 5 ಫೋರ್ ಸಮೇತ 43 ರನ್ ಚಚ್ಚಿದ್ರು. ಇವರ ನೆರವಿನಿಂದ 7 ಓವರ್ನಲ್ಲಿ ಆಸ್ಟ್ರೇಲಿಯಾ 4 ವಿಕೆಟ್ ನಷ್ಟಕ್ಕೆ 93 ರನ್ ಕಲೆ ಹಾಕಿತು. ಈ ಸ್ಕೋರ್ ಬೆನ್ನತ್ತಿದ ಪಾಕ್ 7 ಓವರ್ನಲ್ಲಿ 7 ವಿಕೆಟ್ಗೆ 64 ರನ್ ಗಳಿಸಿ 29 ರನ್ನಿಂದ ಸೋತಿದೆ.
ಆರ್ಸಿಬಿ ಸೇರೋ ಸುಳಿವು ನೀಡಿದ್ದ ಮ್ಯಾಕ್ಸಿ
ಆರ್ಸಿಬಿಯಿಂದ ನನ್ನ ಕೈ ಬಿಡುವ ಬಗ್ಗೆ ಹೆಡ್ ಕೋಚ್ ಆ್ಯಂಡಿ ಫ್ಲವರ್ ಮತ್ತು ಡೈರೆಕ್ಟರ್ ಬೊಂಬಾಟ್ ಮಾಹಿತಿ ನೀಡಿದ್ರು. ಏನಕ್ಕೆ ರೀಟೈನ್ ಮಾಡಿಕೊಳ್ಳುತ್ತಿಲ್ಲ ಅನ್ನೋದು ಬಿಡಿಸಿ ಹೇಳಿದ್ರು. ಆರ್ಸಿಬಿ ಜತೆಗೆ ನನ್ನ ಜರ್ನಿ ಅದ್ಭುತವಾಗಿತ್ತು. ನನ್ನ ಮತ್ತು ಆರ್ಸಿಬಿ ಜರ್ನಿ ಮುಗಿದಿದೆ ಎಂದು ನಾನು ಹೇಳಲ್ಲ ಎಂದರು ಮ್ಯಾಕ್ಸ್‌ವೆಲ್.
ಮ್ಯಾಕ್ಸ್ವೆಲ್ಗೆ ಗೇಟ್ಪಾಸ್
ಇನ್ನು, ಮುಂದಿನ ಸೀಸನ್ಗಾಗಿ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಿದೆ. ಉತ್ತಮ ಪ್ರದರ್ಶನ ನೀಡದ ದುಬಾರಿ ಆಟಗಾರರನ್ನೇ ಕೈ ಬಿಟ್ಟಿದೆ. ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಆರ್ಸಿಬಿ ರಿಲೀಸ್ ಮಾಡಿದೆ. 2021ರ ಹರಾಜಿನಲ್ಲಿ ಮ್ಯಾಕ್ಸ್‌ವೆಲ್ ಅವರನ್ನು 14.25 ಕೋಟಿ ರೂಪಾಯಿ ನೀಡಿ ಆರ್ಸಿಬಿ ಖರೀದಿ ಮಾಡಿತ್ತು. 2023ರ ಐಪಿಎಲ್‌ನಲ್ಲಿ 400 ರನ್ ಗಳಿಸಿದ್ದ ಮ್ಯಾಕ್ಸಿ ಕಳೆದ ಸೀಸನ್ 2024ರ ಐಪಿಎಲ್‌ನಲ್ಲಿ ಕೇವಲ 52 ರನ್ ಗಳಸಿದರು. ಈ ಮೂಲಕ ಆರ್ಸಿಬಿಗೆ ಮ್ಯಾಕ್ಸ್‌ವೆಲ್ ದೊಡ್ಡ ತಲೆನೋವಾಗಿ ಪರಿಣಮಿಸಿದ್ರು.
ಇದನ್ನೂ ಓದಿ: 6,6,6,6,6,6,6; ಭರ್ಜರಿ ಶತಕ ಸಿಡಿಸಿ ದಾಖಲೆ ಬರೆದ ಟೀಮ್ ಇಂಡಿಯಾ ಯುವ ಬ್ಯಾಟರ್!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್