ಪ್ಲೇ ಆಫ್​ಗಾಗಿ 6 ತಂಡಗಳ ನಡುವೆ ಮಹಾಯುದ್ಧ.. RCB, ಗುಜರಾತ್​ಗೆ ಬಿಗ್ ಟೆನ್ಷನ್ ಶುರು..!

author-image
Bheemappa
Updated On
ಪ್ಲೇ ಆಫ್​ಗಾಗಿ 6 ತಂಡಗಳ ನಡುವೆ ಮಹಾಯುದ್ಧ.. RCB, ಗುಜರಾತ್​ಗೆ ಬಿಗ್ ಟೆನ್ಷನ್ ಶುರು..!
Advertisment
  • 2ನೇ ಸ್ಥಾನದಲ್ಲಿರುವ ಆರ್​ಸಿಬಿ ತಂಡದ ಸ್ಥಾನ ಸೇಫ್ ಆಗಿದೆಯಾ?
  • ಐಪಿಎಲ್​ನ ಮುಂದಿನ ಪಂದ್ಯಗಳಲ್ಲಿ ಪಂಜಾಬ್​ ಕಿಂಗ್ಸ್​ಗೆ ಕಷ್ಟ ಕಷ್ಟ
  • ಈ ಟೀಮ್​ಗಳು ನೋ ಟೆನ್ಶನ್​, ಆದರೆ ಟಾಪ್​-2ಗಾಗಿ ಪೈಪೋಟಿ

ಐಪಿಎಲ್ ಮರು ಆರಂಭಕ್ಕೆ ಕೌಂಟ್​ಡೌನ್ ಶುರುವಾಗಿದೆ. ರಿಸ್ಟಾರ್ಟ್​​ನ ಬಳಿಕ ಐಪಿಎಲ್​​ನ ಮಹಾ ಯುದ್ಧ ಇನ್ನಷ್ಟು ರೋಚಕವಾಗಲಿದೆ. ಇರೋದು 4 ಸ್ಥಾನ, ಅದಕ್ಕಾಗಿ 6 ತಂಡಗಳ ನಡುವೆ ಮಹಾಯುದ್ಧ ನಡೆಯಲಿದೆ. ಈ ಮಹಾಯುದ್ಧದಲ್ಲಿ ಸೋತವರಿಗೆ ಸಂಕಷ್ಟ ಎದುರಾಗಲಿದೆ. ಗೆದ್ದವರಿಗೆ ಪ್ಲೇ ಆಫ್​​​ ಭಾಗ್ಯ ಸಿಗಲಿದೆ.

ಐಪಿಎಲ್​​ನ ಫಸ್ಟ್ ಹಾಫ್​​​​​​​​ 57 ಪಂದ್ಯಗಳ ಆಟ ಒಂದು ಲೆಕ್ಕ, ಐಪಿಎಲ್ ಮರು ಆರಂಭದ ಪಂದ್ಯಗಳದ್ದೇ ಮತ್ತೊಂದು ಲೆಕ್ಕ. ಯಾಕಂದ್ರೆ, ಮೇ.17ರಿಂದ ಆರಂಭವಾಗಲಿರುವ ಉಳಿದ 13 ಲೀಗ್​ ಪಂದ್ಯಗಳೇ ಅಸಲಿ ಕಿಕ್ ನೀಡಲಿದೆ. ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಯಾರು ಪ್ಲೇ ಆಫ್​ಗೆ ಹೋಗ್ತಾರೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ನೀಡಲಿವೆ.

publive-image

ಗುಜರಾತ್, ಆರ್​ಸಿಬಿ ಪ್ಲೇ ಆಫ್ ಬ್ಯಾಟಲ್​..!

ಸೀಸನ್​​-18ರ ಐಪಿಎಲ್​ನ ಮೋಸ್ಟ್​ ಕನ್ಸಿಸ್ಟೆಂಟ್​ ಆ್ಯಂಡ್ ಬ್ಯಾಲೆನ್ಸಿಂಗ್ ಟೀಮ್ ಅಂದ್ರೆ, ಶುಭ್​ಮನ್ ಗಿಲ್ ನೇತೃತ್ವದ ಗುಜರಾತ್ ಟೈಟನ್ಸ್​. ಸದ್ಯ 11 ಪಂದ್ಯಗಳ ಪೈಕಿ 8ರಲ್ಲಿ ಗೆದ್ದಿರುವ ಟೈಟನ್ಸ್​, 2ನೇ ಹಂತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​, ಲಕ್ನೋ ಸೂಪರ್ ಜೈಂಟ್ಸ್​ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ಗಳ ಎದುರು ಸೆಣಸಾಡಲಿದೆ. ಈ ಪೈಕಿ ಒಂದು ಪಂದ್ಯ ಗೆದ್ದರೆ, ಪ್ಲೇ ಆಫ್ ಸ್ಥಾನ ಗ್ಯಾರಂಟಿ. ಆದ್ರೆ, ಟಾಪ್​​-2ನಲ್ಲಿ ಉಳಿಯಬೇಕಾದ್ರೆ. 2 ಅಥವಾ 3 ಪಂದ್ಯಗಳಲ್ಲಿ ಗೆಲ್ಲಬೇಕು.

ಎರಡನೇ ಸ್ಥಾನದಲ್ಲಿರುವ ಆರ್​ಸಿಬಿ ಕೂಡ ಫುಲ್​ ಸೇಫ್​ ಆಗಿದೆ. ಪ್ಲೇ ಆಫ್​​ ಸ್ಥಾನವನ್ನ ಬಹು ಬೇಗನೆ ಖಚಿತಪಡಿಸಿಕೊಳ್ಳುವ ಅವಕಾಶ ಆರ್​ಸಿಬಿಗಿದೆ. ಇದೇ ಮೇ 17ರಂದು ಬೆಂಗಳೂರಿನಲ್ಲಿ ನಡೆಯೋ ಪಂದ್ಯದಲ್ಲಿ ಗೆದ್ದರೆ ಸಾಕು. ಪ್ಲೇ ಆಫ್ ಸ್ಥಾನ ಕನ್ಫರ್ಮ್​. ಆದ್ರೆ, ಗುಜರಾತ್​, ಆರ್​​ಸಿಬಿ ಟಾರ್ಗೆಟ್​ ಟಾಪ್​ 2 ಸ್ಥಾನಗಳಾಗಿವೆ. ಹೀಗಾಗಿ ಪ್ಲೇ ಆಫ್ ಬ್ಯಾಟಲ್​ನಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಆಟ ಆಡಲಿವೆ.

ಪಂಜಾಬ್​ ಕಿಂಗ್ಸ್​ಗೆ​ ಅಗ್ನಿಪರೀಕ್ಷೆ.. 2 ತಂಡಗಳೇ ಥ್ರೆಟ್!

ಪಂಜಾಬ್ ಕಿಂಗ್ಸ್​ ಫಸ್ಟ್ ಹಾಫ್​ನಲ್ಲಿ ಸಾಲಿಡ್ ಆಟವಾಡಿದೆ. 11 ಪಂದ್ಯಗಳ ಪೈಕಿ 7 ಗೆಲುವು, ಒಂದು ಡ್ರಾ ಸಾಧಿಸಿ 15 ಅಂಕ ಪಡೆದಿದೆ. ಡೆಲ್ಲಿ ಎದುರು ಗೆಲ್ಲೋ ಹಂಬಲದಲ್ಲಿದ್ದ ಪಂಜಾಬ್​ಗೆ ಪಂದ್ಯದ ರದ್ದಾಗಿದ್ದು, ಪ್ಲೇ ಆಫ್ ಲೆಕ್ಕಾಚಾರವನ್ನೇ ಬದಲಿಸಿಬಿಡ್ತು. ಇದೀಗ ಪಂಜಾಬ್, ಪ್ಲೇ ಆಫ್ ಪ್ರವೇಶಿಸ ಬೇಕಂದ್ರೆ ಅಂಕಪಟ್ಟಿಯಲ್ಲಿ ತನಗಿಂತ ಕೆಳಗಿರೋ ಮುಂಬೈ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಪಂದ್ಯ ಗೆಲ್ಲಬೇಕಿದೆ. ಈ ಎರಡು ತಂಡಗಳ ಎದುರು ಪಂಜಾಬ್ ಮುಗ್ಗರಿಸಿದ್ರೆ, ಪ್ಲೇ ಆಫ್ ಎಂಟ್ರಿ ಕಷ್ಟ ಕಷ್ಟ.

ಡು ಆರ್ ಡೈ.. ಮುಂಬೈಗೆ ಕೈ ಹಿಡಿಯುತ್ತಾ ಅದೃಷ್ಟ..?

ಮುಂಬೈ ಇಂಡಿಯನ್ಸ್​ಗೆ ಡು ಆರ್ ಡೈ ಸ್ಥಿತಿ. 12 ಪಂದ್ಯದಲ್ಲಿ 7 ಗೆದ್ದಿರುವ ಪಾಂಡ್ಯ ಪಡೆ, ಮುಂದಿನ ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್​ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಎದುರು ಹೋರಾಟ ನಡೆಸಲಿದೆ. ಈ ಎರಡೂ ತಂಡಗಳ ಎದುರು ಗೆದ್ದರೇ ಮಾತ್ರ ಮುಂಬೈ ಇಂಡಿಯನ್ಸ್ ತಂಡ ಪ್ಲೇ ಆಫ್​ಗೆ ಎಂಟ್ರಿ ನೀಡಲಿದೆ. ಇಲ್ಲ ಇತರೆ ತಂಡಗಳ ಸೋಲು-ಗೆಲುವಿನ ಮೇಲೆ ಮುಂಬೈ ಇಂಡಿಯನ್ಸ್​ ಭವಿಷ್ಯ ನಿಂತಿರಲಿದೆ.

ಇದನ್ನೂ ಓದಿ:RCBಗೆ ಗುಡ್​ನ್ಯೂಸ್​.. ಬೆಂಗಳೂರು ಟೀಮ್​ಗೆ ಬಂತು ಫುಲ್​ ‘ಜೋಶ್’

publive-image

IPL ಪುನಾರಂಭ.. ಬದಲಾಗುತ್ತಾ ಡೆಲ್ಲಿ ಲಕ್..?

ಪಂಜಾಬ್ ವಿರುದ್ಧದ ಪಂದ್ಯ ಅರ್ಧಕ್ಕೆ ನಿಂತಿದ್ರಿಂದ ಡೆಲ್ಲಿ ಕ್ಯಾಪಿಟಲ್ಸ್​ಗಂತೂ ಜಾಕ್​ಪಾಟ್​​ ಹೊಡೆದಿದೆ. ಪಂಜಾಬ್​ನ 10 ಓವರ್​ ಬ್ಯಾಟಿಂಗ್​ ನೋಡಿಯೇ ಡೆಲ್ಲಿ ಬೆಚ್ಚಿತ್ತು. ಇದೀಗ ಆ ಪಂದ್ಯ ಮರು ಆಯೋಜನೆ ಆಗಿದೆ. ಡೆಲ್ಲಿ ತಂಡದ ಮುಂದೆ ಗುಜರಾತ್, ಪಂಜಾಬ್, ಮುಂಬೈ ಸವಾಲಿದೆ. ಸವಾಲನ್ನ ಮೆಟ್ಟಿ ನಿಂತು ಹ್ಯಾಟ್ರಿಕ್ ಗೆಲುವು ದಾಖಲಿಸಿದ್ರೆ, ಪ್ಲೇಆಫ್ ಎಂಟ್ರಿ ಸುಲಭವಾಗಲಿದೆ. ಇಲ್ಲ ಮುಂಬೈ ಇಂಡಿಯನ್ಸ್​ ತಂಡದ ಸೋಲು, ಗೆಲುವುಗಳೇ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಪ್ಲೇ ಆಫ್​ ಭವಿಷ್ಯ ನಿರ್ಣಯಿಸಲಿದೆ.

ಕೊಲ್ಕತ್ತಾ, ಲಕ್ನೋ ತಂಡಗಳು ರೇಸ್​​ನಲ್ಲಿದ್ರೂ, ಅದೃಷ್ಟ ಸಾಥ್​ ನೀಡಬೇಕಿದೆ. ಒಳ್ಳೆ ಪರ್ಫಾಮೆನ್ಸ್​ ನೀಡಿ ಗೆದ್ರೂ ಉಳಿದ ತಂಡಗಳ ಸೋಲು ಗೆಲುವು, ರನ್​ರೇಟ್​​ ಪ್ಲೇ ಆಫ್​ ಎಂಟ್ರಿಯನ್ನ ನಿರ್ಧರಿಸಲಿವೆ. ಹೀಗಾಗಿ ಟಿ20ಯ ಅದೃಷ್ಟದಾಟದಲ್ಲಿ ಯಾರು ಮೇಲೇಳ್ತಾರೆ.? ಯಾರು ಪಾತಾಳಕ್ಕೆ ಕುಸಿಯುತ್ತಾರೆ.? ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment