IPL 2025: ಆರ್​ಸಿಬಿಯಲ್ಲಿ 5 ಸರ್​​ಪ್ರೈಸ್ ಎಂಟ್ರಿಗಳ ಹಿಂದಿನ ಸೀಕ್ರೆಟ್ ರಿವೀಲ್..!

author-image
Ganesh
Updated On
IPL 2025: ಆರ್​ಸಿಬಿಯಲ್ಲಿ 5 ಸರ್​​ಪ್ರೈಸ್ ಎಂಟ್ರಿಗಳ ಹಿಂದಿನ ಸೀಕ್ರೆಟ್ ರಿವೀಲ್..!
Advertisment
  • ಜೇಕಬ್​ ಬೆತೆಲ್ ಯಾರು? ಪರ್ಫಾಮೆನ್ಸ್​ ಹೇಗಿದೆ?
  • ಸ್ವಪ್ನಿಲ್​ ಸಿಂಗ್​ ಖರೀದಿಗೆ RTM ಬಳಸಿದ್ದೇಕೆ..?​
  • ಸ್ವಸ್ತಿಕ್​ ಚಿಕಾರ​, ಅಭಿನಂದನ್​ ಸಿಂಗ್​ ಯಾರು ಗೊತ್ತಾ..?

ಇಂಡಿಯನ್​​ ಪ್ರೀಮಿಯರ್​ ಲೀಗ್​ ಅಂದ್ರೆನೇ ಸರ್​​ಪ್ರೈಸ್​ಗಳ ಸಂತೆ. ಕ್ಷಣ ಕ್ಷಣಕ್ಕೂ ಟ್ವಿಸ್ಟ್ ಅಂಡ್ ಟರ್ನ್​​​ಗಳದ್ದೇ ಕಾರುಬಾರು. ಕೇವಲ ಆನ್​ಫೀಲ್ಡ್​ ಆಟ ಮಾತ್ರವಲ್ಲ.. ಆಫ್​ ದ ಫೀಲ್ಡ್​ನಲ್ಲೂ ಇದೇ ಕಥೆ. ಇದಕ್ಕೆ ಬೆಸ್ಟ್​ ಎಕ್ಸಾಂಪಲ್​ ಮೆಗಾ ಆಕ್ಷನ್ ಮತ್ತು ನಮ್ಮ ಆರ್​ಸಿಬಿ ಟೀಮ್​​!

ಐಪಿಎಲ್​ ಮೆಗಾ ಆಕ್ಷನ್​ ಅಂತ್ಯ ಕಂಡಿದೆ. ಬರೋಬ್ಬರಿ 83 ಕೋಟಿ ಹಣವನ್ನು ಇಟ್ಟುಕೊಂಡು ಆಕ್ಷನ್​ಗೆ ಹೋಗಿದ್ದ ಆರ್​​ಸಿಬಿ, ಡಿಸೆಂಟ್​ ತಂಡ ಕಟ್ಟಿದೆ. ಆರ್​​ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟಿರೋ ಹಲವರು ಸ್ಟಾರ್​​ಗಳು. ಇವರ ಖರೀದಿ ನಿಜಕ್ಕೂ ಕ್ರಿಕೆಟ್​ ವಲಯದಲ್ಲಿ ಸರ್​​​ಪ್ರೈಸ್​ ಅನಿಸಿದೆ. ಅಂದ್ಹಾಗೆ ಆ ಸರ್​​ಪ್ರೈಸ್​ ಖರೀದಿಗಳನ್ನ ಸುಖಾ ಸುಮ್ಮನೆ ಮಾಡಿದ್ದಲ್ಲ.

ಜೇಕಬ್​ ಬೆತೆಲ್
ಈ ಹೆಸರನ್ನು ಮೊನ್ನೆಯವರೆಗೂ ಬಹುತೇಕರು ಕೇಳಿರಲೇ ಇಲ್ಲ. ಆರ್​​ಸಿಬಿ ತಂಡ ಬರೋಬ್ಬರಿ 2 ಕೋಟಿ 60 ಲಕ್ಷ ಕೊಟ್ಟು ಖರೀದಿ ಮಾಡಿದ ಮೇಲೆ ಸಖತ್​ ಟ್ರೆಂಡಿಂಗ್​ನಲ್ಲಿದೆ. ಈ ಜೇಕಬ್​ ಬೆತೆಲ್​ ಇಂಗ್ಲೆಂಡ್​ನ ಆಲ್​​ರೌಂಡರ್​. ಸ್ಫೋಟಕ ಬ್ಯಾಟಿಂಗ್​ ನಡೆಸಬಲ್ಲ ಬೆತೆಲ್​, ಸ್ಪಿನ್​ ಬೌಲಿಂಗ್​ ಕೂಡ ಮಾಡ್ತಾರೆ. ಚಿನ್ನಸ್ವಾಮಿಯಂತ ಚಿಕ್ಕ ಗ್ರೌಂಡ್​​ನಲ್ಲಿ ರನ್​ ಸುರಿಮಳೆ ಸುರಿಸೋ ತಾಕತ್ತಿದೆ. ಇಂಗ್ಲೆಂಡ್​ ಪರ 7 ಟಿ20 ಆಡಿರೋ ಪವರ್​ ಹಿಟ್ಟರ್ 170ರ ಸ್ಟ್ರೈಕ್​ರೇಟ್​ ಹೊಂದಿದ್ದು, 7.20ರ ಉತ್ತಮ ಎಕಾನಮಿಯಲ್ಲಿ ಬೌಲಿಂಗ್​ ಮಾಡಿದ್ದಾರೆ. ಈ ರೆಕಾರ್ಡ್​​ ನೋಡಿಯೇ ಆರ್​​ಸಿಬಿ ಖರೀದಿಸಿರೋದು.

ಇದನ್ನೂ ಓದಿ:ಪಂಜಾಬ್​ ತಂಡ ಸೇರಿದ ಆರ್​ಸಿಬಿ ಸ್ಟಾರ್​​; ಎಷ್ಟು ಕೋಟಿ ಬಾಚಿಕೊಂಡ್ರು ಮ್ಯಾಕ್ಸ್​ವೆಲ್​?

ನುವಾನ್​ ತುಷಾರ
ಈ ಹೆಸರನ್ನ ಹಲವರು ಕೇಳಿದ್ರೂ ಆರ್​​ಸಿಬಿ ಖರೀದಿಸುತ್ತೆ ಅನ್ನೋ ನಿರೀಕ್ಷೆ ಯಾರಿಗೂ ಇರಲಿಲ್ಲ. ನುವಾನ್​ ತುಷಾರ ಆರ್​​ಸಿಬಿಯ​ ಒನ್​ ಆಫ್​ ದ ಬೆಸ್ಟ್​ ಬೈ. ಥೇಟ್​ ಲಸಿತ್​ ಮಲಿಂಗಾರಂತೆ ಬೌಲಿಂಗ್​ ಶೈಲಿ ಹೊಂದಿರೋ ತುಷಾರಗೆ ಕರಾರುವಕ್​ ಯಾರ್ಕರ್​ ಎಸೆದು ಬ್ಯಾಟ್ಸ್​​ಮನ್​ಗಳನ್ನ ಕಕ್ಕಾಬಿಕ್ಕಿಯಾಗಿಸೋ ಕಲೆ ಇದೆ. T20 ಇಂಟರ್​​ನ್ಯಾಷನಲ್​ನಲ್ಲಿ ಹ್ಯಾಟ್ರಿಕ್​ ವಿಕೆಟ್​ ಬೇಟೆಯಾಡಿದ ರೆಕಾರ್ಡ್​ ಇದೆ.

ಸ್ವಪ್ನಿಲ್​ ಸಿಂಗ್​
ಸ್ವಪ್ನಿಲ್​ ಸಿಂಗ್​ ಕಳೆದ ಸೀಸನ್​ನಲ್ಲಿ ಆರ್​​ಸಿಬಿಯಲ್ಲೇ ಇದ್ರು. ಮ್ಯಾಕ್ಸ್​ವೆಲ್​, ಸಿರಾಜ್​, ವಿಲ್​​ ಜಾಕ್ಸ್​​ಗೆ RTM ಬಳಸದ ಆರ್​​ಸಿಬಿ ಸ್ವಪ್ನಿಲ್​ ಸಿಂಗ್​​ಗೆ ಆರ್​​ಟಿಎಮ್​ ದಾಳ ಉರುಳಿಸಿದ್ದು ಎಲ್ಲರಿಗೂ ಸರ್​​​ಪ್ರೈಸ್​​. ಈ ಸರ್​​ಪ್ರೈಸ್​ ಹಿಂದಿನ ಸೀಕ್ರೆಟ್​ ಪರ್ಫಾಮೆನ್ಸ್​. ಕಳೆದ ಸೀಸನ್​ನಲ್ಲಿ ಬ್ಯಾಟಿಂಗ್​, ಬೌಲಿಂಗ್​ ಎರಡರಲ್ಲೂ ಸ್ವಪ್ನಿಲ್​​ ಇಂಪ್ಯಾಕ್ಟ್​ಫುಲ್​ ಪರ್ಫಾಮೆನ್ಸ್​ ನೀಡಿದ್ರು. ಕಳೆದ ಸೀಸನ್​ನಲ್ಲಿ ಸತತವಾಗಿ ಕೊನೆಯ 6 ಪಂದ್ಯಗಳನ್ನ ಗೆಲ್ಲೋದ್ರ ಹಿಂದೆ ಈ ಮ್ಯಾಜಿಕಲ್​ ಸ್ಪಿನ್ನರ್​ ಕೊಡುಗೆ ಅಪಾರ.

ಸ್ವಸ್ತಿಕ್​ ಚಿಕಾರ​
ಈ ಹೆಸರನ್ನ ಬಹುತೇಕರು ಕೇಳಿರಲ್ಲ.. ಉತ್ತರ ಪ್ರದೇಶ ಟಿ20 ಲೀಗ್​ನ ಟಾಪ್​ ಸ್ಕೋರರ್​ ಈ ಸ್ವಸ್ತಿಕ್​ ಚಿಕಾರ. 7 ಪಂದ್ಯಗಳಲ್ಲೇ ಬರೋಬ್ಬರಿ 91.2ರ ಸರಾಸರಿಯಲ್ಲಿ 456 ರನ್​ಗಳಿಸಿದ ರೆಕಾರ್ಡ್​​ ಈತನದ್ದು. ಈ ಟ್ಯಾಲೆಂಟ್​ಗೆ ಮನಸೋತು ಆರ್​​ಸಿಬಿ ಹರಾಜಿನಲ್ಲಿ ಮಣೆ ಹಾಕಿದೆ.

ಇದನ್ನೂ ಓದಿ:IPL 2025: ಆರ್​​ಸಿಬಿ ತಂಡದಿಂದ ಈ ಸ್ಟಾರ್​ ಆಟಗಾರನನ್ನು ಕೈ ಬಿಡಲು ಕಾರಣವೇನು?

ಅಭಿನಂದನ್​ ಸಿಂಗ್​
ಉತ್ತರ ಪ್ರದೇಶದ ಯುವ ಪ್ರತಿಭೆ ಅಭಿನಂದನ್​ ಸಿಂಗ್​. ಈತನನ್ನ ಮತ್ತೊಬ್ಬ ಭುವನೇಶ್ವರ್​ ಕುಮಾರ್​​ ಅನ್ನಬಹುದು. ವೇಗಿ ಭುವನೇಶ್ವರ್​ ಕುಮಾರ್​​​ರಂತೆ ಬೌಲಿಂಗ್​ ಮಾಡೋ ಅಭಿನಂದನ್​ ಸಿಂಗ್​, ಈ ಸೀಸನ್​​ ಉತ್ತರ ಪ್ರದೇಶ ಟಿ20 ಲೀಗ್​ನ ಟಾಪ್​ 5 ಬೌಲರ್​​ಗಳಲ್ಲಿ ಒಬ್ಬರು. 10 ಪಂದ್ಯಗಳಲ್ಲಿ 15 ವಿಕೆಟ್​ ಉರುಳಿಸಿದ ಅಭಿನಂದನ್​, ಡಿ ವೈ ಪಾಟೀಲ್​ ಟೂರ್ನಮೆಂಟ್​ ಫೈನಲ್​ ಮ್ಯಾನ್​​ ಆಫ್​ ಮ್ಯಾಚ್​ ಆಗಿ ಹೊರಹೊಮ್ಮಿದರು. ಈತನ ಪರ್ಫಾಮೆನ್ಸ್​​ನ ಕ್ಲೋಸ್​ ಆಗಿ ಮಾನಿಟರ್​ ಮಾಡಿದ ಬಳಿಕವೇ ಆರ್​​ಸಿಬಿ ಖರೀದಿಸಿರೋದು.

ಒಟ್ಟಿನಲ್ಲಿ ಈ ಬಾರಿಯ ಆಕ್ಷನ್​ನಲ್ಲಿ ಸ್ಟಾರ್​​ಗಿರಿಗೆ ಮಣೆ ಹಾಕದೆ ಪರ್ಫಾಮೆನ್ಸ್​​ ನೋಡಿ ಕೆಲ ಯುವ ಆಟಗಾರರಿಗೆ ಆರ್​​ಸಿಬಿ ಖರೀದಿಸಿದೆ. ಇವ್ರ ಪೈಕಿ ಎಲ್ಲರಿಗೂ ಪ್ಲೇಯಿಂಗ್​ ಇಲೆವೆನ್​ನಲ್ಲಿ ಚಾನ್ಸ್​ ಸಿಗುತ್ತಾ ಅಂದ್ರೆ, ಈ ಪ್ರಶ್ನೆಗೆ ಉತ್ತರವಿಲ್ಲ. ಅಭ್ಯಾಸದ ಕಣದಲ್ಲಿ ಮ್ಯಾನೇಜ್​​ಮೆಂಟ್​ನ ಇಂಪ್ರೆಸ್​ ಮಾಡಿದ್ರೆ ಪ್ಲೇಯಿಂಗ್​ ಇಲೆವೆನ್​ನ ಡೋರ್​ ತೆರೆಯಬಹುದು.

ಇದನ್ನೂ ಓದಿ:ಆರ್​ಸಿಬಿಗೆ ಕಿಂಗ್ ಆಫ್ ಸ್ವಿಂಗ್ ಎಂಟ್ರಿ.. ಬೆಂಗಳೂರು ತಂಡದ ಬಗ್ಗೆ ಭುವಿ ಮನದಾಳದ ಮಾತು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment