/newsfirstlive-kannada/media/post_attachments/wp-content/uploads/2025/04/RCB_TEAM-1.jpg)
ಭಾರತ ಹಾಗೂ ಪಾಕಿಸ್ತಾನದ ನಡುವಿನ ತೀವ್ರವಾದ ಘರ್ಷಣೆಯ ಬಿಸಿ ಪ್ರತಿಷ್ಠಿತ ಐಪಿಎಲ್ ಟೂರ್ನಿಗೂ ತಟ್ಟಿತ್ತು. ಇದರಿಂದ ಪಂದ್ಯಗಳನ್ನು ಸ್ಥಗಿತಗೊಳಿಸಲಾಗಿತ್ತು. ಸದ್ಯ ಇದೀಗ ಗುಡ್ನ್ಯೂಸ್ ಏನೆಂದರೆ ಐಪಿಎಲ್ ಪಂದ್ಯಗಳು ಪುನರಾರಂಭ ಆಗಲಿದ್ದು ಮೇ 30ರವರೆಗೆ ವಿಸ್ತರಿಸಲು ಬಿಸಿಸಿಐ ಯೋಜಿಸಿದೆ.
ಒಂದು ವಾರದವರೆಗೆ ಸ್ಥಗಿತಗೊಂಡಿದ್ದ ಐಪಿಎಲ್ ಪಂದ್ಯಗಳನ್ನು ಮತ್ತೆ ಆರಂಭಿಸಲಾಗುವುದು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೇಳಿದೆ. ಲೀಗ ಪಂದ್ಯಗಳು ಸೇರಿದಂತೆ ಮುಂದಿನ ಮ್ಯಾಚ್ಗಳನ್ನು ನಡೆಸುವ ಕುರಿತು ಮಾಹಿತಿ ಹೊರ ಬಿದ್ದಿದೆ. ಮೇ 16 ರಿಂದ ಐಪಿಎಲ್ ಪಂದ್ಯಗಳು ನಡೆಯಲಿದ್ದು ಮೇ 30ರವರೆಗೆ ದಿನಾಂಕ ವಿಸ್ತರಣೆ ಮಾಡಲಾಗಿದೆ.
ಇದನ್ನೂ ಓದಿ: ತಂದೆ, ತಾಯಿಗೆ ಒಬ್ಬನೇ ಒಬ್ಬ ಮಗ.. ವಾಯುನೆಲೆಯಲ್ಲಿ ಹುತಾತ್ಮನಾದ ಸುರೇಂದ್ರ ಕುಮಾರ್
ಮೇ 16 ರಂದು ಐಪಿಎಲ್ ಪುನರಾರಂಭವಾಗುವ ಕಾರಣ ಪಂಜಾಬ್ ಕಿಂಗ್ಸ್ ತಂಡವನ್ನು ಹೊರತು ಪಡಿಸಿ ಉಳಿದ ಎಲ್ಲ ತಂಡಗಳು ತಮ್ಮ ತಮ್ಮ ಸ್ಥಳಗಳಿಗೆ ಮೇ 13ರರೊಳಗೆ ಸೇರಿಕೊಳ್ಳಬೇಕು. ಏಕೆಂದರೆ ಪಂದ್ಯಗಳು ಆರಂಭವಾಗುವುದರಿಂದ ಫ್ರಾಂಚೈಸಿ ಜೊತೆ ಸೇರಿ ಎಲ್ಲ ಸಕಲ ಸಿದ್ಧತೆಯನ್ನು ಆಟಗಾರರು ಮಾಡಿಕೊಳ್ಳಬೇಕಾಗುತ್ತದೆ ಎಂದು ತಿಳಿಸಲಾಗಿದೆ.
ಈ ಐಪಿಎಲ್ ಟೂರ್ನಿಯಲ್ಲಿ ಇನ್ನು 16 ಪಂದ್ಯಗಳು ಉಳಿದುಕೊಂಡಿವೆ. ಇದರಲ್ಲಿ ಪ್ಲೇ ಆಫ್ ಹಾಗೂ ಫೈನಲ್ ಮ್ಯಾಚ್ ಕೂಡ ಸೇರಿದ್ದರಿಂದ ಈ ಟೂರ್ನಿ ಪೂರ್ಣಗೊಳಿಸಲು ಕನಿಷ್ಠ ಎರಡು ವಾರಗಳು ಬೇಕಾಗುತ್ತದೆ. ಹೀಗಾಗಿ ಡಬಲ್ ಹೆಡ್ಡರ್ ಪಂದ್ಯಗಳನ್ನು ಹೆಚ್ಚು ಆಡಿಸಲು ಬಿಸಿಸಿಐ ಪ್ಲಾನ್ ಮಾಡಿದೆ ಎಂದು ಹೇಳಲಾಗುತ್ತಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ