/newsfirstlive-kannada/media/post_attachments/wp-content/uploads/2025/04/RCB-vs-DC-1.jpg)
ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಇವತ್ತು ಹೈ-ವೋಲ್ಟೇಜ್ ಪಂದ್ಯ ನಡೆಯಲಿದೆ. 18ನೇ ಆವೃತ್ತಿಯಲ್ಲಿ ಇಲ್ಲಿಯವರೆಗೆ ಸೋಲನ್ನೇ ಕಾಣದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎದುರಿಸಲಿದೆ. ತವರ ಅಂಗಳದಲ್ಲಿನ ಆರ್ಸಿಬಿಯ ರೋಚಕ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳು ಎಕ್ಸೈಟ್ ಆಗಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ್ ರಾಯಲ್ಸ್ಗೆ ಮಾಸ್ಟರ್ ಸ್ಟ್ರೋಕ್ ಕೊಟ್ಟಿದ್ದೇ ಕನ್ನಡಿಗ.. ಮತ್ತೆ ಪ್ರಸಿದ್ಧ್ ಕೃಷ್ಣ ಶೈನ್..!
ಅಂದ್ಹಾಗೆ ಇಂದು ನಡೆಯುವ ಕದನ ಕೇವಲ ಆರ್ಸಿಬಿ ಹಾಗೂ ಡೆಲ್ಲಿ ಕಾಳಗ ಮಾತ್ರವಲ್ಲ. ಆರ್ಸಿಬಿ ವರ್ಸಸ್ ಮಾಜಿ ಆರ್ಸಿಬಿಯನ್ಸ್ ನಡುವಿನ ಮಹಾ ಕಾಳಗ. ಕೆ.ಎಲ್.ರಾಹುಲ್, ಫಾಫ್ ಡುಪ್ಲೆಸಿ, ವೇಗಿ ಮಿಚೆಲ್ ಸ್ಟಾರ್ಕ್, ಕರುಣ್ ನಾಯರ್ ಇವರೆಲ್ಲರೂ ಆರ್ಸಿಬಿಯ ಮಾಜಿ ಪ್ಲೇಯರ್ಗಳೇ. ಡೆಲ್ಲಿ ತಂಡದ ಬಲವಾಗಿರೋ ಇವ್ರಿಗೆ ಚಿನ್ನಸ್ವಾಮಿ ಮೈದಾನದ ಪಿಚ್ ಹಾಗೂ ಇಲ್ಲಿನ ಪ್ಲೇಯಿಂಗ್ ಕಂಡಿಷನ್ಸ್ ಬಗ್ಗೆ ಚೆನ್ನಾಗಿ ಅರಿವಿದೆ. ಈ ತ್ರಿಮೂರ್ತಿಗಳ ಆಟಕ್ಕೆ ಕಡಿವಾಣ ಹಾಕಲು ಚಕ್ರವ್ಯೂಹ ರಚಿಸಬೇಕಿದೆ.
ಇನ್ನೊಂದು ವಿಚಾರ ಅಂದ್ರೆ ಕೆಎಲ್ ರಾಹುಲ್ಗೆ ಚಿನ್ನಸ್ವಾಮಿ ಸ್ಟೇಡಿಯಂ ತುಂಬಾನೇ ಪರಿಚಿತ. ಮೈದಾನದ ಕಂಡೀಷನ್ಸ್ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಇನ್ನು ಕರ್ನಾಟಕ ಮತ್ತೊಬ್ಬ ಯುವ ಆಟಗಾರ ಮನ್ವಿತ್ ಕುಮಾರ್ ಎಲ್ ಕೂಡ ಡೆಲ್ಲಿ ಕ್ಯಾಪಿಟಲ್ಸ್ನಲ್ಲಿದ್ದು, ಸ್ಥಾನಕ್ಕಾಗಿ ಕಾಯುತ್ತಿದ್ದಾರೆ.
ಇದನ್ನೂ ಓದಿ: ದತ್ತು ಪುತ್ರ vs ಮನೆ ಮಗ.. ಚಿನ್ನಸ್ವಾಮಿಯಲ್ಲಿ ಇವತ್ತು ಆರ್ಸಿಬಿ ಸ್ಪೆಷಲ್ ಪ್ಲಾನ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್